ಚಿತ್ರದುರ್ಗ | ಕೋಟೆನಾಡಿಗೆ ಡರ್ಮಾಕೊನ್‌ ಸೈಕಲ್‌ ರ‍್ಯಾಲಿ: ಆರೋಗ್ಯ ಜಾಗೃತಿ ಸಂದೇಶ

ಚಿತ್ರದುರ್ಗ: ಡರ್ಮಾಕೊನ್‌ ಸೈಕಲ್‌ ರ‍್ಯಾಲಿ ಚರ್ಮ ವಿಜ್ಞಾನವನ್ನು ಸಬಲೀಕರಣಗೊಳಿಸುವ ಘೋಷವಾಕ್ಯದೊಂದಿಗೆ ಹುಬ್ಬಳ್ಳಿಯಲ್ಲಿ ಪ್ರಾರಂಭವಾಗಿ ಮಂಗಳವಾರ ನಗರಕ್ಕೆ ಆಗಮಿಸಿತು.

ಕೋಟೆ ಆವರಣದಲ್ಲಿ ರ‍್ಯಾಲಿಯನ್ನು ಚರ್ಮ ರೋಗ ವ್ಯೆದ್ಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಂ.ಯೋಗೇಂದ್ರ ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಅವರು, ಜ. 21ರಂದು ಹುಬ್ಬಳ್ಳಿಯಲ್ಲಿ ಪ್ರಾರಂಭವಾದ ರ‍್ಯಾಲಿ ಜ. 28ರಂದು ಬೆಂಗಳೂರು ತಲುಪಲಿದೆ’  ಆರೋಗ್ಯಕರ ಚರ್ಮ,ದೇಹ ಹಾಗೂ ರಾಷ್ಟ್ರಕ್ಕಾಗಿ ಪುಣೆಯ ಚರ್ಮ ರೋಗ ತಜ್ಞ ವೈದ್ಯ ಡಾ.ನರೇಂದ್ರ ಪಟವರ್ಧನ ತಂಡ ಸೈಕಲ್‌ ರ‍್ಯಾಲಿ ನಡೆಸುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ : ಬೆಂಗಳೂರು |ಜವಳಿ ಕ್ಷೇತ್ರಕ್ಕೆ ಉತ್ತೇಜನ: ಹೊಸ ನೀತಿಯಲ್ಲಿ ಕೈಮಗ್ಗ ಮತ್ತು ಮಹಿಳಾ ಕಾರ್ಮಿಕರಿಗೆ ವಿಶೇಷ ನೆರವು

‘ಜ. 29ರಿಂದ 31ರವರೆಗೆ ಬೆಂಗಳೂರಿನಲ್ಲಿ ಭಾರತೀಯ ಚರ್ಮ, ಲೈಂಗಿಕ ಮತ್ತು ಕುಷ್ಠ ರೋಗ ಸಂಘದ (ಐಏಡಿವಿಎಲ್‌) ವಾರ್ಷಿಕ ಸಮ್ಮೇಳನ ನಡೆಯಲಿದೆ. ರ‍್ಯಾಲಿ ಮೂಲಕ ಚರ್ಮ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.

ರ‍್ಯಾಲಿ ತುಮಕೂರಿಗೆ ಪ್ರಯಾಣ ಬೆಳೆಸಿತು. ತಂಡದ ಸದಸ್ಯರಾದ ಸ್ವಪ್ನಲಿ ಗುಪ್ತೆ, ಭೂಷಣ ಆಪ್ಟೆ, ರವಿ ಬೇಂದ್ರೆ, ನಿತಿನ್‌ ದಾಮ್ಲೆ, ವಿಶ್ವನಾಥ ಗೋಖಲೆ, ಅನಿಲ ಜಮ್ತಾನಿ, ಮಕರಂದ ಸಾನೆ, ಪ್ರಕಾಶ ಕುಲಕರ್ಣಿ ಇದ್ದರು.

ಇದನ್ನೂ ನೋಡಿ : ಲಾಲ್‌ಬಾಗ್‌ ಫ್ಲವರ್‌ ಶೋ| ಬಣ್ಣಬಣ್ಣದ ಹೂಗಳ ಚಿತ್ತಾರದಲ್ಲಿ ‘ತೇಜಸ್ವಿ ವಿಸ್ಮಯ’ Janashakthi Media

Donate Janashakthi Media

Leave a Reply

Your email address will not be published. Required fields are marked *