“ದೇಶಕ್ಕೆ ಪ್ರಧಾನಿಗಳ ಸಂದೇಶ ಮತ್ತು ಪ್ರಧಾನಿಗಳಿಗೆ ರೈತರ ಸಂದೇಶ”

ವೇದರಾಜ ಎನ್‌ ಕೆ

ತ್ರಿಪುರಾದಲ್ಲಿ ಪತ್ರಕರ್ತರ ಮೇಲೆ ದಾಳಿ, ಅಹಮದಾಬಾದಿನಲ್ಲಿ ಮಾಂಸಾಹಾರದ ಆಹಾರ ಸ್ಟಾಲುಗಳ ಮೇಲೆ ನಿಷೇಧ, ಮಧ್ಯಪ್ರದೇಶದ ಮುಖ್ಯಮಂತ್ರಿಗಳ ಗೋವರ್ಥಶಾಸ್ತ್ರ, ಇಡಿ-ಸಿಬಿಐ ಸುಗ್ರೀವಾಜ್ಞೆ ದೇಶದ ಕಾರ್ಟೂನಿಸ್ಟರುಗಳ ಗಮನ ಸೆಳೆಯುತ್ತಿದ್ದಾಗ ಪ್ರಧಾನಿಗಳ ಇನ್ನೊಂದು ‘ಮಿಂಚಿನ ಪ್ರಹಾರ’ ಮತ್ತೆ ಎಲ್ಲರ ಗಮನವನ್ನೂ ಒಂದು ವರ್ಷ ಪೂರೈಸುತ್ತಿರುವ ರೈತರ ಹೋರಾಟದತ್ತ ಕೇಂದ್ರೀಕರಿಸಿತು. ಈ ಕುರಿತ ವ್ಯಂಗ್ಯಚಿತ್ರಗಳತ್ತ ಒಂದು ನೋಟ

“ನಾನಿಂದು ತಮಗೆ, ಮತ್ತು ಇಡೀ ದೇಶಕ್ಕೆ, ನಾವು ಮೂರೂ ಕೃಷಿ ಕಾನೂನುಗಳನ್ನು ಹಿಂದಕ್ಕೆ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ ಎಂದು ತಿಳಿಸಲು ಬಂದಿದ್ದೇನೆ. ಈ ತಿಂಗಳ ಅಂತ್ಯದಲ್ಲಿ ಶುರುವಾಗುತ್ತಿರುವ ಸಂಸತ್ತಿನ ಅಧಿವೇಶನದಲ್ಲಿ ಈ ಮೂರೂ ಕೃಷಿ ಕಾನೂನುಗಳನ್ನು ರದ್ದು ಮಾಡುವ ಸಂವಿಧಾನಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ”

– ಪ್ರಧಾನ ಮಂತ್ರಿಗಳು ನವಂಬರ್‍ 19ರ ಬೆಳಿಗ್ಯೆ 9 ಗಂಟೆಗೆ ಇನ್ನೊಂದು ‘ಮಿಂಚಿನ ಪ್ರಹಾರ’ (ಸರ್ಜಿಕಲ್ ಸ್ಟ್ರೈಕ್‍)  ನಡೆಸಲು ಬಂದಂತ್ತಿತ್ತು.

“ನಾನು ಇದನ್ನು ಹಿಂದಕ್ಕೆ ತಗೊಳ್ಳುತ್ತೇನೆ”

(ಅಲೋಕ್‍ ನಿರಂತರ್, ಫೇಸ್‍ ಬುಕ್)

ಅವರಿಗೆ ಇದು ಮಿಂಚಿನ ಪ್ರಹಾರ ಎಂದು ಖಾತ್ರಿಯಾಗಿತ್ತೋ ಇಲ್ಲವೋ, ಅವರ ಮಡಿಲ ಮಾಧ್ತಮಗಳಿಗಂತೂ ಇದು ಸರ್ಜಿಕಲ್‍ ಸ್ಟ್ರೈಕ್‍ ಅಲ್ಲದಿದ್ದರೂ ಇನ್ನೊಂದು ಮಾಸ್ಟರ್‍ ಸ್ಟ್ರೋಕ್ ಎಂದಂತೂ ಅನಿಸಿರಬೇಕು ಎನ್ನುತ್ತಾರೆ ಇದೇ ವ್ಯಂಗ್ಯಚಿತ್ರಕಾರರು-

(ವರ್ಷದ ಹಿಂದೆ) ಕೃಷಿಕಾಯ್ದೆಗಳು ಬಂದೇ ಬಿಟ್ಟಿದೆ! ಮಾಸ್ಟರ್ ಸ್ಟ್ರೋಕ್!

(ಇಂದು) ಕೃಷಿ ಕಾಯ್ದೆಗಳು ಹೋಗೇ ಬಿಟ್ಟಿವೆ! ಮಾಸ್ಟರ್ ಸ್ಟ್ರೋಕ್!!

(ಅಲೋಕ್‍ ನಿರಂತರ್, ಫೇಸ್‍ ಬುಕ್)

ಹೌದು, ಈ ನಡುವೆ  ಕಳೆದ ಒಂದು  ವರ್ಷದಲ್ಲಿ ಈ ಮಾಧ್ಯಮಗಳು ಈ ರೈತರ ಬಗ್ಗೆ ಏನೇನೆಲ್ಲ ಹೇಳಿರಲಿಲ್ಲ?

ಅವರು ರೈತರೇ ಅಲ್ಲ, ರಾಷ್ಟ್ರ-ವಿರೋಧಿಗಳು. ಖಾಲಿಸ್ತಾನಿಗಳು, ಕ್ರಿಮಿನಲ್‍ಗಳು, ಭಯೋತ್ಪಾದಕರು ಇತ್ಯಾದಿ ಇತ್ಯಾದಿ.

ಬಾಯಿ ಮುಚ್ಚು! ಸರಕಾರ ಕೃಷಿ ಕಾಯ್ದೆಗಳನ್ನು ರದ್ದು ಮಾಡಿದೆ!!

(ಮಂಜುಲ್, ನ್ಯೂಸ್‍ 9)

ಒಂದು ವರ್ಷದ ಹಿಂದೆ  ಈ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಿ ಎಂಬ ಕೋರಿಕೆಗಳನ್ನು ಕಿವಿಗೆ ಹಾಕಿಕೊಳ್ಳದಿದ್ದಾಗ, ದಿಲ್ಲಿಗೇ ಬಂದು ತಾವು ಆರಿಸಿ ಕಳಿಸಿದವರ ಮುಂದೆಯೇ ತಮ್ಮ ಒತ್ತಾಯವನ್ನು ಮುಂದಿಡಲು ಬಂದಾಗ, ಪೋಲೀಸ್‍, ಜಲ ಫಿರಂಗಿಗಳ ಮೂಲಕ  ತಮ್ಮದೇ ರಾಜಧಾನಿಯನ್ನು ಪ್ರವೇಶಿಸದಂತೆ ಮಾಡಿದಾಗ ರೈತರು ದಿಲ್ಲಿ ಗಡಿಗಳಲ್ಲೇ ಕೂತು,ಕೃಷಿ ಕಾಯ್ದೆಗಳನ್ನು ವಾಪಾಸು ಪಡೆಯದೆ ತಮ್ಮ ಊರುಗಳಿಗೆ ಹೋಗುವುದಿಲ್ಲ ಎಂದ ರೈತರು   ಲಾಠಿ ಬೀಸಿದವರಿಗೇ ಅನ್ನ ಕೊಟ್ಟರು.

                                      ಆಗ                                   28 ನವಂಬರ್ ’20 “ ಹಸಿದಿರಬೇಕು, ತಿನ್ನು ಮಗಾ!

                             ಈಗ                                             19 ನವಂಬರ್ 2021           ಜೈಕಿಸಾನ್

(ದಿನೇಶ್‍ ಕುಕ್ಕುಜಡ್ಕ, ಫೇಸ್‍ ಬುಕ್)                 (ಸತೀಶ ಆಚಾರ್ಯ, ಫೇಸ್‍ ಬುಕ್)

ಮಾಧ್ಯಮದವರಂತೆ, ಆಳುವ ಮಂದಿಗಳು ಕೂಡ  ದಿಲ್ಲಿ ಗಡಿಗಳಲ್ಲಿ ಕೂತವರು ಭಯೋತ್ಪಾದಕರು, ಅರಾಜಕತಾವಾದಿಗಳು, ಪಾಕಿಸ್ತಾನ ಬೆಂಬಲಿಗರು, ರಾಷ್ಟ್ರ-ವಿರೋಧಿಗಳು, ಕಾಂಗ್ರೆಸಿನ ಬೆಂಬಲ ಪಡೆದವರು, ಆಸೆಬುರುಕರು ಎಂದೆಲ್ಲ ಹೀಯಾಳಿಸಿದರು. ‘ಆಂದೋಲನಜೀವಿ ‘ ಎಂಬ ಹೊಸದೊಂದು ಪದವನ್ನೇ ಸೃಷ್ಟಿಸಿದ ಪ್ರಧಾನ ಮಂತ್ರಿಗಳೇ ಈಗ ಈ ನವಂಬರ್‍ 9ರಂದು ……………

ಬಹುಶಃ ನನ್ನ ತಪಸ್ಸಿನಲ್ಲೇ ಏನೋ ಕೊರತೆಯಿದ್ದಿರಬೇಕು “

(ಮಂಜುಲ್, ವೈಬ್ಸ್ ಇಂಡಿಯ)

“ನಾನು ಇಂದು ದೇಶವಾಸಿಗಳ ಕ್ಷಮೆ ಬೇಡುತ್ತ, ನಿಜವಾದ ಮನದಿಂದ ಮತ್ತು ಪವಿತ್ರ ಹೃದಯದಿಂದ ಹೇಳಬಯಸುವುದೇನೆಂದರೆ, ಬಹುಶಃ ನಮ್ಮ ತಪಸ್ಸಿನಲ್ಲಿಯೇ ಏನೋ ಕೊರತೆಯಿದ್ದಿರಬೇಕು. ಇದರಿಂದಾಗಿ ದೀಪದ ಪ್ರಕಾಶದಂತಿರುವ ಸತ್ಯವನ್ನು ನಾವು ಕೆಲವು ರೈತ ಬಂಧುಗಳಿಗೆ ಮನದಟ್ಟುಲಾರದಾದೆವು” ಎಂದೇ ಪ್ರಧಾನಿಗಳು ನವಂಬರ್‍ 19ರ ‘ಮಾಸ್ಟರ್‍ ಸ್ಟ್ರೋಕ’ನ್ನು ಆರಂಭಿಸಿದ್ದರು.

ಪ್ರಖ್ಯಾತ ಪತ್ರಕರ್ತ ಪಿ.ಸಾಯಿನಾಥ್‍  ನಿನ್ನೆ-ಮೊನ್ನೆಯ  “ಖಾಲಿಸ್ತಾನಿಗಳು, ರಾಷ್ಟ್ರ-ವಿರೋಧಿಗಳು, ರೈತರೆಂದು ತಿರುಗಾಡುತ್ತಿರುವ ಬೋಗಸ್‍ ಕಾರ್ಯಕರ್ತರು ಈಗ ಮನದಟ್ಟು ಮಾಡಿಕೊಳ್ಳಲು ನಿರಾಕರಿಸಿದ ‘ರೈತರ ಒಂದು ವಿಭಾಗ’ದ ಮಟ್ಟಕ್ಕೆ ಬಡ್ತಿ ಪಡೆದರು. ಇವರು ಮನದಟ್ಟು ಮಾಡಿಕೊಳ್ಳಲು ನಿರಾಕರಿಸಿದರೇ? ಅವರಿಗೆ ಮನದಟ್ಟು ಮಾಡಲು ಬಳಸಿದ ವಿಧಾನಗಳಾದರೂ ಏನು? ತಮ್ಮ ಅಹವಾಲುಗಳನ್ನುವಿವರಿಸಲು ರಾಜಧಾನಿ ನಗರಕ್ಕೆ ಪ್ರವೇಶ ನಿರಾಕರಿಸುವ ಮೂಲಕವೇ? ಕಂದಕಗಳು, ಕಬ್ಬಿಣದ ಮುಳ್ಳು ಬೇಲಿಗಳನ್ನು ಒಡ್ಡಿ ಅವರನ್ನು ಅಡ್ಡಗಟ್ಟುವ ಮೂಲಕವೇ? ಜಲಫಿರಂಗಿಗಳಿಂದ ಬಾರಿಸುತ್ತಲೇ?…”  ಎಂದೆಲ್ಲ ಪ್ರಶ್ನಿಸಿದ್ದಾರೆ. ಪ್ರಧಾನ ಮಂತ್ರಿಗಳು ಈ ಅವಧಿಯಲ್ಲಿ ಕನಿಷ್ಟ ಏಳು ಬಾರಿ ವಿದೇಶ ಪ್ರವಾಸಕ್ಕೆ ಹೋಗಿ ಬಂದಿದ್ದಾರೆ. ಆದರೆ ಕೆಲವೇ ಕಿಲೋಮೀಟರುಗಳಷ್ಟು ದೂರದಲ್ಲಿ ದಿಲ್ಲಿ ಗಡಿಗಳಲ್ಲಿ ಕೂತಿರುವ ಸಾವಿರ-ಸಾವಿರ ರೈತರ ಬಳಿ ಹೋಗಿ ಮಾತಾಡಲು ಅವರಿಗೆ ಪುರುಸೊತ್ತೇ ಸಿಗಲಿಲ್ಲ. ಹೀಗೇನಾದರೂ ಹೋಗಿದ್ದರೆ ಅದನ್ನು ಕೃಷಿ ಕಾಯ್ದೆಗಳ ಒಳಿತಿನ ಬಗ್ಗೆ ಮನದಟ್ಟು ಮಾಡುವ ನೈಜ ಪ್ರಯತ್ನವೆನ್ನಬಹುದಾಗಿತ್ತು ಎನ್ನುತ್ತಾರೆ ಸಾಯಿನಾಥ್.

(ಸಾತ್ವಿಕ್‍ ಗಡೆ, ದಿ ಹಿಂದು)

ಬಹುಶ: ಸಿಂಘು, ಟಿಕ್ರಿ ಮತ್ತಿತರ ಯಾವುದೇ ಗಡಿ ಬಳಿಗೆ ಹೋಗಿದ್ದರೆ ತಮ್ಮ ಕಾನೂನುಗಳೇ ಸರಿಯಿಲ್ಲ ಎಂದು ಅವರಿಗೇ ರೈತರು ಮನದಟ್ಟ ಮಾಡಿಕೊಡುತ್ತಿದ್ದರೇನೋ!

***

ಪ್ರಧಾನಿಗಳು ಕ್ಷಮೆ  ಬೇಡಿರುವುದಾದರೂ ಯಾರಿಂದ? ಯಾತಕ್ಕಾಗಿ?

ಈ ಕ್ಷಮೆ ಈ ಹೋರಾಟದ ವೇಳೆಯಲ್ಲಿ ಸುಮಾರು 700 ರೈತರು ಪ್ರಾಣ ಕಳಕೊಂಡಿದ್ದಾರೆ ಎಂಬುದರ ಬಗ್ಗೆ ಅಲ್ಲ. ಆ ಬಗ್ಗೆ ಒಂದೂ ಮಾತಿಲ್ಲ ಈ ಮಾಸ್ಟರ್ ಸ್ಟ್ರೋಕ್ ನಲ್ಲಿ.

ವಾಸ್ತವವಾಗಿ ಅವರ ಕ್ಷಮೆ ಬೇಡಿರುವುದು ತಮ್ಮ ಕಾರ್ಪೊರೇಟ್‍ ಮಿತ್ರರಿಂದ, ಅವರ ನಿರೀಕ್ಷೆಗಳನ್ನು ಈಡೇರಿಸಲಾರದ್ದಕ್ಕೆ ಎಂದು ಒಬ್ಬ ವೀಕ್ಷಕರು ಟಿಪ್ಪಣಿ ಮಾಡಿದ್ದಾರೆ.

“ಸಾರಿ”                              ( ಸತೀಶ ಆಚಾರ್ಯ, ಫೇಸ್‍ಬುಕ್)

ಗೃಹಮಂತ್ರಿಗಳು ಹೀಗೆ  ಟ್ವೀಟ್‍ ಮಾಡಿದ್ದಾರೆ:

  • ಪ್ರಧಾನ ಮಂತ್ರಿಗಳು ತಮ್ಮ ಭಾಷಣದಲ್ಲಿ ಹೇಳಿರುವಂತೆ, ಭಾರತ ಸರಕಾರ ನಮ್ಮ ರೈತರ ಸೇವೆ ಮಾಡುತ್ತಲೇ ಇರುತ್ತದೆ ಮತ್ತು ಅವರಿಗೆ ಅವರ ಪರಿಶ್ರಮಗಳೆಲ್ಲದರಲ್ಲೂ ಸದಾ ಬೆಂಬಲ ನೀಡುತ್ತದೆ.

ಈ ಚಳುವಳಿಯ ವೇಳೆಯಲ್ಲಿ ಪ್ರಾಣ ಕಳಕೊಂಡ ರೈತರಲ್ಲಿ ಒಬ್ಬ  ಇನ್ನೊಬ್ಬನಿಗೆ “ನಿನ್ನ ಪರಿಶ್ರಮವೇನು?”
ನಿನ್ನಂತೆಯೇ…! ಸತ್ತು ಮಣ್ಣಾಗುವುದು, ಮಸಣದ ಹೂವು ಅರಳುವಂತೆ ಮಾಡುವುದು!”

(ನಲ ಪೊನ್ನಪ್ಪ, ಟ್ವಿಟರ್ ನಲ್ಲಿ)

***

ಇನ್ನು , ಪ್ರಧಾನ ಮಂತ್ರಿಗಳ “ಕ್ಷಮಾಪಣೆಗಳು…..

”2024ರ ಸಾರ್ವತ್ರಿಕ ಚುನಾವಣೆಗಳ ವರೆಗೆ ಮತ್ತು ನಂತರವೂ ನಮ್ಮ  ಚುನಾವಣಾ ಫಲಕ”

ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್

ಅದಿರಲಿ, ಈ ಮಾಸ್ಟರ್‍ ಸ್ಟ್ರೋಕ್ ನ ಅಗತ್ಯವಾದರೂ ಏಕೆ ಬಂತು? ಇತ್ತೀಚಿನ ವಿಧಾನಸಭಾ ಚುನಾವಣೆಗಳು ಮತ್ತು ಉಪಚುನಾವಣೆಗಳಲ್ಲಿ ಆಳುವ ಪಕ್ಷ ಅನುಭವಿಸಿದ ಸೋಲು ಮತ್ತು ಮುಂಬರುವ ವಿಧಾನಸಭಾ ಚುನಾವಣಾಗಳ ಬಗ್ಗೆ ಭಯವೇ  ಕಾರಣ ಎಂದು ಕೆಲವರು ಹೇಳಿದರೆ, ಅದು ಒಂದು ಕಾರಣವಷ್ಟೇ ಎಂದು ಇನ್ನು ಕೆಲವರು ಹೇಳುತ್ತಾರೆ.

            (ಕಿಶೋರ್ ಮೀನಾ)                                                                             (ಸುಭಾನಿ, ಡೆಕ್ಕನ್‍ ಕ್ರಾನಿಕಲ್)

ಅಥವ ತಮ್ಮ ಕಾನೂನುಗಳಲ್ಲೇ ಏನೋ ಕೊರತೆಯಿರಬಹುದು ಎಂದು ಕೊನೆಗೂ ಅವರಿಗೆ ಮನದಟ್ಟು ಮಾಡಿದ್ದರಿಂದ, ವಿಶೇಷವಾಗಿ ಪಂಜಾಬ್‍ ಮತ್ತು ಉತ್ತರಪ್ರದೇಶದ ಮತದಾರರು….ಇರಬಹುದೇ?

ಕೆಲವರಿಗೆ ಮನದಟ್ಟು ಮಾಡಿಕೊಡಲಾಗಲಿಲ್ಲ …ಮತ್ತು ಕೆಲವರು ನಮಗೇ ಮನದಟ್ಟು ಮಾಡಿಬಿಟ್ಟರೇ….”

(ರಾಜೇಶ್ ಕುಮಾರ್ ದುಬೆ)

***

ಇತ್ತ ಪ್ರಧಾನಿಗಳು  ಸದಾ ಅಜೇಯರು ಎಂದು ನಂಬಿಕೊಂಡು  ರೈತರ ಬಗ್ಗೆ ಏನೇಲ್ಲ ಪ್ರಚಾರ, ಅಪಪ್ರಚಾರ ನಡೆಸುತ್ತಿದ್ದವರಿಗೆ ಮುಜುಗರವಂತೂ ತಪ್ಪಿಲ್ಲವಂತೆ.

ಪಾಪ, ಈ ಮಂದಿ ತಮ್ಮ ಕ್ಷೇತ್ರಗಳಲ್ಲಿ ಯಾರ್ಯಾರಿಗೆ ಕೃಷಿ ಕಾಯ್ದೆಗಳ ಪ್ರಯೋಜನಗಳನ್ನು
ಮನದಟ್ಟು ಮಾಡಿಸಿದರೋ ಅವರಿಂದಲೇ ಅಪಮಾನಿತರಾಗ ಬೇಕಾಗಬಹುದು,”

“ …ಎಂತಾ ಪ್ರತಿಕ್ರಿಯೆ! ಈಗಂತೂ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ,
ಮುಂದೆ ಪದ್ಮಶ್ರೀ ಪಡೆದ ಮೇಡಂ ರೈತರ ಈ ವಿಜಯವನ್ನೂ ಭಿಕ್ಷೆಯಲ್ಲಿ ಸಿಕ್ಕಿದ್ದು ಎಂದು ಹೇಳಿ  ಸ್ವಲ್ಪ ಮಾನ ಉಳಿಸಬಹುದು!”

(ಶೇಖರ್ ಗುರೇರ, ಕಾರ್ಟೂನಿಸ್ಟ್ಸ್ ಕ್ಲಬ್‍ ಆಫ್‍ ಇಂಡಿಯ)

***

ಅದೇನೇ ಇರಲಿ, ಆದರೆ ರೈತರ ದೃಢ ಹೋರಾಟದ ಎದುರು ಈ  ಸರಕಾರವೂ ತಲೆ ಬಾಗಲೇ ಬೇಕಾಯಿತು ಎಂಬುದನ್ನು ಮರೆಮಾಚಲು ಸಾಧ್ಯವಾಗುತ್ತಿಲ್ಲ.

ದಿಲ್ಲಿಯಲ್ಲಿ ರೈತರು  (ಮಿಕಾ ಅಝೀಝ್, ಫೇಸ್‍ ಬುಕ್)

***

ತಮ್ಮ ನವಂಬರ್ 19ರ ‘ಮಾಸ್ಟರ್ ಸ್ಟ್ರೋಕ್ ‘ ಭಾಷಣದ ಕೊನೆಯಲ್ಲಿ ಪ್ರಧಾನಿಗಳು  “ಪ್ರತಿಭಟನೆ ನಡೆಸುತ್ತಿರುವ ಎಲ್ಲ ರೈತರೂ ಒಳ್ಳೇ ಬಾವನೆಯೊಂದಿಗೆ ಮನೆಗೆ ಹಿಂದಿರುಗಿ ಎಂದು ಮನವಿ ಮಾಡುತ್ತೇನೆ” ಎಂದರು.

ತಾನು ಏನೇ ಮಾಡಿದರೂ ಅದು ರೈತರ ಒಳಿತಿಗಾಗಿಯೇ ಎಂದು ಹೇಳಲೂ ಅವರು ಮರೆಯಲಿಲ್ಲ.

ಪಿ.ಮಹಮ್ಮದ್, ವಾರ್ತಾಭಾರತಿ

ಪ್ರಧಾನ ಮಂತ್ರಿಗಳೇ, ,,,ನಮಗೂ ರಸ್ತೆಗಳ ಮೇಲೆ ಕುಳಿತಿರಬೇಕೆಂದೇನೂ ಇಲ್ಲ. ನಾವೂ ಕೂಡ ಈ  ಸಮಸ್ಯೆಗಳನ್ನು ಬಗೆಹರಿಸಿಕೊಂಡು ಆದಷ್ಟು ಬೇಗನೇ ನಮ್ಮ ಮನೆಗಳು, ಕುಟುಂಬಗಳು ಮತ್ತು ಬೇಸಾಯಕ್ಕೆ ಮರಳಬೇಕೆಂದು ಬಯಸುತ್ತೇವೆ. ತಾವೂ ಕೂಡ ಅದನ್ನೇ ಬಯಸುತ್ತೀರಾದರೆ, ಸಂಯುಕ್ತ ಕಿಸಾನ್ ‍ಮೋರ್ಚಾದೊಂದಿಗೆ ಆರು ಪ್ರಶ್ನೆಗಳ ಮೇಲೆ ಮಾತುಕತೆಗಳನ್ನು ತಕ್ಷಣವೇ ಪುನರಾರಂಭಿಸಿ. ಅದುವರೆಗೆ, ಈ ಆಂದೋಲನ ಮುಂದುವರೆಯುತ್ತದೆ”  ಎಂದು “ದೇಶಕ್ಕೆ ಪ್ರಧಾನಿಗಳ ಸಂದೇಶ ಮತ್ತು ಪ್ರಧಾನಿಗಳಿಗೆ ರೈತರ ಸಂದೇಶ” ಎಂಬ ರೈತರ ಪರವಾಗಿ ಸಂಯುಕ್ತ ಕಿಸಾನ್‍ ಮೋರ್ಚಾ ತನ್ನ  ಬಹಿರಂಗ ಪತ್ರದಲ್ಲಿ ಉತ್ತರಿಸಿದೆ.

ಅಂತೂ, ರೈತರಿಂದ,  ಈ ವ್ಯಂಗ್ಯಚಿತ್ರಕಾರರು ಚಿತ್ರಿಸಿರುವಂತೆ, ಆಳುವವರ ಎಸ್‍.ಯು.ವಿ. ಚಕ್ರಕ್ಕೆ ಸಿಲುಕಿರುವ
ಪ್ರಜಾಪ್ರಭುತ್ವಕ್ಕೆ ಒಂದು ಲಿಫ್ಟ್ ಸಿಕ್ಕಿದೆ!                                       ಇಂಕ್ವಿಲಾಬ್ ಜಿಂದಾಬಾದ್ ! ?

ಸಂದೀಪ ಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ                                 ಆರ್, ಪ್ರಸಾದ್, ಇಕನಾಮಿಕ್‍ ಟೈಮ್ಸ್

Donate Janashakthi Media

Leave a Reply

Your email address will not be published. Required fields are marked *