ದೆಹಲಿ ನೂತನ ಮುಖ್ಯಮಂತ್ರಿ ರೇಖಾ ಗುಪ್ತ –ನಾಳೆ ಪ್ರಮಾಣವಚನ

ನವದೆಹಲಿ: ದೆಹಲಿ ನೂತನ ಸಿಎಂ ಆಗಿ ರೇಖಾ ಗುಪ್ತ (Rekha Gupta) ಅವರನ್ನು ಆಯ್ಕೆ ಮಾಡಲಾಗಿದೆ. ಮಹಿಳಾ ಅಭ್ಯರ್ಥಿಗೆ ಬಿಜೆಪಿ ಮಣೆ ಹಾಕಿದೆ. ನಾಳೆ ಮಧ್ಯಾಹ್ನ 12 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ರೇಖಾ ಗುಪ್ತ ಬನಿಯಾ ಸಮುದಾಯಕ್ಕೆ ಸೇರಿದವರು. ಅರವಿಂದ್‌ ಕೇಜ್ರಿವಾಲ್‌ ಕೂಡ ಸೇರಿದವರು. ದೆಹಲಿಯಲ್ಲಿ ಎಬಿವಿಪಿ ಕೂಡ ರಾಜಕೀಯ ಆರಂಭಿಸಿದೆ.

ಇದನ್ನು ಓದಿ :ಬೆಂಗಳೂರು| ಬೇಡಿಕೆಗಳನ್ನು ಈಡೇರಿಸುವಂತೆ ಅತಿಥಿ ಶಿಕ್ಷಕರು ಆಗ್ರಹ

ಇದೇ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿರುವ ರೇಖಾ ಅವರು ಹರಿಯಾಣ ಮೂಲದವರು. ಆರ್‌ಎಸ್‌ಎಸ್‌ ಹಿನ್ನೆಲೆ ಕೂಡ ಇದೆ. ದೆಹಲಿಯಲ್ಲಿ ಬಿಜೆಪಿಯ ಎರಡನೇ ಮುಖ್ಯಮಂತ್ರಿ ಆಗಲಿದ್ದಾರೆ. ಇದಕ್ಕೂ ಮೊದಲು ಸುಷ್ಮಾ ಸ್ವರಾಜ್‌ ಬಿಜೆಪಿಯಿಂದ ಮಹಿಳಾ ಸಿಎಂ ಆಗಿದ್ದರು.

ಶಾಲಿಮಾರ್ ಬಾಗ್‌ ಕ್ಷೇತ್ರದ ಶಾಸಕಿ ರೇಖಾ ಗುಪ್ತ ದೆಹಲಿಯ 4ನೇ ಮಹಿಳಾ ಮುಖ್ಯಮಂತ್ರಿ ಸಾಲಿಗೆ ಸೇರಿದ್ದಾರೆ. ಸುಷ್ಮಾ ಸ್ವರಾಜ್‌, ಶೀಲಾ ದೀಕ್ಷಿತ್‌, ಅತಿಶಿ ದೆಹಲಿ ಮಹಿಳಾ ಸಿಎಂ ಆಗಿದ್ದರು.

1996–1997 ರಲ್ಲಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು. 2007 ರಲ್ಲಿ ಉತ್ತರಿ ಪಿತಂಪುರನಿಂದ ದೆಹಲಿ ಕೌನ್ಸಿಲರ್ ಚುನಾವಣೆಗೆ ಆಯ್ಕೆಯಾದರು. 2012 ರಲ್ಲಿ ಉತ್ತರ ಪಿತಂಪುರದಿಂದ ಮರು ಆಯ್ಕೆಯಾಗಿದ್ದರು.

ಈ ಬಾರಿಯ ಚುನಾವಣೆಯಲ್ಲಿ ಎಎಪಿಯ ಬಂದಾನ ಕುಮಾರಿ ಅವರನ್ನು ಸೋಲಿಸುವ ಮೂಲಕ 29,595 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *