ಭುವನೇಶ್ವರ: ಬಂಗಾಳಕೊಲ್ಲಿಯಲ್ಲಿ ಶುಕ್ರವಾರ ವಾಯುಭಾರ ಕುಸಿತ ಉಂಟಾಗಿದ್ದು, ಪರಿಣಾಮ ಡಿಸೆಂಬರ್ 4 ರ ಸಂಜೆಯ ವೇಳೆಗೆ ಆಂಧ್ರಪ್ರದೇಶದ ಮಚಲಿಪಟ್ಟಣಂ ಮತ್ತು ಚೆನ್ನೈ ಕರಾವಳಿಯಲ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತದ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಶುಕ್ರವಾರ ಮುಂಜಾನೆ 5.30ಕ್ಕೆ ಈ ಚೆನ್ನೈನಿಂದ 800 ಕಿಮೀ, ಮಚಲಿಪಟ್ಟಣದಿಂದ 970 ಕಿಮೀ, ಆಂಧ್ರಪ್ರದೇಶದ ಬಾಪಟ್ಲಾದಿಂದ 990 ಕಿಮೀ ಮತ್ತು ಪುದುಚೇರಿಯಿಂದ 790 ಕಿಮೀ ದೂರದ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ: ರಾಜಧಾನಿಯಲ್ಲಿ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ
ಚಂಡಮಾರುತವು ಪಶ್ಚಿಮ ಮತ್ತು ವಾಯುವ್ಯ ಕಡೆಗೆ ಚಲಿಸುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದ್ದು, ಡಿಸೆಂಬರ್ 2 ರ ವೇಳೆಗೆ ವಾಯು ಭಾರವು ಮತ್ತಷ್ಟು ಕುಸಿಯಲಿದ್ದು, ಡಿಸೆಂಬರ್ 3 ರ ಸುಮಾರಿಗೆ ಚಂಡಮಾರುತವು ತೀವ್ರಗೊಳ್ಳುತ್ತದೆ ಎಂದು IMD ತಿಳಿಸಿದೆ.
ಅದರ ನಂತರ, ಅದು ಅದೇ ದಿಕ್ಕಿನಲ್ಲಿ ಚಲಿಸುತ್ತವ ಮಾರುತವು ದಕ್ಷಿಣ ಆಂಧ್ರಪ್ರದೇಶ ಮತ್ತು ಉತ್ತರ ತಮಿಳುನಾಡು ಕರಾವಳಿಯಾದ ಚೆನ್ನೈ ಮತ್ತು ಮಚಲಿಪಟ್ಟಣಂ ನಡುವೆ ಡಿಸೆಂಬರ್ 4 ರ ಸಂಜೆಯ ಹೊತ್ತಿಗೆ ಬೀಸಲಿದೆ ಎಂದು ಹವಾಮಾನ ಇಲಾಖೆಯು ಹೇಳಿದೆ.
ಈ ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಒಡಿಶಾದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಿಶೇಷ ಪರಿಹಾರ ಆಯುಕ್ತರ ಕಚೇರಿಯ ಅಧಿಕಾರಿಯೊಬ್ಬರು ಭುವನೇಶ್ವರದಲ್ಲಿ ತಿಳಿಸಿದ್ದಾರೆ.
ವಿಡಿಯೊ ನೋಡಿ: ಕಂಪನಿಗಳಿಂದ ಕಾರ್ಮಿಕರ ಶ್ರಮದ ಲೂಟಿ – ಮೀನಾಕ್ಷಿ ಸುಂದರಂ