ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ, ಇರಿತಕ್ಕೊಳಗಾದ ಸಂತ್ರಸ್ತರಿಗೆ ಪರಿಹಾರಕ್ಕೆ ಒತ್ತಾಯ- ಡಿವೈಎಫ್ಐ

ಮಂಗಳೂರು : ನಿನ್ನೆ ರಾತ್ರಿ ಬಜಪೆಯ ಜನಸಂದಣಿಯ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತ, ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆಯಿಂದ ಉಂಟಾದ ಅಶಾಂತಿ ಜಿಲ್ಲೆಯ ಇತರ ಭಾಗಗಳಿಗೂ ಹರಡಿದೆ. ಹತ್ಯೆಯ ನಂತರ ಪೊಲೀಸ್ ಇಲಾಖೆ ಪರಿಸ್ಥಿತಿ ಹತೋಟಿಗೆ ಕೈಗೆತ್ತಿಕ್ಕೊಳ್ಳುವಲ್ಲಿ ವಿಫಲರಾದ ಹಿನ್ನಲೆಯಲ್ಲಿ ಇಂದು ಬೆಳಕು ಹರಿಯುವ ಮುನ್ನವೇ ಕೆಲಸಕ್ಕೆ ದಾವಿಸುತ್ತಿದ್ದ ಅಮಾಯಕ ಕಾರ್ಮಿಕರ ಮೇಲೆ ಅಲ್ಲಲ್ಲಿ ಚೂರಿ ಇರಿದು ಹತ್ಯೆ ನಡೆಸಲು ಯತ್ನಿಸಿರುವ ಘಟನೆಯು ಹಲವು ಆತಂಕಕ್ಕೆ ಎಡೆಮಾಡಿಕೊಟ್ಟಿದೆ . ಸರಕಾರ, ಪೊಲೀಸ್ ಇಲಾಖೆ ಈ ಕೂಡಲೇ ಸುಹಾಸ್ ಶೆಟ್ಟಿಯ ಹತ್ಯೆಗೈದ ಕೊಲೆಗಡುಕರನ್ನು ಬಂಧಿಸಬೇಕು. ಹಾಗೂ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಹಾಗೂ ಸಂತ್ರಸ್ತ ಗಾಯಾಳುಗಳಿಗೆ ಪರಿಹಾರ ಒದಗಿಸಬೇಕೆಂದು ಡಿವೈಎಫ್ಐ ದ‌ಕ ಜಿಲ್ಲಾ ಸಮಿತಿಯನ್ನು ಒತ್ತಾಯಿಸಿದೆ.

ಇದನ್ನು ಓದಿ:ಇಸ್ರೇಲ್ ಕಾಡ್ಗಿಚ್ಚು: ದಿಢೀರ್ ತುರ್ತು ಪರಿಸ್ಥಿತಿ ಘೋಷಣೆ

ಕಣ್ಣೂರಿನಲ್ಲಿ ಬೆಳಗ್ಗಿನ ಜಾವ ಚೂರಿ ಇರಿತಕ್ಕೊಳಗಾಗಿ ಚಿಂತಾಜನಕ ಸ್ಥಿತಿಯಲ್ಲಿ ನಗರದ ಖಾಸಗೀ ಆಸ್ಪತ್ರೆಯೊಂದರಲ್ಲಿ ದಾಖಲಾಗಿರುವ ನೌಶದ್ ಎಂಬಾತನ ಆರೋಗ್ಯ ಪರಿಸ್ಥಿತಿ ಬಗ್ಗೆ ಡಿವೈಎಫ್ಐ ಸಂಘಟನೆಯ ನಾಯಕರುಗಳ ನಿಯೋಗ ಇಂದು ಭೇಟಿ ನೀಡಿ ವಿಚಾರಿಸಿ ಧೈರ್ಯ ತುಂಬಿದೆ. ಮಂಗಳೂರು ನಗರದ ಪೊಲೀಸ್ ಇಲಾಖೆಯ ದಯನೀಯ ವೈಫಲ್ಯದಿಂದ ನಗರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಇತ್ತೀಚೆಗೆ ಮಾಬ್ ಲಿಂಚಿಂಗ್ ಪ್ರಕರಣದಿಂದಲೇ ಎಚ್ಚೆತ್ತುಕೊಳ್ಳಬೇಕಾಗಿದ್ದ ಪೊಲೀಸ್ ಇಲಾಖೆ ಅಗತ್ಯ ಕ್ರಮಗಳ ಕೈಗೊಳ್ಳದ ಕಾರಣ ಜಿಲ್ಲೆಯಲ್ಲಿ ಹಿಂಸಾಚಾರ ಹೆಚ್ಚಳಗೊಂಡಿದೆ. ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಆಡಳಿತದಲ್ಲಿದ್ದರೂ ದ.ಕ ಜಿಲ್ಲೆಯನ್ನು ಸಂಘಪರಿವಾರ ನಿಯಂತ್ರಣಕ್ಕೆ ಬಿಟ್ಟು ಕೊಟ್ಟಿದೆ ಎಂದರೆ ನಾಚಿಕೆಗೇಡಿನ ಸಂಗತಿ. ಇಷ್ಟೆಲ್ಲಾ ಅಹಿತಕರ ಘಟನೆ ನಡೆದಾಗಲೂ ಜಿಲ್ಲಾ ಉಸ್ತುವಾರಿ ಮಂತ್ರಿ ಜಿಲ್ಲೆಗೆ ದಾವಿಸಿಲ್ಲ ಪರಿಸ್ಥಿತಿಯ ನಿಯಂತ್ರಿಸಲು ಯಾವುದೇ ಕ್ರಮಗಳಿಲ್ಲ. ಸಂಘಪಾರಿವಾರದ ನಾಯಕರು ಹಿಂಸಾಚಾರಕ್ಕೆ ಮತ್ತು ಜಿಲ್ಲೆಯ ಬಂದಿಗೆ ಕರೆಕೊಟ್ಟರು ಈ ಬಗ್ಗೆ ಅವರ ವಿರುದ್ದ ಸೂಕ್ತ ಕಾನೂನು ಕ್ರಮಗಳನ್ನು ಕೈಕೊಳ್ಳಲು ಮುಂದಾಗಿಲ್ಲ. ಸರಕಾರದ ಇಂತಹ ಬೇಜಾವಾಬ್ದಾರಿ ನಡೆಗಳಿಂದ ಜನಸಾಮಾನ್ಯರು ಆತಂಕದಲ್ಲಿ ಬದುಕುವಂತಾಗಿದೆ. ಹಿಂಸೆಗೊಳಗಾಗಿ ಖಾಸಗೀ ಆಸ್ಪತ್ರೆಯಲ್ಲಿ ದಾಖಲಾಗಿರುವ ಮುಸ್ಲಿಂ ಸಮುದಾಯದ ಬಡ ಕೂಲಿ ಕಾರ್ಮಿಕ ಸಂತ್ರಸ್ತರಿಗೆ ಕನಿಷ್ಟ ಚಿಕಿತ್ಸೆಯ ವೆಚ್ಚವನ್ನು ಬರಿಸುವ ಭರವಸೆಯನ್ನು ನೀಡದ ಜಿಲ್ಲಾಡಳಿತದ ಕ್ರಮ ಅತ್ಯಂತ ಖಂಡನೀಯ ಎಂದು ದೂರಿದೆ.

ಇದನ್ನು ಓದಿ:ಅಂತಃಕರಣವಿಲ್ಲದ ವ್ಯವಸ್ಥೆಯ ಕರಣ ಹಾಗೂ ಕಾರಣಗಳು ; ಬಿ ಸುರೇಶ್

ಈ ಹಿನ್ನಲೆಯಲ್ಲಿ ಸರಕಾರ, ಪೊಲೀಸ್ ಇಲಾಖೆ ಅಲ್ಲಲ್ಲಿ ಹಿಂಸಾಚಾರಕ್ಕೆ ಪ್ರೇರಣೆ ನೀಡಿದ ಹಾಗೂ ಎಸಗಿದವರನ್ನು ಈ ಕೂಡಲೇ ಬಂಧಿಸಬೇಕು. ಶಾಂತಿ ಕದಡುವವರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು ಹಾಗೂ ಇರಿತಕ್ಕೊಳಗಾದ ಸಂತ್ರಸ್ತರಿಗೆ ಪರಿಹಾರ ಕ್ರಮ ಒದಗಿಸಬೇಕೆಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಒತ್ತಾಯಿಸಿದೆ. ನಿಯೋಗದಲ್ಲಿ ಡಿವೈಎಫ್ಐ ದ.ಕ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಕಾರ್ಮಿಕ ಮುಖಂಡರಾದ ಸುನೀಲ್ ಕುಮಾರ್ ಬಜಾಲ್, ಡಿವೈಎಫ್ಐ ಉಳ್ಳಾಲ ತಾಲೂಕು ಸಮಿತಿ ಅಧ್ಯಕ್ಷರಾದ ನಿತಿನ್ ಕುತ್ತಾರ್ , ಮಂಗಳೂರು ನಗರ ಸಮಿತಿ ಅಧ್ಯಕ್ಷರಾದ ಜಗದೀಶ್ ಬಜಾಲ್ ಮುಂತಾದವರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *