ಕೋವಿಡ್‌ ಪ್ರಕರಣಗಳ ಇಳಿಕೆ: ಸೋಮವಾರದಿಂದ ನಿರ್ಬಂಧ ಸಡಿಲಿಕೆ: ಸಿಎಂ ಅರವಿಂದ್ ಕೇಜ್ರಿವಾಲ್

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್‌ ಸೋಂಕಿತರ ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಪರಿಣಾಮದಿಂದ ಬಿಗಿಯಾದ ಕ್ರಮವನ್ನು ಸೋಮವಾರದಿಂದ ಹಂತ ಹಂತವಾಗಿ ಆದ್ಯತಾ ಕ್ಷೇತ್ರಗಳಿಗೆ ಅನುವು ಮಾಡಿಕೊಂಡು ತೆರೆವುಗೊಳಿಸಲು ಪ್ರಕ್ರಿಯೆ ಆರಂಭವಾಗಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಕಳೆದ 24 ಗಂಟೆಗಳ ಅವಧಿಯಲ್ಲಿ ದೆಹಲಿಯಲ್ಲಿ 1,100 ಸೋಂಕು ಪ್ರಕರಣಗಳು ವರದಿಯಾಗಿದೆ. ದೆಹಲಿಯ ಸೋಂಕಿನ ಪ್ರಕರಣಗಳು ಶೇಕಡಾ 1.5ಕ್ಕೆ ಇಳಿಕೆಯಾಗಿದೆ. ಹೀಗಾಗಿ  ಜಾರಿಯಲ್ಲಿರುವ ಕೋವಿಡ್‌ ಮಾರ್ಗಸೂಚಿಯ ಲಾಕ್‌ಡೌನ್‌ ಅನ್ನು ಸೋಮವಾರಕ್ಕೆ  ಅಂತ್ಯವಾಗಲಿದೆ. ಅಂದಿನಿಂದ ಹಂತ ಹಂತವಾಗಿ ಕೆಲವು ಚಟುವಟಿಕೆಗಳ ಕಾರ್ಯಾರಂಭಕ್ಕೆ ಅನುವು ಮಾಡಿಕೊಡಲಾಗಿದೆ. ಎಂದು ತಿಳಿಸಿದರು.

ತಜ್ಞರ ಸಲಹೆಯಂತೆ ಕಾರ್ಯಚಟುವಟಿಕೆಗಳ ಕಾರ್ಯಾರಂಭಕ್ಕೆ ಹಂತ ಹಂತವಾಗಿ ಆರಂಭಿಸಲು ಆಧ್ಯತೆ ನೀಡಲಾಗಿದೆ. ಸೋಮವಾರ ಬೆಳಗ್ಗೆ 5 ಗಂಟೆಗೆ ಲಾಕ್‌ಡೌನ್ ಅಂತ್ಯವಾಗಲಿದ್ದು, ಪ್ರಮುಖವಾಗಿ ಅದರ ಭಾಗವಾಗಿ ಕಟ್ಟಡ ನಿರ್ಮಾಣ ಚಟುವಟಿಕೆ ಮತ್ತು ಕಾರ್ಖಾನೆಗಳನ್ನು ಮೊದಲು ತೆರೆಯಲಾಗುತ್ತದೆ. ಇದರಿಂದ  ದಿನಗೂಲಿ ಕಾರ್ಮಿಕರಿಗೆ ನೆರವಾಗಲಿದೆ ಎಂದು ತಿಳಿಸಿದ್ದಾರೆ.

ಆದರೂ, ಅತ್ಯಂತ ತುರ್ತು ಕೆಲಸಗಳಿಗೆ ಮಾತ್ರ ಜನರು ಮನೆಯಿಂದ ಹೊರಬೇಕು. ಅನಾಗತ್ಯವಾಗಿ ಹೊರ ಬರದೆ ಕೋವಿಡ್‌ ನಿಯಂತ್ರಣಕ್ಕೆ ಸಹರಿಸಬೇಕೆಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ವಿನಂತಿಸಿಕೊಂಡಿದ್ದಾರೆ.

ಗುಣಮುಖರ ಪ್ರಮಾಣದಲ್ಲಿ ಅತ್ಯಧಿಕ ಏರಿಕೆ

ಕೋವಿಡ್ ಎರಡನೇ ಅಲೆ ಪ್ರಾರಂಭದಲ್ಲಿ ಅಧಿಕಗೊಂಡಿದ್ದ ಕೋವಿಡ್‌ ಹೊಸ ಪ್ರಕರಣಗಳು ದೆಹಲಿಯಲ್ಲಿ ಸೋಂಕಿತರು ಗುಣಮುಖರಾಗುವುದು ಅಧಿಕವಾಗಿ ಏರುತ್ತಿದೆ. ಸಕಾರಾತ್ಮಕ ದರ ಪ್ರಸ್ತುತ ಶೇ.2.5 ರಷ್ಟಿದೆ. ಆದರೂ, ಈ ಸೋಂಕನ್ನು ಸಂಪೂರ್ಣವಾಗಿ ನಿರ್ಮೂಲನೆ ಗೊಳಿಸುವ ಸಲುವಾಗಿ ಮೇ 31ರ ಬೆಳಗ್ಗೆ 5 ಗಂಟೆಯ ವರೆಗೆ ಲಾಕ್​ಡೌನ್​ ಅನ್ನು ವಿಸ್ತರಿಸಲಾಗಿದೆ.

ಇದೀಗ ಕೋವಿಡ್​ನಿಂದ ಗುಣಮುಖರಾಗುವವರ ಸಂಖ್ಯೆ ಕೂಡ ಹೆಚ್ಚಾಗಿದೆ.  ದೈನಂದಿನ ವರದಿಯಾಗುವ ಪ್ರಕರಣಗಳಿಗಿಂತ ಗುಣಮುಖರಾಗುವವರ ಸಂಖ್ಯೆ ಹೆಚ್ಚಾಗಿದೆ. ಒಟ್ಟಾರೆ ಈಗ ಗುಣಮುಖರಾಗುವವರ ಸಂಖ್ಯೆ ಪ್ರತಿದಿನವೂ ವರದಿಯಾಗುತ್ತಿರುವ ಸೋಂಕಿತ ಪ್ರಕರಣಗಳ ಸಂಖ್ಯೆಯನ್ನು ಮೀರಿದೆ.

ಚೇತರಿಕೆ ದರವು  ಈಗ ಶೇ. 85.6 ರಿಂದ ಶೇ. 90% ಕ್ಕೆ ಏರಿದೆ. ಇದು ಸಕಾರಾತ್ಮಕ ಸೂಚನೆ ಎಂದು ದೆಹಲಿ ಆರೋಗ್ಯ ಸಚಿವಾಲಯ ತಿಳಿಸಿದೆ.

“ಮೂರನೇ ಅಲೆಯೂ ಭಾರತ ಮತ್ತು ದೆಹಲಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಹೀಗಾಗಿ ಹೊಸ ಆಮ್ಲಜನಕ ಸ್ಥಾವರಗಳು ಮತ್ತು ಐಸಿಯು ಹಾಸಿಗೆಗಳನ್ನು ಸ್ಥಾಪಿಸುವುದು ಸೇರಿದಂತೆ ಆರೋಗ್ಯ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಮಾಡಲು ಅಧಿಕಾರಿಗಳು ಹಗಲು, ರಾತ್ರಿ  ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ರೀತಿಯ ಪ್ರವೃತ್ತಿಯೊಂದಿಗೆ ಪ್ರಕರಣಗಳು ಇಳಿಮುಖವಾಗುತ್ತಿದ್ದರೆ, ಮೇ 31 ರಿಂದ ಹಂತ ಹಂತವಾಗಿ ಲಾಕ್‌ಡೌನ್ ಅನ್ನು ಸಡಿಲಿಸಲಾಗುವುದು” ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

“ನಾನು ಅನೇಕ ತಜ್ಞರನ್ನು ಸಂಪರ್ಕಿಸಿ ಅಭಿಪ್ರಾಯ ಸಂಗ್ರಹಿಸಿದ್ದೇನೆ.  ಎಲ್ಲರೂ ಇನ್ನೂ ಒಂದು ವಾರದವರೆಗೆ ಲಾಕ್​ಡೌನ್ ವಿಸ್ತರಿಸುವ ಕುರಿತು ಒಲವು ತೋರಿಸಿದ್ದರು. ಆದ್ದರಿಂದಲೇ ಮೇ 31ರ ವರೆಗೆ ಲಾಕ್​ಡೌನ್ ಅನ್ನು ವಿಸ್ತರಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸೋಂಕು ಮತ್ತಷ್ಟು ಹೆಚ್ಚಾಗದಂತೆ ತಡೆಯುವ ಸಲುವಾಗಿ ಲಾಕ್​ಡೌನ್ ಅಗತ್ಯ ಇದೆ. ಈ ನಡುವೆ ಜನರಿಗೆ ಕೊರೊನಾ  ಲಸಿಕೆ ನೀಡುವ ಅಗತ್ಯವಿದ್ದು, ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಲಸಿಕೆಗಳು ಲಭ್ಯವಾದ ತಕ್ಷಣ 18-44 ವಯಸ್ಸಿನ ಎಲ್ಲಾ ಯುವಕರಿಗೂ ಲಸಿಕೆಯನ್ನು ನೀಡಲಾಗುವುದು” ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *