ಬೆಂಗಳೂರು: ಆದಿ ಕರ್ನಾಟಕ, ಆದಿ ಆಂಧ್ರ ಮತ್ತು ಆದಿ ದ್ರಾವಿಡ ಜಾತಿಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಕೈಬಿಡಲು ಕೇಂದ್ರ ಸರಕಾರಕ್ಕೆ ಕೂಡಲೇ ಶಿಫಾರಸ್ಸು ಮಾಡಬೇಕು ಎಂದು ಸೆಪ್ಟೆಂಬರ್ 12ರಂದು ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಹೋರಾಟ ಸಮಿತಿಯು ಒತ್ತಾಯಿಸಿದೆ. ಕರ್ನಾಟಕ
ನಗರದಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಮಾಜಿ ಸಚಿವ ಎಚ್.ಆಂಜನೇಯ ಸೇರಿ ಸಮಿತಿಯ ಮುಖಂಡರಾದ ತಿಮ್ಮರಾಯಪ್ಪ, ಮಾರೆಪ್ಪ, ಅಂಬಣ್ಣ ಆರೋಲಿಕರ್, ರವಿ ಬೋಸರಾಜ್, ಬಸವರಾಜ್ ಕೌತಾಳ್, ವೇಣುಗೋಪಾಲ್ ಮೌರ್ಯ, ಹನುಮೇಶ ಗುಂಡೂರ್, ಮಂಜುನಾಥ್, ಶಂಕರಪ್ಪ, ಗುಡಿಮನಿ, ಚೌಡಿ ಲೋಕೇಶ್ ಸೇರಿ ಮತ್ತಿತರರು ಭೇಟಿ ಮಾಡಿ ಮನವಿ ಪತ್ರವನ್ನು ಸಲ್ಲಿಸಿದರು.
ಆದಿ ಕರ್ನಾಟಕ, ಆದಿ ಆಂಧ್ರ, ಆದಿ ದ್ರಾವಿಡ ಜಾತಿಯವರಿಗೆ ಮೂಲ ಜಾತಿ ಪ್ರಮಾಣ ಪತ್ರ ತೆಗೆದುಕೊಳ್ಳಲು ಕಂದಾಯ ಇಲಾಖೆ ಆದೇಶ ಹೊರಡಿಸಬೇಕು. ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ನೇಮಕಾತಿ ಅಲ್ಲದೇ ಬಡ್ತಿ ನೇಮಕಾತಿ, ಬ್ಯಾಕ್‍ಲಾಗ್ ಅನ್ವಯಿಸಿ ರೋಸ್ಟರ್ ಬಿಂದು ಪ್ರಕಟಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ನವದೆಹಲಿ |ಮೊದಲ ಬಾರಿಗೆ ಒಂದೇ ಹಳಿಯಲ್ಲಿ ಮೆಟ್ರೊ, ಆರ್‌ಆರ್‌ಟಿಸಿ ರೈಲು
ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಉನ್ನತ ಅಧಿಕಾರಿಗಳನ್ನು ಬದಲಾಯಿಸಬೇಕು. ತೆಲಂಗಾಣ ರಾಜ್ಯ ಹಾಗೂ ಆಂಧ್ರದ ಮಾದರಿಯಲ್ಲಿ ಒಳಮೀಸಲಾತಿ ಪ್ರತ್ಯೇಕ ಕಾಯ್ದೆಯನ್ನು ಕೂಡಲೇ ರಚಿಸಬೇಕು. ಶಾಶ್ವತ ಆಯೋಗವನ್ನು ಕೂಡಲೇ ರಚಿಸಿ ಆದೇಶ ಹೊರಡಿಸಬೇಕು. ಶಾಶ್ವತ ಆಯೋಗದಲ್ಲಿ ಪರಿಶಿಷ್ಟ ಜಾತಿಗಳ ಎಲ್ಲ ಸಮುದಾಯಗಳ ಪ್ರತಿನಿಧಿಗಳು ಇರಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ನೋಡಿ: ಧರ್ಮಸ್ಥಳ ನಿಗೂಢಗಳು | ಎಸ್‌ಐಟಿ ತನಿಖೆಗೆ ಅಡ್ಡಿಪಡಿಸಿದವರ ಮೇಲೆ ಕ್ರಮ ಜರುಗಿಸಬೇಕು – ಹಿರಿಯ ವಕೀಲ ಬಿ.ಟಿ. ವೆಂಕಟೇಶ್
