ಗುಲ್ವಾಡಿ : ಸರ್ಕಾರಿ ಬಸ್ಸಿಗಾಗಿ ಆಗ್ರಹಿಸಿ ಪ್ರತಿಭಟನೆ

ಕುಂದಾಪುರ: ಜೂನ್ 22 ರಂದು  ಕುಂದಾಪುರ ಮಾರ್ಗವಾಗಿ ತಲ್ಲೂರು – ಹಟ್ಟಿಯಂಗಡಿ – ಗುಡ್ಡಿಯಂಗಡಿ – ಕರ್ಕಿ – ಗುಲ್ವಾಡಿ ಗ್ರಾಮಕ್ಕೆ ಶೀಘ್ರವಾಗಿ ಕೆಎಸ್ಸಾರ್ಟಿಸಿ ಬಸ್ ಓಡಿಸಲು ಆಗ್ರಹಿಸಿ ಇಂದು ಗುಲ್ವಾಡಿ ಗ್ರಾಮ ಪಂಚಾಯಿತ್ ಎದುರು ಸಿಪಿಎಂ ಗುಲ್ವಾಡಿ ಸ್ಥಳೀಯ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಧರಣಿ ನಡೆಸಿದರು.

ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಬೈಂದೂರು ವಲಯ ಸಮಿತಿ ಮುಖಂಡೆ ನಾಗರತ್ನ ನಾಡ ಅವರು  ಸರಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯನ್ನು ಎಲ್ಲಾ ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕು.ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ನೀಡುವ ಸೌಲಭ್ಯಗಳನ್ನು ಅವಹೇಳನ ಮಾಡುತ್ತಿರುವುದನ್ನು ಖಂಡಿಸಿದ್ದಾರೆ. ಮಶಕ್ತಿ ಯೋಜನೆ ಮಹಿಳೆಯರ ಹಕ್ಕು ಈ ಯೋಜನೆ ಯಶಸ್ಸಿಗೆ ಗ್ರಾಮಸ್ಥರು ಕೆಎಸ್‌ಆರ್‌ಟಿಸಿ ಬಸ್‌ನ್ನು  ಪ್ರೋತ್ಸಾಹಿಸಬೇಕು ಎಂದು ಸಾರ್ವಜನಿಕರಿಗೆ ಕರೆಕೊಟ್ಟರು.

ಇದನ್ನೂ ಓದಿ:ಮಹಿಳೆಯರ ‘ಉಚಿತ ಪ್ರಯಾಣ’ಕ್ಕೆ ಇನ್ಮುಂದೆ ‘ಒರಿಜಿನಲ್ ಐಡಿ’ ಬೇಕಿಲ್ಲ -ಕೆಎಸ್‌ಆರ್‌ಟಿಸಿ ಆದೇಶ

ಸ್ಥಳೀಯ ಸಮಿತಿಯ ಕಾರ್ಯದರ್ಶಿ ಜಿ.ಡಿ ಪಂಜು ಪೂಜಾರಿ ಮಾತನಾಡಿ ಗುಲ್ವಾಡಿ ಡ್ಯಾಂ ನಲ್ಲಿನ ಆಸುಪಾಸಿನ ನಿವಾಸಿಗಳಾದ ವಿದ್ಯಾರ್ಥಿಗಳು,ಕಾರ್ಮಿಕರು, ವಯೋವ್ರದ್ಧರು ಕುಂದಾಪುರ ಪೇಟೆಗೆ ಹೋಗಲು ಮಾವಿನ ಕಟ್ಟೆ ಮೂಲಕ ಸುಮಾರು 10-12 ಕಿ,ಮೀ ನಡೆದುಕೊಂಡೆ ಹೋಗಿ ಬರಬೇಕಾಗಿದೆ.ಗುಲ್ವಾಡಿ ಗ್ರಾಮದ ಸಾರಿಗೆ ಸಮಸ್ಯೆಯನ್ನು ಬಗೆಹರಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪಕ್ಷದ ಮುಖಂಡ ಚಂದ್ರಶೇಖರ ವಿ, ಪ್ರತಿಭಟನೆಯಲ್ಲಿ ಸಿಪಿಎಂ ಪಕ್ಷದ ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ವೆಂಕಟೇಶ್ ಕೋಣಿ,  ಶೀಲಾವತಿ ಪಡುಕೋಣೆ, ರೆಹಮಾನ್, ನೀಲಾ , ಸ್ಥಳೀಯ ಸಮಿತಿ ಮುಖಂಡರಾದ ಅಣ್ಣಪ್ಪ ಅಬ್ಬಿಗುಡ್ಡಿ, ಕುಂದಾಪುರ ವಲಯ ಕಾರ್ಯದರ್ಶಿ ಎಚ್ ನರಸಿಂಹ, ಜಿ.ಬಿ ಮಹಮ್ಮದ್, ನಾಗರಾಜ, ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣೇಶ್ ಹೆಬ್ಬಾರ್ ಅವರ ಮೂಲಕ ಸಾರಿಗೆ ಪ್ರಾಧಿಕಾರ ಅಧಿಕಾರಿಗೆ ಮನವಿ ನೀಡಲಾಯಿತು.

Donate Janashakthi Media

Leave a Reply

Your email address will not be published. Required fields are marked *