ದೇಶದ ಸಂಪತ್ತು  ಮಾರಾಟ- ಸಿಐಟಿಯು – ಸಿಪಿಐ (ಎಂ)  ನಿಂದ ಕ್ಯಾಂಡಲ್  ಲೈಟ್  ಪ್ರತಿಭಟನೆ

ತುಮಕೂರು : ಸಾರ್ವಜನಿಕರು ನೀಡಿದ ತೆರಿಗೆ ಹಣದಿಂದ ಸಾರ್ವಜನಿಕ ವಲಯದ  ಉದ್ಯಮಗಳು ಸ್ಥಾಪನೆಗೊಂಡು ತಮ್ಮ  ಕಾರ್ಯಕ್ಷಮತೆಯಿಂದ   ಕಳೆದ  ಹತ್ತಾರು  ದಶಕಗಳಿಂದ ಸೇವೆಸಲ್ಲಿಸಿವೆ. ಇಂತಹ ಸಾರ್ವಜನಿಕ ಸಂಪತ್ತುನ್ನು  ಖಾಸಗಿ ಅವರಿಗೆ ಮಾರಟ ಮಾಡುತ್ತಿರುವುದನ್ನ  ಖಂಡಸಿ ಸಿಐಟಿಯು , ಸಿಪಿಐ (ಎಂ)  ಮತ್ತು  ಇತರೆ  ಜನಪರ ಸಂಘಟನೆಗಳು  ನಿನ್ನೆ ಸಂಜೆ ನಗರದ  ಟೌನ್ ಹಾಲ್ ವೃತ್ತದಲ್ಲಿ  ಕ್ಯಾಂಡಲ್ ಲೈಟ್  ಪ್ರತಿಭಟನೆಯನ್ನು ನಡೆಸಿದವು.

ಪತ್ರಿಭಟನೆಯನ್ನು ಉದ್ದೇಶಿಸಿ ಸಿಐಟಿಯು ಜಿಲ್ಲಾಧ್ಯಕ್ಷರಾದ ಸೈಯದ್‌ಮುಜೀಬ್ ಮಾತನಾಡಿ ಅತ್ಮನಿರಭರದ ಮಾತನಾಡುವ ಸರ್ಕಾರ  ನೀತಿ ಅಯೋಗದ ಮೂಲಕ  34 ಸಾರ್ವಜನಿಕ ಉದ್ಯಮಗಳನ್ನು ಹಂತ ಹಂತವಾಗಿ  ಖಾಸಗಿಕರಿಸಲು  ಹೊರಟಿದೆ ಎಂದರು. ಸಾರ್ವಜನಿಕರ ನಂಬಿಕೆ ಭಾಗವಾಗಿರುವ ಎಲ್.ಐ.ಸಿ.  ಸಾರ್ವಜನಿಕ ಬಾಂಕ್ ಗಳನ್ನು  ಖಾಸಗೀಕರಿಸುತ್ತಿರುದನ್ನು  ಜನತೆಯ  ಹೂಡಿಕೆಗಳಿಗೆ  ಭದ್ರತೆ ಇಲ್ಲದಂತಾಗುತ್ತದೆ, ಲಾಭಕೋರ ಖಾಸಗಿ ಒಡೆತನಕ್ಕೆ ನೀಡುವುದರಿಂದ ಸಮಾಜಿಕ ಹೊಣೆಗಾರಿಕೆ, ಸಮಾಜಿಕ ನ್ಯಾಯ ಇಲ್ಲದಂತಾಗುತ್ತದೆ ಎಂದರು.

ಸಿಪಿಐಎಂ ನ ಜಿಲ್ಲಾ ಕಾರ್ಯದರ್ಶಿ  ಎನ್.ಕೆ. ಸುಬ್ರಮಣ್ಯ,  ಮಾತನಾಡಿ ದೇಶದ ಸಂಪತ್ತಿಗೆ  ಕೊಡುಗೆ ನೀಡಿದ  ಸಾರ್ವಜನಿಕ ಉದ್ಯಮಗಳು  ನವರತ್ನ – ಕಾಮದೇನುಗಳಎಂಬ ಹೆಸರುಪಡೆದು ಇತಿಹಾಸ ಸೇರಿ ಖಾಸಗಿಕರಣ ಮಾಡುತ್ತಿರುವುದು ದೇಶ ವಿರೋಧಿ ಎಂದುರು.

ಪ್ರಾಂತ ರೈತ ಸಂಘದ  ಬಿ . ಉಮೇಶ್ ಮಾತನಾಡಿ ದೇಶ ಪ್ರೇಮದ ಹೆಸರಲ್ಲಿ ಜನತೆಯಲ್ಲಿ ಅಪ ನಂಬಿಕೆ ಹುಟ್ಟಿಸಿ ಜನಸಮಾನ್ಯರಿಗೆ  ತೆರಿಗೆ ಹಾಕಿ, ಖಾಸಗಿ ಕಂಪನಿಗಳಿಗೆ ಭ್ರುಷ್ಠಾನ್ನ ಭೋಜನ ನೀಡುವ  ಬಿ.ಜೆ.ಪಿ ಪಕ್ಷವನ್ನು ಮುಂದಿನ ದಿನಗಳಲ್ಲಿ ತಿರಸ್ಕರಿಸಬೇಕೆಂದರು.

ಈ ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಖಜಾಂಚಿ ಎ. ಲೋಕೆಶ್,  ತಾಲ್ಲುಕು  ಆಧ್ಯಕ್ಷರಾದ ಷಣ್‌ಮ್ಮಖಪ್ಪ,  ಜೀವ ವಿಮಾ ನೌಕರರ ಸಂಘಟನೆಯ  ಸದಾಶಿವ, ಸ್ನೇಹಲತ, ಮಧು , ಕರ್ನ್ ಲಿಬರ್ಸ್ ಕಾರ್ಮಿಕ ಸಂಘದ ಶಿವಕುಮಾರ್ ಸ್ವಾಮಿ, ಪ್ರಾಂತ ರೈತ ಸಂಘದ  ಜಿಲ್ಲಾ ಸಂಚಾಲಕ ಅಜ್ಜಪ್ಪ,  ತುಮಕೂರು  ಪೌರ ಕಾರ್ಮಿಕರ ಸಂಘದ  ನಾಗರಾಜು, ಪುಟ್ಪಾತ್ ವ್ಯಾಪಾರಿಗಳ ಸಂಘದ  ಮುತ್ತುರಾಜು, ವಸೀಂ, ಅಸ್ಪತ್ರೆ ಕಾರ್ಮಿಕರ ಸಂಘದ ರಂಗಮ್ಮ ಫೀಟ್ ವೇಲ್ ಕಾರ್ಮಿಕರ ಸಂಘ , ಸುಜಿತ್ ನಾಯಕ್, ಅಟೋಚಾಲಕರ ಸಂಘದ ಸಿದ್ದರಾಜು, ಕಾಫಿ ಕಾರ್ಮಿಕರ ಸಂಘದ ಅಂಜುಮ್, ಬಾಬು. ನೇತೃತ್ವ‌ ನೀಡಿದರು.

Donate Janashakthi Media

Leave a Reply

Your email address will not be published. Required fields are marked *