ಮಂಗಳೂರು: ಗಂಜಿಮಠ ‘ಪ್ಲಾಸ್ಟಿಕ್ ಪಾರ್ಕ್’ ಕೈಗಾರಿಕಾ ವಲಯ ಕಾರ್ಯರೂಪಕ್ಕೆ ತರಲು, ಸ್ಥಳೀಯರಿಗೆ ಉದ್ಯೋಗ ಖಾತರಿಗೊಳಿಸಲು ಒತ್ತಾಯಿಸಿ ಸಿಪಿಐಎಂ ನಿಂದ ಧರಣಿ ಘೋಷಣೆ ಮಾಡಿ ಆರೇಳು ವರ್ಷ ದಾಟಿದರೂ ಜಾರಿಗೊಳ್ಳದ ಗಂಜಿಮಠ ಪ್ಲಾಸ್ಟಿಕ್ ಪಾರ್ಕ್ ಯೋಜನೆಯನ್ನು ಕಾಲಮಿತಿಯಲ್ಲಿ ಕಾರ್ಯರೂಪಕ್ಕೆ ತರಬೇಕು ಎಂದು ದ.ಕ. ಜಿಲ್ಲಾ ಸಿಪಿಐಎಂ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ. ಮಂಗಳೂರು
ಇದನ್ನೂ ಓದಿ: ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರ ವಿರೋಧಿಸಿ ರೈತರ ಪ್ರತಿಭಟನೆ
ಗಂಜಿಮಠ ಇಪಿಐಪಿ ಕೈಗಾರಿಕಾ ವಲಯದಲ್ಲಿ ಖಾಲಿಬಿದ್ದಿರುವ ಜಮೀನಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು, ಪ್ಲಾಸ್ಟಿಕ್ ಪಾರ್ಕ್ ನಲ್ಲಿ ಸ್ಥಾಪನೆಗೊಳ್ಳುವ ಉದ್ಯಮ ಘಟಕಗಳಲ್ಲಿ ಹಾಗೂ, ಗಂಜಿಮಠ ಇಪಿಐಪಿ ಕೈಗಾರಿಕಾ ವಲಯದಲ್ಲಿ ಈಗಿರುವ ಬಿಗ್ ಬ್ಯಾಗ್ ಸಹಿತ ಎಲ್ಲಾ ಕೈಗಾರಿಕಾ ಘಟಕಗಳಲ್ಲಿ ಸ್ಥಳೀಯರಿಗೆ ಪೂರ್ಣಪ್ರಮಾಣದಲ್ಲಿ ಉದ್ಯೋಗ ಒದಗಿಸಬೇಕು ಎಂಬ ಬೇಡಿಕೆ ಮುಂದಿಟ್ಟು ಸಿಪಿಐಎಂ ಗರುಪುರ ವಲಯ ಸಮಿತಿ ಫೆಬ್ರವರಿ 10 ರಂದು ಬೆಳಿಗ್ಗೆ 10 :00 ಗಂಟೆಗೆ ಗಂಜಿಮಠ ಕೈಗಾರಿಕಾ ವಲಯದ ಮುಂಭಾಗ ಪ್ರತಿಭಟನಾ ಧರಣಿ ಹಮ್ಮಿಕೊಂಡಿದೆ ಎಂದು ಪ್ರಕಟನೆ ತಿಳಿಸಿದೆ.
ಇದನ್ನೂ ನೋಡಿ: ನೈತಿಕ ನಿಷ್ಠಾವಂತ, ತಾತ್ವಿಕ ಹೃದಯವಂತ ಜಿ.ಸಿ. ಬಯ್ಯಾರೆಡ್ಡಿ – ಬರಗೂರು ರಾಮಚಂದ್ರಪ್ಪ Janashakthi Media