ನವದೆಹಲಿ: ಭಾರತ ದೇಶದಲ್ಲಿ 33 ಲಕ್ಷಕ್ಕೂ ಹೆಚ್ಚಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆನ್ನುವ ಆತಂಕಕಾರಿ ವಿಷಯವ ಬಹಿರಂಗಗೊಂಡಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಸಲ್ಲಿಸಲಾಗಿದ್ದ ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯೆ ನೀಡಲಾಗಿದೆ.
ಮಕ್ಕಳು ಅಪೌಷ್ಟಿಕತೆಯ ಪಟ್ಟಿಯಲ್ಲಿ ಮಹಾರಾಷ್ಟ್ರ, ಬಿಹಾರ ಮತ್ತು ಗುಜರಾತ್ ಅಗ್ರಸ್ಥಾನದಲ್ಲಿವೆ. ದೇಶದಲ್ಲಿ 33 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು ಅವರಲ್ಲಿ ಅರ್ಧದಷ್ಟು ಮಕ್ಕಳು ತೀವ್ರ ಅಪೌಷ್ಠಿಕತೆಯಿಂದ ಬಳುತ್ತಿದ್ದಾರೆ.
ಇದನ್ನು ಓದಿ: ಹೊಸ ಶಿಕ್ಷಣ ನೀತಿ : ಅಂಗನವಾಡಿಗಳ ಪಾಲಿನ ನೇಣುಗಂಬ
ನವೆಂಬರ್ 2020 ಮತ್ತು ಅಕ್ಟೋಬರ್ 14, 2021 ರ ನಡುವೆ ತೀವ್ರ ಅಪೌಷ್ಟಿಕತೆ (ಎಸ್‌ಎಎಂ) ಮಕ್ಕಳ ಸಂಖ್ಯೆಯಲ್ಲಿ 91 ಪ್ರತಿಶತದಷ್ಟು ಏರಿಕೆ ಕಂಡುಬಂದಿದೆ. ಅಂದರೆ 9,27,606 (9.27 ಲಕ್ಷ) ದಿಂದ ಈಗ 17.76 ಲಕ್ಷಕ್ಕೆ ಏರಿಕೆಯಾಗಿದೆ.
ಸಚಿವಾಲಯದ ಪ್ರಕಾರ, ಅಕ್ಟೋಬರ್ 14 ರ ಹೊತ್ತಿಗೆ ದೇಶದಲ್ಲಿ 17,76,902 ತೀವ್ರ ಅಪೌಷ್ಟಿಕ ಮಕ್ಕಳು ಮತ್ತು 15,46,420 ಮಧ್ಯಮ ತೀವ್ರ ಅಪೌಷ್ಟಿಕತೆಯಿಂದ (ಎಂಎಎಂ) ಮಕ್ಕಳು ಇದ್ದಾರೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಪೌಷ್ಟಿಕ ಮಕ್ಕಳ ಸಂಖ್ಯೆ 6,16,772 ರಷ್ಟಿದ್ದು, ನಂತರದ ಸ್ಥಾನದಲ್ಲಿ ಬಿಹಾರ (4,75,824) ಮತ್ತು ನಂತರ ಗುಜರಾತ್ (3,20,465) ಇದೆ.
ಜೊತೆಗೆ ಹೆಚ್ಚಿನ ಸಂಖ್ಯೆಯ ಅಪೌಷ್ಟಿಕ ಮಕ್ಕಳನ್ನು ಹೊಂದಿರುವ ಇತರ ರಾಜ್ಯಗಳಲ್ಲಿ ಆಂಧ್ರ ಪ್ರದೇಶ (2,67,228), ಕರ್ನಾಟಕ (2,49,463), ಮತ್ತು ಉತ್ತರ ಪ್ರದೇಶ (1,86,640) ಸ್ಥಾನ ಪಡೆದುಕೊಂಡಿವೆ.
ನವೆಂಬರ್ 2020 ರಿಂದ 2021ರ ಅಕ್ಟೋಬರ್ 14ರ ನಡುವೆ ತೀವ್ರತರವಾದ ಅಪೌಷ್ಟಿಕತೆಯ ಮಕ್ಕಳ ಸಂಖ್ಯೆಯಲ್ಲಿ 91% ಏರಿಕೆಯಾಗಿದೆ. ನವೆಂಬರ್ 2020 ರಲ್ಲಿ ಅಂತಹ ಮಕ್ಕಳ ಸಂಖ್ಯೆ 9,27,606 ಆಗಿತ್ತು. ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿವೆ ಎಂದು ಆರ್‌ಟಿಐ ಪ್ರಶ್ನೆಗೆ ಸಚಿವಾಲಯ ಉತ್ತರಿಸಿದೆ.
- ಉತ್ತರ ಪ್ರದೇಶವು 1,86,640 (1.86 ಲಕ್ಷ) ಅಪೌಷ್ಟಿಕ ಮಕ್ಕಳನ್ನು ಹೊಂದಿದೆ.
- ತಮಿಳುನಾಡು 1,78,060 (1.78 ಲಕ್ಷ) ಅಪೌಷ್ಟಿಕ ಮಕ್ಕಳನ್ನು ಹೊಂದಿದೆ .
- ಅಸ್ಸಾಂನಲ್ಲಿ 1,76,462 (1.76 ಲಕ್ಷ) ಅಪೌಷ್ಟಿಕತೆಯ ಮಕ್ಕಳನ್ನು ಹೊಂದಿದೆ.
- ತೆಲಂಗಾಣ 1,52,524 (1.52 ಲಕ್ಷ) ಅಪೌಷ್ಟಿಕತೆಯ ಮಕ್ಕಳಕನ್ನು ಹೊಂದಿದೆ.