ಗೌರಿಬಿದನೂರು: ಶುಕ್ರವಾರದಂದು ತಾಲ್ಲೂಕಿನ ತೊಂಡೇಭಾವಿ ಹೋಬಳಿ ಬೆಳಚಿಕ್ಕನ ಹಳ್ಳಿಯಲ್ಲಿ ವೆಂಕಟರಮಣ ದೇವಾಲಯಕ್ಕೆ ವೈಕುಂಠ ಏಕಾದಶಿ ಪ್ರಯುಕ್ತ ಹೋದ ಪರಿಶಿಷ್ಟ ಜಾತಿಯ ವ್ಯಕ್ತಿಗೆ ದೇವಸ್ಥಾನದೊಳಗೆ ಪ್ರವೇಶ ನಿರಾಕರಿಸಲಾಗಿದೆ.
ಗೋಪಾಲಪ್ಪ ಮಂಚೇನಹಳ್ಳಿ ಎಂಬುವವರು, ‘ಜಾತಿಯ ಕಾರಣಕ್ಕಾಗಿ ದೇವಾಲಯ ಪ್ರವೇಶ ದ್ವಾರದಲ್ಲಿಯೇ ನನ್ನನ್ನು ತಡೆದ ಗ್ರಾಮದ ಕೆಲವರು ವಾಪಸ್ ಕಳಿಸಿದ್ದಾರೆ’ ಎಂದು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗೌರಿಬಿದನೂರು
ಇದನ್ನೂ ಓದಿ: ದೆಹಲಿ ವಿಧಾನಸಭೆ ಚುನಾವಣೆ-2025: ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಸಿಎಂ ಅತಿಶಿ ಕೇಳಿರುವ ಪ್ರಶ್ನೆಗೆ ಬಿಜೆಪಿ ಕಂಗಾಲು
ಗ್ರಾಮದಲ್ಲಿ ಶಾಂತಿಸಭೆ ನಡೆಸಿದ ಅಧಿಕಾರಿಗಳು ಪ್ರಕರಣ ದಾಖಲಾಗುತ್ತಲೇ ಗ್ರಾಮದ ತಿಮ್ಮಾರೆಡ್ಡಿ, ಭಾಸ್ಕರ್‌ರೆಡ್ಡಿ, ಬಿ.ವಿ.ವೆಂಕಟೇಶರೆಡ್ಡಿ ಮತ್ತು ಪಿಂಜಾರ‍್ಲಹಳ್ಳಿ ಶ್ರೀನಿವಾಸರೆಡ್ಡಿ ಎಂಬುವರು ತಲೆ ಮರೆಸಿಕೊಂಡಿದ್ದಾರೆ.
ತಹಶೀಲ್ದಾರ್ ಮಹೇಶ್ ಪತ್ರಿ, ಡಿವೈಎಸ್‌ಪಿ ಶಿವಕುಮಾರ್, ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಪಿ.ಸತ್ಯನಾರಾಯಣ್ ಶನಿವಾರ ಗ್ರಾಮಕ್ಕೆ ಭೇಟಿ ದಲಿತ ಮುಖಂಡರ ಸಮ್ಮುಖದಲ್ಲಿ ಶಾಂತಿ ಸಭೆ ನಡೆಸಿದರು. ಶಾಂತಿಸಭೆಯ ಬಳಿಕ ಗ್ರಾಮಸ್ಥರ ಸಮ್ಮುಖದಲ್ಲಿ ಅಧಿಕಾರಿಗಳು ಗೋಪಾಲಪ್ಪ ಅವರನ್ನು ದೇವಸ್ಥಾನದ ಒಳಗೆ ಕರೆದೊಯ್ದರು.
ಇದನ್ನೂ ನೋಡಿ: ನಿವೃತ್ತ ವಿಮಾ ನೌಕರರ ಪ್ರತಿಭಟನೆ : ಪಿಂಚಣಿ ನೌಕರರ ಬಿಕ್ಷೆಯಲ್ಲ, ಹಕ್ಕು Janashakthi Media