Delhi Exit Polls: ಬಿಜೆಪಿ ಮೊದಲ ಸ್ಥಾನ, ಎಎಪಿಗೆ 2ನೇ ಸ್ಥಾನ

ಬಹುತೇಕ ಸಮೀಕ್ಷೆಗಳು ದೆಹಲಿ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ಭವಿಷ್ಯ ನುಡಿದರೆ ಕೆಲ ಸಮೀಕ್ಷೆಗಳು ಆಪ್‌ ಜಯಗಳಿಸಲಿದೆ ಎಂದು ಹೇಳಿದೆ. ಈ ಚುನಾವಣೆಯಲ್ಲೂ ಆಪ್‌ ಜಯಗಳಿಸಿದರೆ ಆಪ್‌ ಹ್ಯಾಟ್ರಿಕ್‌ ಸಾಧನೆ ಮಾಡಿದಂತಾಗುತ್ತದೆ.

WeePreside ಸಮೀಕ್ಷೆಯ ಪ್ರಕಾರ ಆಪ್‌ 46-52, ಬಿಜೆಪಿ 18-23, ಕಾಂಗ್ರೆಸ್‌ 0-1 ಸ್ಥಾನ ಗೆಲ್ಲಬಹುದು.  ದೈನಿಕ್‌ ಭಾಸ್ಕರ್‌ ಸಮೀಕ್ಷೆ ಆಪ್‌ 43-47, ಬಿಜೆಪಿ 23-27 ಸ್ಥಾನ ಪಡೆದರೆ ಕಾಂಗ್ರೆಸ್‌ ಶೂನ್ಯ ಸಾಧನೆ ಮಾಡಲಿದೆ ಎಂದು ಹೇಳಿದೆ.

2020ರ ಚುನಾವಣೆಯಲ್ಲಿ ಆಪ್‌ 62, ಬಿಜೆಪಿ 8 ಸ್ಥಾನಗಳನ್ನು ಗೆದ್ದಿದ್ದವು. 2015 ರ ಚುನಾವಣೆಯಲ್ಲಿ ಆಪ್‌ 67, ಬಿಜೆಪಿ 3 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಒಟ್ಟು 70 ಕ್ಷೇತ್ರಗಳಿರುವ ದೆಹಲಿಯಲ್ಲಿ ಬಹುಮತಕ್ಕೆ 36 ಸ್ಥಾನಗಳ ಅಗತ್ಯವಿದೆ. ಫೆ. 8 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

Donate Janashakthi Media

Leave a Reply

Your email address will not be published. Required fields are marked *