ಯುಎಪಿಎ ಪ್ರಕರಣ: ಜಾಮೀನು ಪಡೆದ ಮೂವರು ವಿದ್ಯಾರ್ಥಿ ವಿರುದ್ಧ ಸುಪ್ರೀಂ ಕೋರ್ಟ್‌ ಮೊರೆ ದೆಹಲಿ ಪೊಲೀಸರು

ನವದೆಹಲಿ: ಯುಎಪಿಎ ಪ್ರಕರಣದಲ್ಲಿ ಬಂಧಿಸಲಾಗಿದ್ದ ಮೂವರು ವಿದ್ಯಾರ್ಥಿಗಳಿಗೆ ದೆಹಲಿ ಹೈಕೋರ್ಟ್‌ ನೆನ್ನೆ ಜಾಮೀನು ಮಂಜೂರು ಮಾಡಿತ್ತು. ನ್ಯಾಯಾಲದ ಆದೇಶದ ವಿರುದ್ಧ ದೆಹಲಿ ಪೊಲೀಸರು ಇಂದು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

ಯುಎಪಿಎ ಭಯೋತ್ಪಾದನಾ-ವಿರೋಧಿ ಕಾನೂನಿನಡಿ ಮೂವರು ವಿದ್ಯಾರ್ಥಿಗಳಾದ ನತಾಶಾ ನರ್ವಾಲ್ ಮತ್ತು ದೇವಂಗನಾ ಕಲಿತಾ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಅವರನ್ನು ಕಳೆದ ವರ್ಷ ಬಂಧಿಸಲಾಗಿತ್ತು. ವಿಚಾರಣಾ ನ್ಯಾಯಲಯ ಅವರಿಗೆ ಮೂವರಿಗೆ ಜಾಮೀನು ನಿರಾಕರಿಸಿರುವುದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ನಲ್ಲಿ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು.

ಇದನ್ನು ಓದಿ: ದೆಹಲಿ ಹೈಕೋರ್ಟ್‌ನಿಂದ ಜಾಮೀನು ಪಡೆದ ಜೆಎನ್‌ಯು, ಜಾಮಿಯಾ ವಿದ್ಯಾರ್ಥಿಗಳು

ದೆಹಲಿ ಉಚ್ಚ ನ್ಯಾಯಲಯವು ಜಾಮೀನು ನೀಡುವ ಸಂದರ್ಭದಲ್ಲಿ “ಭಿನ್ನಮತವನ್ನು ಹತ್ತಿಕ್ಕುವ ಆತುರದಲ್ಲಿ, ಗೃಹ ಮಂತ್ರಾಲಯದ ಮನದಲ್ಲಿ ಸಂವಿಧಾನ ಭರವಸೆ ನೀಡಿರುವ ಪ್ರತಿಭಟನೆಯ ಹಕ್ಕು ಮತ್ತು ಭಯೋತ್ಪಾದಕ ಚಟುವಟಿಕೆಯ ನಡುವಿನ ಗೆರೆ ಸ್ವಲ್ಪಮಟ್ಟಿಗೆ ಮಸುಕಾಗುತ್ತಿರುವಂತೆ ಕಾಣುತ್ತದೆ. ಈ ಮನೋಭಾವ ಜಾಡು ಹಿಡಿದರೆ ಅದು ಪ್ರಜಾಪ್ರಭುತ್ವಕ್ಕೆ ಒಂದು ವಿಷಾದಕರ ದಿನವಾಗುತ್ತದೆ” ಎಂದು ತಿಳಿಸಿತು.

೨೦೨೦ರ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಗಲಭೆ ಸೃಷ್ಟಿಯಾಗಿತ್ತು. ಆ ಸಂದರ್ಭದಲ್ಲಿ ೫೦ಕ್ಕೂ ಹೆಚ್ಚು ಜನ ನಿಧನರಾಗಿದ್ದರು. ಗಲಭೆಗೆ ಪ್ರಮುಖ ಕಾರಣಕರ್ತರು ಎಂದು ಆರೋಪಿಸಿ ಜೆಎನ್‌ಯು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ನತಾಶಾ ನರ್ವಾಲ್, ದೇವಂಗನಾ ಕಲಿತಾ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾಲಯದ ಆಸಿಫ್ ಇಕ್ಬಾಲ್ ತನ್ಹಾ ೨೦೨೦ರ ಮೇನಲ್ಲಿ ಬಂಧಿಸಲಾಗಿತ್ತು. ಇವರು ಜೈಲಿನಲ್ಲಿ ಬಂಧಿಯಾಗಿದ್ದರು.

ಇದನ್ನು ಓದಿ: ಯುಎಪಿಎ ಪ್ರಕರಣದಲ್ಲಿ ದಿಲ್ಲಿ ಹೈಕೋರ್ಟ್ ತೀರ್ಪು ಅತ್ಯಂತ ಸ್ವಾಗತಾರ್ಹ

ದೆಹಲಿ ಉಚ್ಚ ನ್ಯಾಯಾಲಯ ನೀಡಿದ ಜಾಮೀನು ಅರ್ಜಿಯನ್ನು ಪ್ರಶ್ನಿಸಿ ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *