ಬೆಂಗಳೂರು : ಮಧ್ಯಾಹ್ನ ಉರಿಬಿಸಿಲು, ಸಂಜೆ ಇತ್ತಿತ್ತಲಾಗೆ ಸುರಿಯುತ್ತಿರುವ ಅಲ್ಲಲ್ಲಿ ಮಳೆ. ಇದರಿಂದ ಸೊಳ್ಳೆಗಳ ಸಂತಾನ ಹೆಚ್ಚುತ್ತಿದ್ದು, ಬೆಂಗಳೂರಿನಲ್ಲಿ ಇದೀಗ ಡೇಂಘಿ (ಡೆಂಗ್ಯೂ) ಹಾವಳಿ ಹೆಚ್ಚುತ್ತಿದೆ. ಡೆಂಗ್ಯೂ
ಇಷ್ಟು ದಿನಗಳ ಕಾಲ ಕಾಲರಾ ಸಮಸ್ಯೆಯಿಂದ ಬಳಲುತ್ತಿದ್ದರು. ಇದೀಗ ನಗರದಲ್ಲಿ ಸುರಿಯುತ್ತಿರುವ ಮಳೆ ಅಲ್ಲಲ್ಲಿ ಕೊಚ್ಚೆ, ಕಸದಿಂದಾಗಿ ಸೊಳ್ಳೆಗಳು ಹೆಚ್ಚುತ್ತಿದೆ. ಇದರ ಪರಿಣಾಮ ಡೆಂಘಿ ಪ್ರಕರಣ ಹೆಚ್ಚಾಗುತ್ತಿದ್ದು ಒಂದೇ ತಿಂಗಳಿನಲ್ಲಿ ನೂರಾರು ಪ್ರಕರಣಗಳು ದಾಖಲಾಗಿವೆ.
ಇದನ್ನು ಓದಿ : ಮಳೆಗಾಲದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ “ಮರ ಕಟಾವು ತಂಡಗಳು
ಬೆಂಗಳೂರಿನಲ್ಲಿ ನಿತ್ಯ 50-60 ಪ್ರಕರಗಣಗಳು ದಾಖಲಾಗುತ್ತಿವೆ. ಏಪ್ರಿಲ್‌ನಿಂದ ಮೇ 10ರವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ 930 ಪ್ರಕರಣ ದಾಖಲಾಗಿದೆ. ಒಟ್ಟು 1974ಟೆಸ್ಟ್‌ಗಳಲ್ಲಿ 930 ಜನರಿಗೆ ಡೆಂಘಿ ಪಾಸಿಟಿವ್ ಕಂಡುಬಂದಿದೆ. ರಾಜ್ಯದಲ್ಲಿ ಒಟ್ಟು 2500 ಡೆಂಘಿ ಪ್ರಕರಣ ದಾಖಲಾಗಿವೆ.
ಮಳೆಯ ಹಿನ್ನೆಲೆ ಡೆಂಘಿ ನಿರ್ಲಕ್ಷ್ಯ ಮಾಡಿದ್ರೆ ಇನ್ನೂ ಹೆಚ್ಚಳ ಸಾಧ್ಯತೆ ಎನ್ನಲಾಗುತ್ತಿದೆ. ನಗರದ ದಕ್ಷಿಣ ವಲಯದಲ್ಲಿ ಅತಿಹೆಚ್ಚು 453ಡೆಂಘಿ ಪ್ರಕರಣ ದಾಖಲು ಆಗಿರುವುದು ವರದಿಯಾಗಿದೆ.
ಇದನ್ನು ನೋಡಿ : ಮೋದಿ ಅದಾನಿ ದೋಸ್ತಿ ಖತಂ, ಕಾಂಗ್ರೆಸ್ ಹಾಡಿ ಹೊಗಳಿದ ಚಕ್ರವರ್ತಿ ಸೂಲಿಬೆಲೆ Janashakthi Media