ಕುಷ್ಟಗಿ ತಾಲೂಕಿನ ಎಲ್ಲಾ ಹಳ್ಳಿಗಳಿಗೆ ಸಮರ್ಪಕವಾಗಿ ಬಸ್ ಬಿಡಲು ಆಗ್ರಹ: ಎಸ್.ಎಫ್.ಐ ಪ್ರತಿಭಟನೆ

ಕುಷ್ಟಗಿ: ಈ ಶಿವಕುಮಾರ್ ಈಚನಾಳ್ ಮಾತಾನಾಡಿ, “ಕುಷ್ಟಗಿ ತಾಲೂಕಿನ ವಿವಿಧ ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಶಾಲಾ ಕಾಲೇಜುಗಳಿಗೆ ಕುಷ್ಟಗಿ ನಗರಕ್ಕೆ ಪ್ರತಿನಿತ್ಯ ಬರುತ್ತಿದ್ದು, ಆದರೆ ಶಾಲಾ ಕಾಲೇಜುಗಳ ಸಮಯಕ್ಕೆ ಸರಿಯಾಗಿ ಸಮರ್ಪಕವಾಗಿ ಬರದೇ ಇದ್ದಿದ್ದರಿಂದ ಹಲವಾರು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ” ಎಂದು ಆಗ್ರಹಿಸಿದರು,

ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ ಮಾತನಾಡಿ ಇಲ್ಲಿನ ತಾಲೂಕಿನ ಶಾಸಕರು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು (ಮೆಂಬರ್) ಗಳು ವಿದ್ಯಾರ್ಥಿಗಳ ಗೋಳನ್ನು ಕೇಳದೆ ಕೂತಿದ್ದರಿಂದ ವಿದ್ಯಾರ್ಥಿಗಳು ಶಾಲಾ-ತರಗತಿಗಳ ಬಹಿಷ್ಕಾರಗೊಳಿಸಿ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ಪಾಶ್ಚಿಮಾತ್ಯ ದೇಶಗಳ ಹೆಚ್ಚುತ್ತಿರುವ ಮಿಲಿಟರಿ ವೆಚ್ಚಗಳು ಮತ್ತು ಸಾಮ್ರಾಜ್ಯಶಾಹಿಯ ಪ್ರಸಕ್ತ ರಾಜಕೀಯ ಅರ್ಥಶಾಸ್ತ್ರ

ಈ ಕೂಡಲೇ ತಾವುಗಳು ಎಚ್ಚೆತ್ತುಕೊಂಡು ಸಮರ್ಪಕವಾಗಿ ತಾಲೂಕಿನ ಎಲ್ಲಾ ಹಳ್ಳಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ಒದಗಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಸ್ತೆ ತಡೆದು ಉಗ್ರ ಹೋರಾಟ ಮಾಡುವಲಾಗುವುದೆಂದು ಆಗ್ರಹಿಸಿ ಪ್ರತಿಭಟನೆಯ ಮೂಲಕ ಘಟಕ ವ್ಯವಸ್ಥಾಪಕರಿಗೆ ಎಚ್ಚರಿಕೆಯ ಮನವಿ ನೀಡಲಾಯಿತು.

ಕೆ.ಪಿ.ಆರ್.ಎಸ್ ನಾ ಮುಖಂಡರಾದ ಕಾಂ.ಸಂಗಮ್ಮ ಮತ್ತು ಅಕ್ಕಮ್ಮ ಹೋರಾಟವನ್ನು ಬೆಂಬಲಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಬಾಲಾಜಿ ಚಳ್ಳಾರಿ ಜಿಲ್ಲಾ ಕಾರ್ಯದರ್ಶಿ ಜಿಲ್ಲಾ ಸಮಿತಿ ಸದಸ್ಯರಾದ ರಮೇಶ್ ಅಗಸಿಮುಂದಿನ, ದೊಡ್ಡ ಬಸವ ನೀರಲೂಟಿ, ಹನುಮೇಶ್ ಚಳ್ಳಾರಿ, ವಿದ್ಯಾರ್ಥಿಗಳಾದ, ಹುಲಿಗೆಮ್ಮ, ಅನಿತ, ಅಶ್ವಿನಿ, ಅಮೃತ, ಅನು,ರಾಮು ಪಟೇಲ್ ನವೀನ್ ಮತ್ತು ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದನ್ನೂ ನೋಡಿ: CITU 16 ನೇ ರಾಜ್ಯ ಸಮ್ಮೇಳದ ಉದ್ಘಾಟನೆಯ ನೇರ ಪ್ರಸಾರ

Donate Janashakthi Media

Leave a Reply

Your email address will not be published. Required fields are marked *