ದೆಹಲಿ ಚುನಾವಣಿ: ಬಿಜೆಪಿ, ಎಎಪಿ ತುರುಸಿನ ಸ್ಪರ್ಧೆ

ನವದೆಹಲಿ: ದೆಹಲಿಯ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಪ್ರಕಟನೆ ಆಗಿದ್ದೂ, ಮತ ಎಣಿಕೆ ಮುಂದುವರೆದಿದೆ. ಪಕ್ಷಗಳ ಮುನ್ನಡೆಗಳು ತೀವ್ರವಾಗಿ ಬದಲಾಗುತ್ತಿವೆ. ಬೆಳಗಿನ ಹಂತಗಳಲ್ಲಿ 50 ಸ್ಥಾನಗಳಲ್ಲಿ ಭರ್ಜರಿ ಮುನ್ನಡೆ ಸಾಧಿಸಿದ್ದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಇದೀಗ 41 ಸ್ಥಾನಗಳಿಗೆ ಕುಸಿದಿದೆ.

ಇದರ ವಿರುದ್ಧವಾಗಿ, ಆಮ್ ಆದ್ಮಿ ಪಾರ್ಟಿ (AAP) ಆಮೆನಡಿಗೆಯಲ್ಲಿ, 18 ಸ್ಥಾನಗಳಿಂದ 28 ಸ್ಥಾನಗಳಿಗೆ ತನ್ನ ಮುನ್ನಡೆಯನ್ನು ವಿಸ್ತರಿಸಿದೆ. ಇದರೊಂದಿಗೆ, ದೆಹಲಿ ವಿಧಾನಸಭೆಯಲ್ಲಿ ಬಹುಮತದ ಕದನ ಇನ್ನಷ್ಟು ರೋಚಕವಾಗುತ್ತಿದೆ. ಬಿಜೆಪಿ

ಹೆಚ್ಚಿನ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಮುನ್ನಡೆ ಮತಗಳ ಅಂತರ ಕೇವಲ 500 ರಿಂದ 1000ರ ನಡುವೆ ಇರುವುದರಿಂದ ಪ್ರತಿ ಸುತ್ತಿನ ಕೊನೆಯಲ್ಲಿ ಸಂಖ್ಯೆಗಳು ಹಿಂದೂ-ಮುಂದು ಆಗುತ್ತಿವೆ. ಈ ಅಂತರದ ಕಾರಣದಿಂದಲೇ ಕೊನೆಯ ಕ್ಷಣಗಳಲ್ಲಿ ಪರಿಣಾಮಗಳು ಬದಲಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕಂಡಕ್ಟರ್‌ನಿಂದಲೇ ಲೈಂಗಿಕ ಕಿರುಕುಳ : ದೂರು ಹಿಂಪಡೆಯುವಂತೆ ಮಹಿಳೆಗೆ ಬೆದರಿಕೆ

ಇದಲ್ಲದೆ, ದೆಹಲಿಯ ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳು ಈ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದು, ಬಹುಮತ ನಿರ್ಧಾರದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ. ಈ ಪ್ರದೇಶಗಳ ಮತ ಎಣಿಕೆಯ ಫಲಿತಾಂಶ ಬಹುಮತವನ್ನು ದಕ್ಕಿಸಲು ನಿರ್ಧಾರಾತ್ಮಕವಾಗಲಿದೆ.

ಈ ಹಿಂದಿನ ಅಧಿಕಾರಾವಧಿಯಲ್ಲಿ ದೆಹಲಿಯ ಜನತೆಗೆ ಸಮರ್ಪಕ ಸೇವೆಯನ್ನು ಒದಗಿಸಿದ ಆಮ್ ಆದ್ಮಿ ಪಾರ್ಟಿ ಇದೀಗ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ದೆಹಲಿಯ ರಾಜಕೀಯ ಲ್ಯಾಂಡ್‌ಸ್ಕೇಪ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಬಹುದು ಎಂಬ ನಿರೀಕ್ಷೆ ಇದೆ.

ಚುನಾವಣಾ ಫಲಿತಾಂಶದ ಹಂತ ಹಂತದ ಮುಂದುವರಿಕೆ ದೇಶದ ರಾಜಕೀಯ ವಲಯದಲ್ಲಿ ಅತೀವ ಕುತೂಹಲವನ್ನು ಮೂಡಿಸಿದೆ. ಮಧ್ಯಾಹ್ನದ ವೇಳೆಗೆ ದೆಹಲಿಯ ಜನರ ಇಚ್ಛೆ ಸ್ಪಷ್ಟವಾಗುವ ನಿರೀಕ್ಷೆಯಿದೆ.

ಇದನ್ನೂ ನೋಡಿ: ಜಸ್ಟೀಸ್‌ ನಾಗಮೋಹನ್‌ ದಾಸ್‌ ಸಮಿತಿJanashakthi Media

Donate Janashakthi Media

Leave a Reply

Your email address will not be published. Required fields are marked *