ಬೆಳಗಾವಿ: ಕಬ್ಬಿನ ಬೆಲೆ ನಿಗದಿ ಮಾಡುವಂತೆ ಮಾಡುತ್ತಿರುವ ರೈತರ ಹೋರಾಟ ಈಗ ಉಗ್ರರೂಪ ತಾಳಿದೆ. ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ದಾಳಿ ನಡೆಸಿದ್ದು, ರೊಚ್ಚಿಗೆದ್ದ ರೈತರು ಪೊಲೀಸರು ಹಾಗೂ ಪೊಲೀಸ್ ವಾಹನಗಳ ಮೇಲೆ ಕಲ್ಲು ಬೀಸಿದ್ದಾರೆ.
ಪ್ರತಿ ಟನ್ ಕಬ್ಬಿಗೆ 3,500 ರೂ. ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಮಾಡುತ್ತಿರುವ ರೈತರ ಹೋರಾಟ ತೀವ್ರಗೊಂಡಿದೆ. ಬೆಳಗಾವಿ ಜಿಲ್ಲೆಯ ಹತ್ತರಗಿಯಲ್ಲಿ ಈ ಘಟನೆ ಜರುಗಿದೆ. ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಿದ್ದರಿಂದ ವಾಹನ ಜಖಂ ಆಗಿವೆ. ಸ್ಥಳದಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು, ಪೊಲೀಸರೇ ಸ್ಥಳದಿಂದ ಓಡಿ ಹೋಗಿದ್ದಾರೆ.
ಇದನ್ನೂ ಓದಿ: ಪಾಟ್ನಾ | ಉಪ ಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ವಾಹನದ ಮೇಲೆ ಚಪ್ಪಲಿ ಎಸೆತ
ಸಂಚಾರಕ್ಕೆ ಮುಕ್ತ, ಮತ್ತೆ ಹೋರಾಟ
ಇನ್ನು ಪುನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಬಳಿಯ ಹೆದ್ದಾರಿಯನ್ನು ರೈತರು ಬಂದ್ ಮಾಡಿದ್ದರು. ಹುಕ್ಕೇರಿ ತಾಲೂಕಿನ ಹೆದ್ದಾರಿಗೆ ಏಕಾಏಕಿ ನುಗ್ಗಿ ಒಂದು ಗಂಟೆಗಳ ಕಾಲ ಹೆದ್ದಾರಿ ಬಂದ್ ಮಾಡಿದ್ದರು.
ರೈತ ಮುಖಂಡರು, ಪೊಲೀಸರ ಮನವಿಯಿಂದ ಹೆದ್ದಾರಿ ಬಂದ್ ತಾತ್ಕಾಲಿಕವಾಗಿ ಕೈಬಿಡಲಾಗಿದೆ. ಪುನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವೀಸ್ ರಸ್ತೆಗೆ ಹೋರಾಟ ಶಿಫ್ಟ್ ಆಗಿದೆ. ಸರ್ಕಾರದ ತೀರ್ಮಾನ ನೋಡಿಕೊಂಡು ಹೆದ್ದಾರಿ ಬಂದ್ ಮಾಡೋ ಬಗ್ಗೆ ರೈತರ ನಿರ್ಧಾರ ಮಾಡಲಿದ್ದರು.
ಆದರೆ ಈಗ ಮತ್ತೆ ಹೆದ್ಧಾರಿಗೆ ಬಂದು ರಸ್ತೆ ತಡೆ ಪ್ರಾರಂಭಿಸಿದ್ದಾರೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹತ್ತಿರಗಿ ಟೋಲ್ ಬಳಿ ಪ್ರತಿಭಟನೆ ನಡೆಸಲಾಗಿದ್ದು, ಹೆದ್ದಾರಿಗೆ ಅಡ್ಡಲಾಗಿ ಕುಳಿತು ರಸ್ತೆ ತಡೆ ನಡೆಸಿದಾರೆ. ಪೋಲಿಸರ ಮನವಿಗೂ ಡೋಂಟ್ ಕೇರ್ ಎನ್ನದೇ ರೈತರು ಮಾಡಿದ್ದಾರೆ. ಈ ಮೂಲಕ ಮತ್ತೆ ರಾಷ್ಟ್ರೀಯ ಹೆದ್ಧಾರಿ 4 ಸಂಪೂರ್ಣ ಬಂದ್ ಆಗಿದೆ.
ಇದನ್ನೂ ನೋಡಿ: ಜ್ಞಾನ ಸಾಹಿತ್ಯಕ್ಕೆ ನಿರಂಜನರ ಕೊಡುಗೆ – ಎಂ.ಜಿ.ಹೆಗಡೆ Janashakthi Media
