ನಾಮಪತ್ರ ಹಿಂಪಡೆಯುವಂತೆ ಒತ್ತಾಯ : ಆಡಿಯೋ ವೈರಲ್‌ ಬೆನ್ನಲ್ಲೆ ಸಚಿವ ಸೋಮಣ್ಣ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಬೆಂಗಳೂರು: ಚಾಮರಾಜನಗರದ ಜೆಡಿಎಸ್ ಅಭ್ಯರ್ಥಿ ಆಲೂರು ಮಲ್ಲು ಆಮಿಷವೊಡ್ಡಿ ನಾಮಪತ್ರ ಹಿಂಪಡೆಯಲು ಸಚಿವ ಸೋಮಣ್ಣ  ಒತ್ತಾಯಿಸಿದ್ದಾರೆ ಎನ್ನಲಾದ ಆಡಿಯೋ ವೈರಲ್  ಆಗಿದ್ದು,  ಚುನಾವಣಾ ಹೊತ್ತಿನಲ್ಲಿ ಭಾರೀ ಸಂಚಲನವನ್ನು ಉಂಟುಮಾಡಿದೆ.

ಜೆಡಿಎಸ್ ಈ ವಿಚಾರವನ್ನು ಅಸ್ತ್ರ ಮಾಡಿಕೊಂಡಿದ್ದು ಸೋಮಣ್ಣ ವಿರುದ್ಧ ಚುನಾವಣಾ ಆಯೋಗಕ್ಕೆ  ದೂರು ನೀಡಿದೆ. ಈ ಮಧ್ಯೆ ಆಡಿಯೋ ಸಂಬಂಧ ತನಿಖೆಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಆಡಿಯೋದಲ್ಲಿ ಇರುವುದಾದರೂಏನು ? 
ಸೋಮಣ್ಣ: ಏಯ್ ಮೊದ್ಲು ತಗೊಳಯ್ಯ. ಆಮೇಲೆ ಏನ್ ಬೇಕೋ ಮಾಡ್ತೀನಿ. ಏನಯ್ಯ ಮಲ್ಲು ನೀನು ನನಗೆ ಹಳೆಯ ಸ್ನೇಹಿತ. ಅವನ್ಯಾವನೋ ತೊಟ್ಟಿ ನನ್ ಮಗನ ಮಾತು ಕೇಳೋಕೆ ಹೋಗಬೇಡ. ನಿನಗೆ ಬದುಕೋದ್ಧಕ್ಕೆ ಏನು ಬೇಕೋ ಎಲ್ಲವೂ ಮಾಡ್ತೀನಿ. ಅಣ್ಣ ಇದ್ದಾರೆ. ಮೊದ್ಲು ವಾಪಸ್ ತಗೋ. ಆಮೇಲೆ ಬಾಕಿಯದ್ದು ಮಾತಾಡ್ತೀನಿ. ನನ್ನ ಮಾತು ಕೇಳು. ನಿನ್ನ ಹಿತ ಕಾಪಾಡೋದು ನನ್ನ ಜವಾಬ್ದಾರಿ. ಸುದೀಪಣ್ಣನ ಜವಾಬ್ದಾರಿ. ಮಲ್ಲು, ಮರಮ್‍ಕಲ್, ನಾನು, ಸುದೀಪಣ್ಣ ಮೂರು ಜನ ಇರ್ತೀವಿ. ಉಪ್ಪಾರರ ದೇವಸ್ಥಾನದಲ್ಲಿ ಇದ್ದೇನೆ. ಮೊದಲು ಆ ಕೆಲಸ ಮಾಡು. ನಿನಗೆ ಕೈ ಮುಗಿತೀನಿ.

ಜೆಡಿಎಸ್ ಅಭ್ಯರ್ಥಿ: ಇಲ್ಲ, ನಾನು ಯಾರ ಮಾತು ಕೇಳ್ಕೊಂಡು ನಿಂತಿಲ್ಲ. ವಾಪಸ್ ತಗೆಯೋದಕ್ಕೆ ಆಗಲ್ಲಣ್ಣ. ನಿಮ್ಮ ಜೊತೆಗೇ ಇರ್ತೀನಿ, ನೀವು ಹೇಳಂಗೆ ಇರ್ತೀನಿ ಬಿಡಣ್ಣ, ಮುಂದೆ ನೀವೇ ಮುಖ್ಯಮಂತ್ರಿ ಆಗಬೇಕು ಎಂದು ನಾನೂ ಬಯಸ್ತೀನಿ.

ಸೋಮಣ್ಣ: ಯಾವನೋ ಪೋಲಿ ನನ್ ಮಗನ ಮಾತು ಕೋಳ್ಕೊಂಡು ಮೊದಲು ವಾಪಸ್ ತಗೋ ಮಲ್ಲು. ಸರ್ಕಾರ ಬರ್ತದೆ. ಗೂಟದ ಕಾರು ಮಾಡಿ ಕೊಡ್ತೀವಿ. ಮೊದ್ಲು ತಗೋ, ದೇವರ ಮುಂದೆ ನಿಂತಿದ್ದೀವಿ. ಯಾರನ್ನೂ ಕೇಳೋಕೆ ಹೋಗಬೇಡ, ಜಿಟಿಜಿ ನಾವೆಲ್ಲ ಫ್ರೆಂಡ್ಸ್. ನಾವೆಲ್ಲ ಮಾತಾಡೋತ್ತೀವಿ. ಮೊದ್ಲು ವಾಪಸ್ ತಗೊ. ಈಗ ಟೈಮಿಲ್ಲ.

ಕುಮಾರಸ್ವಾಮಿ ಹೇಳಿದ್ದೇನು?
ಗೂಟದ ಕಾರು ಅಂದರೆ ಏನು? ಖಾಸಗಿ ಕಾರು ತೆಗೆದುಕೊಂಡು ಗೂಟಾ ಇಟ್ಟುಕೊಡ್ತಾರಾ? ಕಾಂಗ್ರೆಸ್ ನಾಯಕರು ನೋಡಿದರೆ ಬಿಜೆಪಿ ಶವಯಾತ್ರೆ ಅಂತಾರೆ. ಇವರು ನೋಡಿದ್ರೆ ಗೂಟದ ಕಾರ್ ಅಂತಾರೆ. ಇವರು ಯಾವ ಗೂಟದ ಕಾರ್ ಕೊಡ್ತಾರೆ ಗೊತ್ತಿಲ್ಲ. ಇವೆಲ್ಲ ಈಗ ಕೆಲಸ ಮಾಡುವುದಿಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಆತಂಕ ಶುರುವಾಗಿದೆ.

ಆಲೂರು ಮಲ್ಲು ಹೇಳಿದ್ದೇನು?
ನೂರಕ್ಕೆ ನೂರರಷ್ಟು ಸೋಮಣ್ಣ ಆಮಿಷ ಒಡ್ಡಿದ್ದು ನಿಜ. ನಾಮಪತ್ರ ವಾಪಾಸ್ ಪಡೆಯುವಂತೆ ತಿಳಿಸಿದರು. 50 ಲಕ್ಷ ಅಷ್ಟೇ ಅಲ್ಲ,ಸರ್ಕಾರ ಬಂದ್ರೆ ಗೂಟದ ಕಾರು ಕೊಡಿಸುವ ಆಮಿಷ ನಿಜ. 50 ಲಕ್ಷ ಅಲ್ಲ,ಒಂದು ಕೋಟಿ ಬೇಕಾದರೂ ಕೊಡ್ತೀನಿ ಅಂದರು. ಬಹಳ ಕಟುವಾಗಿ ಆಗಿ ಮಾತನಾಡಿದರು. ನಾನು ವಾಪಸ್‌ ಪಡೆಯುವುದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ : ಸಚಿವ ವಿ ಸೋಮಣ್ಣ ಜಾಮೀನು ಅರ್ಜಿ ವಜಾ; ಶೀಘ್ರದಲ್ಲೇ ಬಂಧನ ಸಾಧ್ಯತೆ

ಸೋಮಣ್ಣ ಹೇಳಿದ್ದೇನು?
ಆಡಿಯೋಗೂ ನನಗೂ ಸಂಬಂಧವಿಲ್ಲ. ನನ್ನದು ಯಾವುದೇ ವಿಚಾರ ಸಿಗುತ್ತಿಲ್ಲ. ನಾನು ಯಾವುದೋ ನಾಯಿ ನರಿಗಳಿಗೆ ಮಾತಿಗೆ ಮಾತನಾಡುವ ಪರಿಸ್ಥಿತಿ ಇಲ್ಲ. ನಾನು ದಡ್ಡ ಅಲ್ಲ. 45 ವರ್ಷ ರಾಜಕಾರಣ ಮಾಡಿದ್ದೇನೆ. ಚುನಾವಣಾ ಮುಗಿದ ಮೇಲೆ ಈ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *