ನವದೆಹಲಿ : ದೆಹಲಿ ರಾಜ್ಯ ಸರಕಾರವು ತನ್ನದೇ ಆದ ಸ್ವಂತದಾದ ʻದೆಹಲಿ ಶಾಲಾ ಶಿಕ್ಷಣ ಮಂಡಳಿ (ಡಿಬಿಎಸ್‌ಇ)ʼ ಹೊಂದಲಿದೆ ಎಂದು ಸಚಿವ ಸಂಪುಟ ಸಭೆಯ ಬಳಿತ ಸುದ್ದಿಗಾರರೊಂದಿಗೆ ತಿಳಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದರು.
ರಾಜಧಾನಿಯಲ್ಲಿ 1,000 ಸರ್ಕಾರಿ ಶಾಲೆಗಳು ಮತ್ತು 1,700 ಖಾಸಗಿ ಶಾಲೆಗಳಿವೆ. ಪ್ರಸ್ತುತ ಎಲ್ಲಾ ಸರ್ಕಾರಿ ಶಾಲೆಗಳು ಮತ್ತು ಹೆಚ್ಚಿನ ಖಾಸಗಿ ಶಾಲೆಗಳು ಸಿಬಿಎಸ್‌ಇ ವ್ಯಾಪ್ತಿಯಲ್ಲಿದ್ದು ಮುಂಬರುವ ನಾಲ್ಕೈದು ವರ್ಷಗಳಲ್ಲಿ 2700 ಶಾಲೆಗಳನ್ನು ಡಿಬಿಎಸ್‌ಇ ವ್ಯಾಪ್ತಿಗೆ ತರಲಾಗುವುದು ಎಂದು ಹೇಳಿದರು.
ಮುಂಬರುವ ಶೈಕ್ಷಣಿಕ ವರ್ಷದಿಂದಲೇ 20-25 ಸರಕಾರಿ ಶಾಲೆಗಳು ಡಿಬಿಎಸ್‌ಇ ವ್ಯಾಪ್ತಿಗೆ ಒಳಪಡಲಿದೆ. ಸಿಬಿಎಸ್‌ಸಿ ವ್ಯಾಪ್ತಿಯಿಂದ ಬಿಡುಗಡೆಗೊಳಿಸಲಾಗುವುದು. ಡಿಬಿಎಸ್‌ಇ ವ್ಯಾಪ್ತಿಗೆ ಶಾಲಾ ಆಡಳಿತಾಧಿಕಾರಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಚರ್ಚಿಸಿದ ನಂತರ ರಾಜ್ಯ ಮಂಡಳಿಯ ವ್ಯಾಪ್ತಿಗೆ ತರಲಾಗುವ ಶಾಲೆಗಳನ್ನು ಸಹ ಗುರುತಿಸಲಾಗುವುದು.
ದೆಹಕಲಿ ಶಾಲಾ ಶಿಕ್ಷಣ ಮಂಡಳಿಯು ಮಕ್ಕಳ ತಿಳುವಳಿಕೆ ಮತ್ತು ವ್ಯಕ್ತಿತ್ವ ಅಭಿವೃದ್ಧಿಯತ್ತ ಇರುತ್ತದೆ. ವಿದ್ಯಾರ್ಥಿಗಳನ್ನು ವರ್ಷವಿಡೀ ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಶಿಕ್ಷಣ ವ್ಯವಸ್ಥೆಯು ಅಂತರರಾಷ್ಟ್ರೀಯ ಮಾನದಂಡಗಳಿಗೆ ಸಮನಾಗಿರುತ್ತದೆಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದರು.
ಡಿಬಿಎಸ್‌ಇ ಮಂಡಳಿಯು ಶಿಕ್ಷಣ ಸಚಿವರ ನೇತೃತ್ವದ ಆಡಳಿತ ಮಂಡಳಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇತೃತ್ವದ ಕಾರ್ಯನಿರ್ವಹಣಾ ಮಂಡಳಿಯ ವ್ಯಾಪ್ತಿಯಲ್ಲಿರುತ್ತದೆ.
ಈ ಮಂಡಳಿಯು ಸಿಬಿಎಸ್‌ಸಿ ಗೆ ಬದಲಿಯಾಗಿ ಕೆಲಸ ಮಾಡದೇ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಜಂಟಿ ಪ್ರವೇಶ ಪರೀಕ್ಷೆಯ (ಜೆಇಇ) ಪರೀಕ್ಷೆಗಳಿಗೆ ತಯಾರಾಗಲು ಸಹಾಯ ಮಾಡುತ್ತದೆ. ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಸಹ ಸಹಕಾರಿಯಾಗಲಿದೆ ಪ್ರಕಟಿಸಿದರು.
2020ರ ಜುಲೈನಲ್ಲಿ ದೆಹಲಿ ಸರಕಾರವು ರಾಜ್ಯ ಶಿಕ್ಷಣ ಮಂಡಳಿ ಮತ್ತು ಪಠ್ಯಕ್ರಮ ಸುಧಾರಣೆಗಳ ಯೋಜನೆ ಹಾಗೂ ಚೌಕಟ್ಟನ್ನು ಸಿದ್ಧಪಡಿಸಲು ಎರಡು ಪ್ರತ್ಯೇಕ ಫಲಕಗಳನ್ನು ರಚಿಸಿತು.