ವಿಲುಪುರಂ: ದಲಿತ ವ್ಯಕ್ತಿಯೊಬ್ಬ ದೇವಸ್ಥಾನವನ್ನು ಪ್ರವೇಶಿಸಿದ್ದಕ್ಕೆ ಘರ್ಷಣೆ ಉಂಟಾದ ಬೆನ್ನಲ್ಲೇ ದೇಗುಲಕ್ಕೆ ಬೀಗ ಜಡಿದಿರುವ ಘಟನೆ ತಮಿಳುನಾಡಿನ ಮೇಲ್ಪಾಡಿ ಗ್ರಾಮದಲ್ಲಿ ನಡೆದಿದೆ.
ಕಳೆದ ವರ್ಗದ ಸಮುದಾಯ ಇಂದಿಗೂ ಹಲವೆಡೆ ಜಾತಿಯ ಸಮಸ್ಯೆಗೆ ಅನ್ಯಾಯಕ್ಕೊಳಪಡುತ್ತಿದೆ. ಈ ವರ್ಷದ ಏಪ್ರಿಲ್‌ನಲ್ಲಿ ದಲಿತ ಸಮುದಾಯದ ವ್ಯಕ್ತಿಯೊಬ್ಬರು ದೇವಾಲಯಕ್ಕೆ ಪ್ರವೇಶಿಸಿದ್ದರು. ಅಂದಿನಿಂದ ಇಂದಿನವರೆಗೆ ಎರಡು ಸಮುದಾಯಗಳ ನಡುವೆ ಘರ್ಷಣೆ ಉಂಟಾಗಿತ್ತು. ಗ್ರಾಮದಲ್ಲಿ ಕಟ್ಟೆಚ್ಚರ ವಹಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಇದನ್ನೂ ಓದಿ : ದಿಂಡಗನೂರು : ದೇವಸ್ಥಾನ ಪ್ರವೇಶಿಸಿದ ದಲಿತರು
ಈ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಜಾತಿಯತೆ ಬಗ್ಗೆ ತಿಳುವಳಿಕೆ ಮೂಡಿಸಲು ಅಧಿಕಾರಿಗಳು ಯತ್ನಿಸಿದ್ದರು. ಆದರೆ ಈ ವಿವಾದ ಕೊನೆಗೊಳ್ಳದ ಕಾರಣ ಗ್ರಾಮದ ದೇವಸ್ಥಾನವನ್ನು ಜಿಲ್ಲಾಧಿಕಾರಿ ಮುಚ್ಚಿಸಿದ್ದಾರೆ. ಇಲ್ಲಿನ ಧರ್ಮರಾಜ ದ್ರೌಪದಿ ದೇವಸ್ಥಾನದಲ್ಲಿ ದಲಿತರು ದೇವಸ್ಥಾನ ಪ್ರವೇಶಿಸಲು ಯತ್ನಿಸಿದರು. ಸವರ್ಣೀಯರು ಅವರನ್ನು ಪ್ರವೇಶಿಸದಂತೆ ನಿರ್ಬಂಧಿಸಿದರು. ದೇವಸ್ಥಾನಕ್ಕೆ ಯಾರೂ ಬೇಕಾದರೂ ಹೋಗಬಹುದು, ನಿರ್ಬಂಧ ಹೇರುವಂತಿಲ್ಲ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದರೂ ಸಮಸ್ಯೆ ಮುಂದುವರೆದಿತ್ತು. ‘ಸಮಸ್ಯೆ ಬಗೆಹರಿಯುವವರೆಗೂ ದೇವಸ್ಥಾನದ ಬಾಗಿಲು ತೆರೆಯುವುದಿಲ್ಲ’ ಎಂದು ದೇವಸ್ಥಾನದ ಗೋಡೆಗೆ ನೋಟಿಸ್ ಅಂಟಿಸಲಾಗಿದೆ.
ಎಷ್ಟೇ ಶತಮಾನಗಳು ಕಳೆದರೂ ನಮ್ಮ ಸಮಾಜದಲ್ಲಿ ಜಾತಿ ತಾರತಮ್ಯ ಕಡಿಮೆಯಾಗಿಲ್ಲ, ತಳ ವರ್ಗದ ಸಮುದಾಯ ಇಂದಿಗೂ ಹಲವೆಡೆ ಜಾತಿಯ ಸಮಸ್ಯೆಗೆ ಅನ್ಯಾಯಕ್ಕೊಳಪಡುತ್ತಿದೆ ಎಂಬುದು ಖೇದದ ಸಂಗತಿಯಾಗಿದೆ.