ದಲಿತ, ಆದಿವಾಸಿ ವಿದ್ಯಾರ್ಥಿಗಳ ಹಕ್ಕಿಗಾಗಿ ಆಗ್ರಹ: ರೋಹಿತ್ ವೇಮುಲ ಕಾಯ್ದೆ ಜಾರಿಗೆ ಒತ್ತಾಯ

Please follow and like us:
ಬೆಂಗಳೂರು: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯ, ಸಾಂಸ್ಥಿಕ ಬಹಿಷ್ಕಾರ ಮತ್ತು ಕಿರುಕುಳ ತಡೆಗಟ್ಟಲು ರಾಜ್ಯ ಸರ್ಕಾರ ತಕ್ಷಣವೇ ರೋಹಿತ್ ವೇಮುಲ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ವಿವಿಧ ವಿದ್ಯಾರ್ಥಿ ಸಂಘಟನೆಗಳು ಹಾಗೂ ನಾಗರಿಕ ಸಮಾಜದ ಪ್ರತಿನಿಧಿಗಳು ಆಗ್ರಹಿಸಿದ್ದಾರೆ. ಈ ವಿಧಾನಮಂಡಲ ಅಧಿವೇಶನದಲ್ಲೇ ಕಾಯ್ದೆ ಜಾರಿಗೊಳಿಸದಿದ್ದರೆ ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.  ದಲಿತ,

ರೋಹಿತ್ ವೇಮುಲ ಅವರ ಸಾಂಸ್ಥಿಕ ಕೊಲೆಯು ದೇಶದ ವಿಶ್ವವಿದ್ಯಾಲಯಗಳಲ್ಲಿ ಬೇರೂರಿರುವ ಜಾತಿ ತಾರತಮ್ಯದ ವ್ಯವಸ್ಥೆಯನ್ನು ಅನಾವರಣಗೊಳಿಸಿತ್ತು. ದಲಿತ, ಆದಿವಾಸಿ ಹಾಗೂ ಅಂಚಿನ ಸಮುದಾಯಗಳ ವಿದ್ಯಾರ್ಥಿಗಳು ಇಂದಿಗೂ ಅವಮಾನ, ಬಹಿಷ್ಕಾರ, ಸಾಂಸ್ಥಿಕ ಕಿರುಕುಳ ಮತ್ತು ಶೈಕ್ಷಣಿಕ ಅವಕಾಶಗಳ ನಿರಾಕರಣೆಯನ್ನು ಎದುರಿಸುತ್ತಿದ್ದಾರೆ. ಮೀಸಲಾತಿ ನಿಯಮಗಳ ಸಮರ್ಪಕ ಅನುಷ್ಠಾನ ಹಾಗೂ ಸಂತ್ರಸ್ತರಿಗೆ ನ್ಯಾಯ ಒದಗಿಸುವ ವ್ಯವಸ್ಥೆಗಳಲ್ಲೂ ಕೊರತೆಯಿದೆ ಎಂದು ಮುಖಂಡರು ಆತಂಕ ವ್ಯಕ್ತಪಡಿಸಿದರು.

ಕಳೆದ ಬಜೆಟ್‌ನಲ್ಲಿಯೇ ರೋಹಿತ್ ವೇಮುಲ ಮಸೂದೆ ಜಾರಿಗೊಳಿಸುವುದಾಗಿ ಘೋಷಿಸಲಾಗಿತ್ತು. ಹೀಗಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ಕಾಂಗ್ರೆಸ್ ನೀಡಿರುವ ಭರವಸೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಜಿಕೆವಿಕೆಯಲ್ಲಿ ವಿದ್ಯಾರ್ಥಿ ವಿಷ ಸೇವಿಸಿದ ಘಟನೆ ಪ್ರಸ್ತಾಪ

ಸಭೆಯಲ್ಲಿ ಮಾತನಾಡಿದ ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯ ಡಾ. ನಂದೀಶ್, ಜಿಕೆವಿಕೆಯಲ್ಲಿ ಶುಲ್ಕ ಪಾವತಿಸಲು ಸಾಧ್ಯವಾಗದ ಕಾರಣಕ್ಕೆ ಡೀನ್ ಎದುರಿನಲ್ಲೇ ವಿದ್ಯಾರ್ಥಿಯೊಬ್ಬ ವಿಷ ಸೇವಿಸಿದ ಘಟನೆಯನ್ನು ಪ್ರಸ್ತಾಪಿಸಿದರು. ವಿದ್ಯಾರ್ಥಿಗಳು ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗಿ ಧ್ವನಿ ಎತ್ತದಂತೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿ, ಕಾಯ್ದೆಯನ್ನು ತುರ್ತಾಗಿ ಜಾರಿಗೊಳಿಸುವಂತೆ ಆಗ್ರಹಿಸಿದರು.

ಎಐಎಸ್‌ಎ ಸಂಘಟನೆಯ ಸ್ಯಾನಿ ಅವರು ಪ್ರವೇಶ ಪ್ರಕ್ರಿಯೆಯಲ್ಲಿ ನಡೆದ ತಾರತಮ್ಯದ ಘಟನೆಯನ್ನು ವಿವರಿಸಿದರು. ಕಡಿಮೆ ರ‍್ಯಾಂಕ್ ಪಡೆದಿದ್ದಾನೆ ಎಂದು ತಿಳಿದ ಬಳಿಕ ಬೋಧಕ ವರ್ಗದವರು ವಿದ್ಯಾರ್ಥಿಯ ಜಾತಿಯನ್ನು ಎಲ್ಲರ ಎದುರಲ್ಲೇ ಪ್ರಶ್ನಿಸಿದ್ದಾರೆ ಎಂದು ಆರೋಪಿಸಿದರು. ದಲಿತ

ಶಿಕ್ಷಣ ಸಂಸ್ಥೆಗಳಲ್ಲಿ ಅಭಿಯಾನಕ್ಕೆ ಕರೆ

ಎಸ್‌ಐಒ ಸಂಘಟನೆಯ ಹಯ್ಯಾನ್ ಅವರು ಕಾಯ್ದೆಯನ್ನು ಶಾಸನ ರೂಪದಲ್ಲಿ ಜಾರಿಗೊಳಿಸುವಂತೆ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಪಕ ಅಭಿಯಾನ ಸಂಘಟಿಸಲು ಕರೆ ನೀಡಿದರು. ಸಭೆಯಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತಾವು ಎದುರಿಸಿದ ನೇರ ಮತ್ತು ಪರೋಕ್ಷ ತಾರತಮ್ಯದ ಘಟನೆಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ರೋಹಿತ್ ವೇಮುಲ ಅವರ ಸಹಪಾಠಿ ಡಾ. ದೊಂಥ ಪ್ರಶಾಂತ್, ಅಭಿಯಾನದ ಸಂಚಾಲಕರಾದ ಹುಲಿಕುಂಟೆ ಮೂರ್ತಿ ಮತ್ತು ವಿನಯ್, ವಕೀಲರಾದ ಮೃದುಲ ಮತ್ತು ಮಂಗಳೂರು ವಿಜಯ, ಜಿಕೆವಿಕೆ ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯ ರಾಹುಲ್, ಎನ್‌ಎಲ್‌ಎಸ್‌ಐಯು ಸಹಾಯಕ ಪ್ರಾಧ್ಯಾಪಕಿ ಡಾ. ಆಶ್ನ ಸಿಂಗ್, ಅಂಬೇಡ್ಕರೈಟ್ ಇಂಟೆಲೆಕ್ಚುವಲ್ ಫೋರಂನ ನಾಗರಾಜ್ ಮೌರ್ಯ, ಎಐಎಲ್‌ಎಜೆ ಸಂಘಟನೆಯ ಕ್ಲಿಫ್ಟನ್, ಎಪಿಸಿಆರ್ ರಾಜ್ಯ ಸಂಯೋಜಕ ಮೊಹಮ್ಮದ್ ಪೀರ್ ಹಾಗೂ ವಿಮೋಚನಾ ಸಂಘಟನೆಯ ಸೆಲಿನ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ದಲಿತ,

ಇದನ್ನೂ ಓದಿ: ಕೋಲ್ಕತ್ತಾದಲ್ಲಿ ಪುಸ್ತಕ ಮಳಿಗೆ ಮೇಲಿನ ದಾಳಿ ಖಂಡಿಸಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ಮೆರವಣಿಗೆ

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಗಟ್ಟಲು ಪರಿಣಾಮಕಾರಿ ಕಾನೂನು ರೂಪಿಸುವ ಮೂಲಕ ದಲಿತ ಮತ್ತು ಆದಿವಾಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂಬುದು ಸಭೆಯ ಪ್ರಮುಖ ಆಗ್ರಹವಾಗಿತ್ತು. ರೋಹಿತ್ ವೇಮುಲ ಕಾಯ್ದೆ

ಇದನ್ನೂ ನೋಡಿ: Jantar Mantar Resistance : Turning Insult to Pride | Sudhanva Deshpande: Janashakthi Media

Please follow and like us:
Donate Janashakthi Media

Leave a Reply

Your email address will not be published. Required fields are marked *