ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗಾಗಿ ಆಗ್ರಹ; ಅಹೋರಾತ್ರಿ ಅನಿರ್ಧಿಷ್ಟಾವಧಿ ಸತ್ಯಾಗ್ರಹ

35 ವರ್ಷಗಳ ಒಳ ಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮುಖಂಡರುಗಳ ಸಾಮೂಹಿಕ ನಾಯಕತ್ವದಲ್ಲಿ ಅಂತಿಮ ಹೋರಾಟ
ಬೆಂಗಳೂರು: ಸಾಮಾಜಿಕ ನ್ಯಾಯಕ್ಕಾಗಿ ಒಳ ಮೀಸಲಾತಿ ಜಾರಿಯಾಗಬೇಕೆಂದು 30 ವರ್ಷಗಳಿಗೂ ಅಧಿಕ ಕಾಲದಿಂದ ಪರಿಶಿಷ್ಟ ಜಾತಿಯಲ್ಲಿನ ತಳ ಸಮುದಾಯಗಳು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿರುವುದು ನಿಮಗೆಲ್ಲ ಗೊತ್ತೆ ಇದೆ. ಇತ್ತೀಚಿನ ವರ್ಷಗಳಲ್ಲಿ ಒಳ ಮೀಸಲಾತಿ ಹೋರಾಟವು ಕೇವಲ ಒಂದು ಜಾತಿಗೆ ಸೀಮಿತವಾದ ಹೋರಾಟವೆಂಬ ಅಪವಾದ ಹುಸಿಯಾಗಿದೆ. 101 ಜಾತಿಗಳು ಹಂಚಿ ತಿನ್ನುವ ಹೋರಾಟವೆಂಬುದು ಜಗಜ್ಜಾಹಿರಾಗಿದೆ. ಜಾತಿ

ಅಲ್ಲದೇ ಸಾಮಾಜಿಕ ನ್ಯಾಯವು ಈ ನೆಲದ ಹಕ್ಕಾಗಿದೆ. ಸುಪ್ರೀಂ ಕೋರ್ಟ್‌ ಸಹ 2024ರ ಆಗಸ್ಟ್‌ 1ರಂದು ತೀರ್ಪಿತ್ತು ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ ಎಂದು ಘೋಷಿಸಿದೆ. 35 ವರ್ಷಗಳ ಒಳಮೀಸಲಾತಿಗಾಗಿ ನಡೆಸಿದ ಹೋರಾಟಕ್ಕೆ ನಾನಾ ಕಾರಣ ಹೇಳುತ್ತಾ ಬಂದ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ನೊಂದ ಜನರಿಗೆ ಅನ್ಯಾಯವೆಸಗುತ್ತಾ ಬಂದಿದ್ದಾರೆ. ಈಗ ಕರ್ನಾಟಕ ಸರ್ಕಾರ ನೇಮಿಸಿದ್ದ ಜಸ್ಟಿಸ್‌ ನಾಗಮೋಹನ್‌ ದಾಸ್‌ರವರ ಆಯೋಗವು ವೈಜ್ಞಾನಿಕ ಸಮೀಕ್ಷೆ ನಡೆಸಿ, ಸರ್ವ ದತ್ತಾಂಶಗಳನ್ನು ಒಳಗೊಂಡ ವರದಿಯನ್ನು ಸಲ್ಲಿಸಿದೆ.

ತಮ್ಮ ಸರ್ಕಾರದ ಮಳೆಗಾಲದ ಅಧಿವೇಶನ ಆರಂಭವಾಗಲಿದೆ. ಸದರಿ ಅಧಿವೇಶನದಲ್ಲಿಯೇ ಒಳಮೀಸಲಾತಿ ವಿಚಾರವು ಸರ್ವಪಕ್ಷಗಳ ಸರ್ವಾನುಮತದೊಂದಿಗೆ ಅನುಮೋದನೆಯಾಗಿ ಗೌರವಾನ್ವಿತ ರಾಜ್ಯಪಾಲರ ಅಂಕಿತವಾಗಬಹುದಾದ ಎಲ್ಲಾ ಸಾಧ್ಯತೆಗಳು ಬೆಟ್ಟದಷ್ಟಿವೆ. ಇದರ ಬದಲಿಗೆ ಮತ್ತೊಂದು ಸಂಪುಟ ಉಪಸಮಿತಿಯ ರಚನೆ ಅಥವಾ ತಜ್ಞರ ಸಲಹೆಯ ನೆಪದಲ್ಲಿ ಮತ್ತಷ್ಟು ತಿಂಗಳುಗಳ ಕಾಲ ಮುಂದೂಡುವುದನ್ನು ನಾವು ಒಪ್ಪುವುದಿಲ್ಲ.

ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ಮಾಧ್ಯಮಗಳ ಮೇಲಿನ ನಿರ್ಬಂಧದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಈಗಾಗಲೇ ಒಳ ಮೀಸಲಾತಿ ಕಾರಣಕ್ಕೆ ನೇಮಕಾತಿಗಳನ್ನು ತಡೆಹಿಡಿದಿರುವುದರಿಂದ ಎಲ್ಲಾ ಸಮುದಾಯದ ಯುವಜನರು ಕಾಯುತ್ತಿದ್ದಾರೆ. ಹಾಗಾಗಿ ಒಳಮೀಸಲಾತಿಯ ತುರ್ತು ಅನುಷ್ಠಾನಕ್ಕೆ ಆಗ್ರಹಿಸಿ ಆಗಸ್ಟ್ 11ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ಧಿಷ್ಟಾವಧಿ ಅಹೋರಾತ್ರಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲು ತೀರ್ಮಾನಿಸಿದ್ದೇವೆ. ಈ ಬಾರಿ ಒಳಮೀಸಲಾತಿ ಜಾರಿಯ ಆದೇಶ ಪ್ರತಿ ಪಡೆದು ನಮ್ಮ ಮನೆಗಳಿಗೆ ಊರುಗಳಿಗೆ ಹಿಂತಿರುಗುವುದಾಗಿ ನಿರ್ಧರಿಸಿದ್ದೇವೆ.

ನೀವು ಕೂಡ ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನಲೆಯಲ್ಲಿ ಒಳ ಮೀಸಲಾತಿ ಜಾರಿ ಮಾಡಿಯೇ ಮಾಡುತ್ತೇನೆ ಎಂದು ಒಳಮೀಸಲಾತಿ ಗ್ಯಾರಂಟಿ ನೀಡಿದ್ದೀರಿ ಮತ್ತು ಹಲವಾರು ಬಾರಿ ಹೇಳಿದ್ದೀರಿ. ಆಗಸ್ಟ್‌ 16ರಂದು ವಿಶೇಷ ಸಚಿವ ಸಂಪುಟ ಸಭೆ ಕೂಡ ಕರೆದಿದ್ದೀರಿ. ಅಲ್ಲಿಯೇ ಎಲ್ಲ ಅಡ್ಡಿ ಆತಂಕಗಳನ್ನು ನಿವಾರಿಸಿ ಒಳ ಮೀಸಲಾತಿ ಜಾರಿ ತೀರ್ಮಾನ ಘೋಷಿಸುತ್ತೀರಿ ಎಂದು ನಂಬಿದ್ದೇವೆ. ನಿರೀಕ್ಷೆ ಹುಸಿಗೊಳಿಸುವುದಿಲ್ಲ ಎಂಬ ಭರವಸೆಯೊಂದಿಗೆ ಕೆಳಗಿನ ಹಕ್ಕೊತ್ತಾಯಗಳನ್ನು ಮುಂದಿಡುತ್ತಿದ್ದೇವೆ.

ನಿರ್ಣಯಗಳು:

• ಆಗಸ್ಟ್‌ 15 ರ ಸ್ವಾತಂತ್ರ್ಯ ದಿನಾಚರಣೆಯಂದು ಶೋಷಿತ ಸಮುದಾಯಗಳಿಗೆ ಅದರಲ್ಲೂ ಒಳಮೀಸಲಾತಿ ವಿಷಯದಲ್ಲಿ ಇನ್ನೂ ನ್ಯಾಯ ಸಿಗದ ಕಾರಣ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು.

• ಆಗಸ್ಟ್‌ 15ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಒಳಮೀಸಲಾತಿ ಜಾರಿಯಾಗದ ಕಾರಣ ಸ್ವಾತಂತ್ರ್ಯ ಇನ್ನೂ ದಕ್ಕಿಲ್ಲ ಎಂಬ ಪ್ರತಿಭಟನೆಯನ್ನು ನಡೆಸಲಲು ತೀರ್ಮಾನಿಸಲಾಗಿದೆ.

• ಆಗಸ್ಟ್‌ 16ರ ಸಚಿವ ಸಂಪುಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಗಳಿಂದ ಒಳಮೀಸಲಾತಿ ಹೋರಾಟಗಾರರೆಲ್ಲರೂ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವುದು.

ಸರ್ಕಾರಕ್ಕೆ ಹಕ್ಕೊತ್ತಾಯಗಳು

• ಜಸ್ಟಿಸ್ ನಾಗಮೋಹನ್ ದಾಸ್‌ರವರ ವರದಿಯನ್ನು ಅಧಿವೇಶನದಲ್ಲಿ ಅಂಗೀಕರಿಸಿ, ಒಳಮೀಸಲಾತಿ ಜಾರಿಗೊಳಿಸಬೇಕು,

• ಮತ್ತೊಂದು ಉಪ ಸಮಿತಿ ರಚಿಸದೇ, ಸಚಿವ ಸಂಪುಟದಲ್ಲಿ ಜಾರಿಗೆ ಒಮ್ಮತದ ನಿರ್ಧಾರ ಕೈಗೊಳ್ಳಬೇಕು.

• ಮುಖ್ಯಮಂತ್ರಿಗಳು ತಾವೇ ನೀಡಿದ್ದ ಒಳಮೀಸಲಾತಿ ಗ್ಯಾರಂಟಿಯನ್ನು ತಮ್ಮ ಪರಮಾಧಿಕಾರ ಬಳಸಿ ಜಾರಿಮಾಡಬೇಕು.

• ಒಳ ಮೀಸಲಾತಿ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಕೈಬಿಡಬೇಕು
ಧನ್ಯವಾದಗಳು

ಬಸವರಾಜ್‌ ಕೌತಾಳ್‌, ಅಂಬಣ್ಣ ಅರೋಲಿಕರ್‌, ಎಸ್‌ ಮಾರೆಪ್ಪ, ಪ್ರೊ. ದೊರೆರಾಜು ಕೇಶವಮೂರ್ತಿ, ಹೆಣ್ಣೂರು ಶ್ರೀನಿವಾಸ್‌, ಡಿ.ಟಿ ವೆಂಕಟೇಶ್‌, ಉಮಾದೇವಿ, ಪಿಚ್ಚಳ್ಳಿ ಶ್ರೀನಿವಾಸ್‌, ಸಿದ್ದಲಿಂಗಯ್ಯ ಕಮಲಾನಗರ, ಶಿವಲಿಂಗಮ್‌, ಭೀಮನಕೆರೆ ಶಿವಮೂರ್ತಿ, ಶಿವಲಿಂಗಣ್ಣ, ಪಾರ್ತಿಭನ್‌, ಮಂಜು PTCL , ಡಾ ಹುಲಿಕುಂಟೆ ಮೂರ್ತಿ, ಮುತ್ತುರಾಜ್‌, ಸಣ್ಣ ಮಾರೆಪ್ಪ, ಶಿವರಾಯ ಅಕ್ಕರಕಿ, ಕರಿಯಪ್ಪ ಗುಡಿಮನಿ, ಜೆ ಬಿ ರಾಜು, ಚಾವಡಿ ಲೋಕೇಶ್‌, ನರಸಿಂಹಮೂರ್ತಿ, ಓಬಳೇಶ್‌ ಭಾಗವಹಿಸಿದ್ದರು.

ಇದನ್ನೂ ನೋಡಿ: ವಚನಾನುಭವ – 31 | ಅಂಬಿಗರ ಚೌಡಯ್ಯನ ವಚನ – ಕುಲಹೀನ ಶಿಷ್ಯಂಗೆ ಅನುಗ್ರಹವ ಮಾಡಿ Janashakthi Media

Donate Janashakthi Media

Leave a Reply

Your email address will not be published. Required fields are marked *