ರಾಯಚೂರು: ಜಿಲ್ಲೆಯ ದೇವದುರ್ಗ, ಲಿಂಗಸುಗೂರು ತಾಲೂಕುಗಳ ರೈತರ ಜೀವನಾಡಿಯಾದ ಬಸವಸಾಗರ ಜಲಾಶಯದಿಂದ ಎನ್‌ಆರ್‌ಬಿಸಿ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ನೇತೃತ್ವದಲ್ಲಿ ರೈತರು ನೀರಿಗಾಗಿ ಪಾದಯಾತ್ರೆ ನಡೆಸಿದ್ದಾರೆ.
ಇದನ್ನು ಓದಿ :-ಸಿದ್ದಾಪುರ| ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರ ನೇಮಕಕ್ಕೆ ಆಗ್ರಹಿಸಿ ಸಿಪಿಎಂ ಮನವಿ
ಎರಡನೇ ದಿನದ ಪಾದಯಾತ್ರೆ ಆರಂಭವಾಗಿದ್ದು ರಾಯಚೂರಿನ ಸಾಥ್ ಮೈಲ್ ಬಳಿ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ. ರೈತರೊಂದಿಗೆ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹೋರಾಟದಲ್ಲಿ ಭಾಗವಹಿಸಿದ್ದಾರೆ. ದೇವದುರ್ಗ ತಾಲೂಕಿನ ಗಬ್ಬೂರಿನಿಂದ ರಾಯಚೂರು ಜಿಲ್ಲಾಧಿಕಾರಿ ಕಚೇರಿವರೆಗೆ ಸುಮಾರು 30 ಕಿ.ಮೀ ಪಾದಯಾತ್ರೆ ನಡೆಸಿದ್ದಾರೆ.
ಇದನ್ನು ಓದಿ :-ಏ. 10ರ ವರೆಗೆ ಕಾಲುವೆಗೆ ನೀರು – ಸಚಿವ ಶಿವರಾಜ್ ತಂಗಡಗಿ ಹೇಳಿಕೆ
ಹಿಂಗಾರು ಬೆಳೆಗಳಾದ ಭತ್ತ, ಮೆಣಸಿನಕಾಯಿ ಉಳಿಸುವಂತೆ ರೈತರು ಆಗ್ರಹಿಸಿದ್ದಾರೆ. ನಿನ್ನೆ ಆರಂಭವಾದ ಪಾದಯಾತ್ರೆ ಮುಂದುವರೆದಿದ್ದು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಿದ್ದಾರೆ. ಅಧಿಕಾರಿಗಳು ಸರ್ಕಾರದ ದಾರಿ ತಪ್ಪಿಸಿದ್ದು ರೈತರ ಉಳಿವಿಗಾಗಿ ಕೂಡಲೇ ಕಾಲುವೆಗೆ ನೀರು ಹರಿಸುವಂತೆ ಶಾಸಕಿ ಕರೆಮ್ಮ ನಾಯಕ್ ಒತ್ತಾಯಿಸಿದ್ದಾರೆ.