ರಾಯಚೂರು: ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಹಟ್ಟಿ ಪಟ್ಟಣದಲ್ಲಿ ನಡೆದ ಮಂಜುಳಾ ಜೇಮ್ಸ್ ಪಾಲ್ ಬೀಕರ ಕೊಲೆ ಪ್ರಕರಣ ಖಂಡನೀಯವಾಗಿದ್ದು, ಈ ಕೂಡಲೇ ಆರೋಪಿಗಳನ್ನು ಬಂಧಿಸಿ ಶಿಕ್ಷಿಸಬೇಕು ಎಂದು ಹಟ್ಟಿ ಪ್ರಗತಿಪರ ಸಂಘಟನೆಗಳ ಜಂಟಿ ವೇದಿಕೆ ಆಗ್ರಹಿಸಿದೆ.
ಪಟ್ಟಣದ ಪಾಮನಕೆಲ್ಲೂರು ಕ್ರಾಸ್ ನಿಂದ ಪೊಲೀಸ್ ಠಾಣೆವರೆಗೂ ಮೆರವಣಿಗೆ ನಡೆಸಿ ತಹಶೀಲ್ದಾರ ಅವರ ಮೂಲಕ ರಾಜ್ಯಪಾಲರಿಗೆ ಹಾಗೂ ಹಾಗೂ ಪೊಲೀಸ್ ಠಾಣೆಯ ಸಿಪಿಐ ಅವರ ಮೂಲಕ ಎಸ್ಪಿ ಅವರಿಗೆ ಹಕ್ಕೋತ್ತಾಯ ಸಲ್ಲಿಸಿದರು.
ಇದನ್ನೂ ಓದಿ:ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ- ಕೊಲೆ ಶಂಕೆ
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್ಎಫ್ ಐ ಜಿಲ್ಲಾಧ್ಯಕ್ಷ ರಮೇಶ್ ವೀರಾಪುರ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಸೇವೆ ಸಲ್ಲಿಸುತ್ತಿದ್ದ ಮಂಜುಳಾ ಅವರಿಗೆ ಬೆಳಗಿನ ಜಾವ ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿ ಬೆಂಕಿ ಹಚ್ಚಿ ಪರಾರಿಯಾಗಿ 15 ದಿವಸ ಕಳೆದರೂ ಆರೋಪಿಗಳಿಗೆ ಬಂಧಿಸುವಲ್ಲಿ ಪೊಲೀಸರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಆದ್ದರಿಂದ ಈ ತನಿಖಾಧಿಕಾರಿಯನ್ನು ಬದಲಿಸಬೇಕು ಎಂದು ಆಗ್ರಹಿಸಿದರು.
ಪಟ್ಟಣದಲ್ಲಿ ಅನೇಕ ಕಡೆ ಸಿಸಿ ಕ್ಯಾಮೆರಾಗಳನ್ನ ಹಾಕಿದ್ದರೂ ಅವುಗಳನ್ನ ಸರಿಯಾಗಿ ನಿರ್ವಹಿಸದಿರುವುದು ಅಪರಾಧಗಳಿಗೆ ಎಡೆಮಾಡಿಕೊಡುವ ಆತಂಕ ವ್ಯಕ್ತವಾಗಿದೆ. ಮಂಜುಳಾರ ಮೃತದೇಹವನ್ನು ನೋಡಿದ ಯಾರಾದರೂ ಅದನ್ನು ಕೊಲೆ ಎಂದು ಹೇಳುತ್ತಾರೆ. ಆದರೆ ಪೊಲೀಸರು ಅನುಮಾನಾಸ್ಪದ ಸಾವು ಎಂದು ದಾಖಲಿಸದೆ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಪ್ರಕರಣ ಹಳ್ಳ ಹಿಡಿಸಿದ್ದಾರೆ ಎಂದು ಗುಡುಗಿದರು.
ಇದನ್ನೂ ಓದಿ:ಹಟ್ಟಿ ಚಿನ್ನದ ಗಣಿ ಕಾರ್ಮಿಕರ ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಸಲು ಸಿಐಟಿಯು ಮನವಿ
ಹಟ್ಟಿ ಪಟ್ಟಣದಲ್ಲಿ ಸಾವಿರಾರು ಕಾರ್ಮಿಕರು ವಾಸಿಸುತ್ತಿದ್ದು, ಇಲ್ಲಿ ಇಸ್ಪೀಟು, ಮಟ್ಕಾ, ಜೂಜು ಸೇರಿದಂತೆ ಅನೇಕ ಅನೈತಿಕ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿವೆ. ಹಣದ ಆಸೆಗೆ ಈ ರೀತಿಯ ಕೊಲೆ-ಸುಲಿಗೆ ಸಹಜವಾಗಿ ಬಿಟ್ಟಿವೆ. ಇದನ್ನು ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ತೀವ್ರ ಹೋರಾಟ ಗೊಳಿಸಲಾಗುವುದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಂತರ ಮತ್ತೋರ್ವ ಮುಖಂಡ ಅಮೀರ ಅಲಿ ಅವರು ಮಾತನಾಡಿ ಮಂಜುಳಾ ಅವರ ಸುಟ್ಟು ಬಸ್ಮವಾದ ವಿಡಿಯೋ ನೋಡಿದರೆ ನಿಜವಾದ ಸ್ವಾತಂತ್ರ್ಯ ಬಂದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರ, ತಮಿಳು ಸಂಘ ದ ಅಧ್ಯಕ್ಷರು ಜಿ. ಶೇಖರ, ವಿಜಯಕುಮಾರ,ಲೋಗನಾದನ, ಮೃತ ಮಂಜುಳ ತಾಯಿ ಕಸ್ತೂರಿ ಬಾಯಿ, ಮಗ ಸಚಿನ್ ಪಾಲ್, ಸಹೋದರ ಅನಿಲ್ ಕುಮಾರ್, ವಿವಿಧ ಸಂಘಟನೆಗಳ ಮುಖಂಡರಾದ ಮಹಮ್ಮದ್ ಹನೀಫ್ , ಜಮದಗ್ನಿ ಕೋಠಾ, ಜೆ. ಶಾಂತಪ್ಪ ಮಳ್ಳಿ, ಸಿರಾಜುದ್ದೀನ್ ಖುರೇಷಿ, ಹುಸೇನ್ ಭಾಷಾ, ಸನತ್ ಅಲಿ, ಗುಡದಪ್ಪ ಭಂಡಾರಿ, ಶರಣಗೌಡ ಗುರಿಕಾರ್, ಯಲ್ಲಪ್ಪ ಮಾಚನೂರು, ವಿನೋದ ಕಮಲದಿನ್ನಿ, ಬಾಬು ಸಾಗರ, ಮಹಿಬೂಬ ಖುರೇಶಿ, ಮೌನೇಶ ಕಾಕಾನಗರ, ಪ್ರಶಾಂತ, ಲಾಲ್ ಪೀರ್, ಅಮ್ಜದ್ ಶೇಠ್, ಅನಿತಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.