ದೆಹಲಿ ಹೈಕೋರ್ಟ್‌: ಮೇ 19ಕ್ಕೆ ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆ

ನವದೆಹಲಿ: 2020ರ ದೆಹಲಿ ಗಲಭೆ  ಪ್ರಕರಣದಲ್ಲಿ ಬಂಧಿತ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆಯನ್ನು ಮೇ 19ರಂದು ಕೈಗೆತ್ತಿಕೊಳ್ಳುವುದಾಗಿ ದೆಹಲಿ ಹೈಕೋರ್ಟ್ ಪಟ್ಟಿ ಮಾಡಿದೆ.

ಫೆಬ್ರವರಿ 2020ರಲ್ಲಿ ನಡೆದ  ಗಲಭೆಗಳ ಹಿಂದಿನ ಪಿತೂರಿಯ ಆರೋಪಕ್ಕೆ ಸಂಬಂಧಿಸಿದಂತೆ  ಯುಎಪಿಎ ಪ್ರಕರಣದಲ್ಲಿ ಉಮರ್‌ ಖಾಲಿದ್‌ ಅವರನ್ನು ಬಂಧಿಸಲಾಗಿತ್ತು. ತಮಗೆ ಜಾಮೀನು ನೀಡಬೇಕೆಂದು ದೆಹಲಿ ಹೈಕೋರ್ಟ್‌ಗೆ ಅವರು ಮನವಿ ಮಾಡಿದ್ದರು. ಅರ್ಜಿಯನ್ನು ಪಟ್ಟಿ ಮಾಡಿರುವ ದೆಹಲಿ ಉಚ್ಚ ನ್ಯಾಯಾಲಯ ಪರಿಣಾಮಕಾರಿ ತೀರ್ಪುಗಾಗಿ ಸಂಬಂದಿಸಿದ ದಾಖಲೆಗಳು ಇರಿಸಲು  ಅವರಿಗೆ ಕಾನೂನು ಕ್ರಮವಾಗಿ ಅನುಮತಿ ನೀಡಿದೆ.

ನ್ಯಾಯಮೂರ್ತಿಗಳಾದ ಸಿದ್ದಾರ್ಥ್ ಮೃದಲ್ ಮತ್ತು ರಜನೀಶ್ ಭಟ್ನಾಗರ್ ಅವರ ಪೀಠವು ಇದೇ ಪ್ರಕರಣದಲ್ಲಿ ಶಾರ್ಜಿಲ್ ಇಮಾಮ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಮೇ 24ಕ್ಕೆ ಮುಂದೂಡಿದೆ. ಉಮರ್‌ ಖಾಲಿದ್‌ ಜಾಮೀನು ಅರ್ಜಿ ವಿಚಾರಣೆಗೆ ಮರು ಅಧಿಸೂಚನೆ ನೀಡಿ ಈ ಮಧ್ಯ ಒಂದು ವಾರದೊಳಗೆ ಮೇಲ್ಮನವಿಯನ್ನು ಪರಿಣಾಮಕಾರಿ ತೀರ್ಪಿಗಾಗಿ ಸಲ್ಲಿಸುವಂತೆ ತಿಳಿಸಿದೆ.

ಫೆಬ್ರವರಿ 2020ರ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರ ಭುಗಿಲೆದ್ದಿದ್ದು, ಗಲಭೆ ನಡೆದಿತ್ತು. ʻʻಗಲಭೆಗೆ ಮಾಸ್ಟರ್ ಮೈಂಡ್‌ಗಳು” ಎಂದು ಯುಎಪಿಎ ಪ್ರಕರಣದಲ್ಲಿ ಖಾಲಿದ್, ಇಮಾಮ್ ಮತ್ತು ಇತರರನ್ನು ಬಂಧಿಸಲಾಗಿತ್ತು. ಈ ಗಲಭೆಯು 53 ಜನರನ್ನು ಬಲಿ ತೆಗೆದುಕೊಂಡಿದ್ದು, 700ಕ್ಕೂ ಹೆಚ್ಚು ಜನರು ಗಾಯಗೊಳ್ಳಲು ಕಾರಣವಾಗಿದೆ.

ವಿಚಾರಣಾ ನ್ಯಾಯಾಲಯವು ಖಾಲಿದ್ ಮತ್ತು ಇಮಾಮ್ ಅವರ ಜಾಮೀನು ಅರ್ಜಿಯನ್ನು ಮಾರ್ಚ್ 24 ಮತ್ತು ಏಪ್ರಿಲ್ 11ರಂದು ವಜಾಗೊಳಿಸಿತ್ತು. ತನ್ನ ವಿರುದ್ಧದ ಆರೋಪಗಳಿಗೆ ಆಧಾರವಾಗಿರುವ ತನ್ನ ಭಾಷಣವು ಹಿಂಸಾಚಾರಕ್ಕೆ ಕರೆ ನೀಡಿಲ್ಲ, ಏಕಕಾಲಿಕವಾಗಿ ಜಾಲತಾಣಗಳಲ್ಲಿ ಭಾಷಣ ಅಪ್ಲೋಡ್ ಮಾಡಲಾಗಿಲ್ಲ ಮತ್ತು ವ್ಯಾಪಾಕವಾಗಿ ಪ್ರಸಾರಮಾಡಲಾಗಿಲ್ಲ ಎಂದಿದ್ದಾರೆ.

ಐಪಿಸಿ  ಸೆಕ್ಷನ್ 124ಎ ಪ್ರಕಾರ (ದೇಶದ್ರೋಹ ಅಪರಾಧ ಆಯೋಗ) ಪ್ರಕರಣದಲ್ಲಿ ಉಲ್ಲೇಖಿಸಿರುವ ಅಂಶಗಳು ಆಧಾರ ರಹಿತವಾಗಿದೆ ಮತ್ತು ಅಸಂಭವವಾಗಿದೆ ಖಾಲಿದ್ ಜಾಮೀನು ಅರ್ಜಿಯಲ್ಲಿ ವಾದಿಸಿದ್ದಾರೆ.

ಖಾಲಿದ್ ಮತ್ತು ಇಮಾಮ್ ಜೊತೆಗೆ, ಖಾಲಿದ್ ಸೈಫಿ, ಜೆಎನ್‌ಯು ವಿದ್ಯಾರ್ಥಿಗಳಾದ ನತಾಶಾ ನರ್ವಾಲ್ ಮತ್ತು ದೇವಾಂಗನಾ ಕಲಿತಾ, ಜಾಮಿಯಾ ವಿವಿಯ ಸಫೂರ ಜರ್ಗರ್, ಎಎಪಿ ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್ ಮತ್ತು ಹಲವರ ವಿರುದ್ಧವೂ ಕಠಿಣ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *