ನವದೆಹಲಿ: ಕಾಂಗ್ರೆಸ್ ಟೂಲ್‌ಕಿಟ್ ವಿಚಾರವಾಗಿ ಬಿಜೆಪಿ ನಾಯಕ ಸಂಬಿತ್ ಪತ್ರಾ ಟ್ವೀಟ್ ಮಾಡಿರುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಗೊಂಡಿದ್ದವು. ಇದರ ಬೆನ್ನಲ್ಲೆ ಟ್ವಿಟ್ಟರ್ ಸಂಸ್ಥೆಗೆ ನೋಟಿಸ್ ನೀಡಿದ ದೆಹಲಿ ಪೊಲೀಸರು ಇಂದು ದೆಹಲಿಯ ಲಾಡೋ ಸರಾಯ್ ಮತ್ತು ಗುರಗಾಂವ್ ನಲ್ಲಿರಿವ ಟ್ವಿಟ್ಟರ್ ಇಂಡಿಯಾ ಕಛೇರಿಗೆ ಧಾಳಿ ನಡೆಸಿದ್ದಾರೆ.
ಇದನ್ನು ಓದಿ: ಹಳ್ಳಿಗಳಿಗೆ ಕೊರೊನಾ ಹಬ್ಬಲು ಸರಕಾರದ ಲಾಕ್‌ಡೌನ್ ಕಾರಣವೆ?
ಟೂಲ್‌ಕಿಟ್ ಆಧಾರಗಳ ಸತ್ಯವನ್ನು ತಿಳಿದುಕೊಳ್ಳಬೇಕಿರುವುದರಿಂದ ಟ್ವಿಟ್ಟರ್ ಕಛೇರಿಯಿಂದ ಸ್ಪಷ್ಟನೇ ಬೇಕಿರುವುದರಿಂದ ಪೊಲೀಸರು ಧಾಳಿ ನಡೆದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
#WATCH | Team of Delhi Police Special cell carrying out searches in the offices of Twitter India (in Delhi & Gurugram)
Visuals from Lado Sarai. pic.twitter.com/eXipqnEBgt
— ANI (@ANI) May 24, 2021
ದೆಹಲಿಯ ದಕ್ಷಿಣ ಭಾಗದಲ್ಲಿರುವ ಲಾಡೋ ಸರಾಯ್ ಮತ್ತು ಗುರಗಾಂವ್‌ನಲ್ಲಿರುವ ಟ್ವಿಟ್ಟರ್ ಇಂಡಿಯಾ ಕಛೇರಿಗೆ ದೆಹಲಿ ವಿಶೇಷ ಪೊಲೀಸ್ ತಂಡ ತೆರಳಿ ನೋಟಿಸಿಗೆ ಪ್ರತಿಕ್ರಿಯೆ ನೀಡಬೇಕೆಂದು ಕೇಳಲಾಗಿದೆ ಎಂಬ ವಿಡಿಯೋವೊಂದು ಸಾಮಾಜಿ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಛೇರಿ ಯಲ್ಲಿ ಹಾಜರಿದ್ದ ಕೆಲವೆ ಕೆಲವು ನೌಕರರು ವಿಚಾರಣೆ ಕೈಗೊಂಡಿದ್ದಾರೆ.
ಕೋವಿಡ್ ಬಿಕ್ಕಟ್ಟಿನಿಂದಾಗಿ ಸಂಸ್ಥೆಯ ಬಹುತೇಕ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿರುವುದನ್ನು ಟ್ವಿಟ್ಟರ್ ಸಂಸ್ಥೆಯ ಉನ್ನತ ವ್ಯವಸ್ಥಾಪಕರು ಸ್ಪಷ್ಟಿಡಿದ್ದಾರೆ.
“ದೆಹಲಿ ಪೊಲೀಸರು ದೂರಿನ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಇದರಲ್ಲಿ ಸಂಬಿತ್ ಪತ್ರಾ ಅವರ ಟ್ವೀಟ್ ಅನ್ನು ‘ಮ್ಯಾನಿಪ್ಯುಲೇಟಿವ್’ ಎಂದು ವರ್ಗೀಕರಿಸುವ ಬಗ್ಗೆ ಟ್ವಿಟರ್ ನಿಂದ ಸ್ಪಷ್ಟನೆ ಕೋರಲಾಗಿದೆ. ಟ್ವಿಟ್ಟರ್ ನಮಗೆ ತಿಳಿದಿಲ್ಲದ ಕೆಲವು ಮಾಹಿತಿಯನ್ನು ಹೊಂದಿದೆ, ಅದರ ಆಧಾರದ ಮೇಲೆ ಅವರು ಅದನ್ನು ವರ್ಗೀಕರಿಸಿದ್ದಾರೆ. ಈ ಮಾಹಿತಿಯು ವಿಚಾರಣೆಗೆ ಸಂಬಂಧಿಸಿದೆ. ವಿಚಾರಣೆಯನ್ನು ನಡೆಸುತ್ತಿರುವ ವಿಶೇಷ ತಂಡವು ಸತ್ಯವನ್ನು ತಿಳಿದುಕೊಳ್ಳಲು ಬಯಸಿದೆ. ಹಾಗಾಗಿ ಸತ್ಯವನ್ನು ಟ್ವಿಟರ್ ಸ್ಪಷ್ಟಪಡಿಸಬೇಕು “ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: “ಬದುಕಿನ ಹಕ್ಕು” ಆದ್ಯತೆಯಾಗಬೇಕು
ಈ ಪ್ರಕರಣದಲ್ಲಿ ಮೇ 18 ರಂದು ಬಿಜೆಪಿ ವಕ್ತಾರ ಸಂಬಿತ್ ಪತ್ರಾ ಅವರ ಟ್ವೀಟ್ ಒಂದನ್ನು ಹಂಚಿಕೊಂಡಿದ್ದು, ಬಿಜೆಪಿ ಪಕ್ಷದ ಹಲವಾರು ನಾಯಕರು ಹಂಚಿಕೊಂಡಿದ್ದಾರೆ. ಇದರಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಪಖ್ಯಾತಿಗೊಳಿಸುವ ವಿಚಾರಗಳು ಅಡಗಿವೆ. “ಕಾಂಗ್ರೆಸ್ ಟೂಲ್‌ಕಿಟ್ ” ಎಂದು ಕರೆಯುವ ಸಂದೇಶ ಹೊಂದಿದ್ದವು.
ಇದಕ್ಕೆ ಸಂಬಂಧಿಸಿದಂತೆ ಸಂಬಿತ್ ಪತ್ರಾ ವಿರುದ್ಧ ಗಂಭೀರವಾದ ಆರೋಪ ಮಾಡಿದ ಕಾಂಗ್ರೆಸ್ ಪಕ್ಷವು “ಟೂಲ್‌ಕಿಟ್” ನಕಲಿ ಸಂದೇಶವಾಗಿದೆ ಮತ್ತು ಕಾಂಗ್ರೆಸ್ ಪಕ್ಷದ ಒಂದು ವಿಭಾಗದ ನಕಲಿ ಲೆಟರ್ ಹೆಡ್‌ಗಳನ್ನು ಹಂಚಿಕೊಳ್ಳಲಾಗಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಟ್ವಿಟ್ಟರ್ ಸಂಸ್ಥೆಗೆ ಲಿಖಿತ ದೂರು ನೀಡಿತ್ತು. ಅಲ್ಲದೆ, ಬಿಜೆಪಿ ನಾಯಕನ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಿದ್ದವು.
ಕಳೆದ ಗುರುವಾರ ಸಂಜೆ, ಟ್ವಿಟರ್ ಸಂಬಿತ್ ಪತ್ರಾ ಅವರ ಟ್ವೀಟ್ ನಕಲಿ ಟ್ವೀಟ್ ಆಗಿದ್ದು ಅದು ತಿರುಚಲಾದ ಟ್ವೀಟ್ ಆಗಿದೆ ಎಂದು ಟ್ವಿಟ್ಟರ್ ಸಂಸ್ಥೆ ಸ್ಪಷ್ಟನೆ ನೀಡಿತ್ತು. ಮರುದಿನ, ಸರ್ಕಾರವು ಟೂಲ್‌ಕಿಟ್ ವಿಚಾರವಾಗಿ ಇನ್ನು ತನಿಖೆಯ ಹಂತದಲ್ಲಿರುವುದರಿಂದ ಟ್ವಿಟ್ಟರ್ ಟ್ಯಾಗ್ ಅನ್ನು ತೆಗೆದು ಹಾಕಬೇಕೆಂದು ಕಠಿಣವಾದ ಪತ್ರವೊಂದನ್ನು ಬರೆದಿತ್ತು.
ಇದರ ಬೆನ್ನಲ್ಲೆ ಪೊಲೀಸರು ಇಂದು ಟ್ವಿಟ್ಟರ್ ಇಂಡಿಯಾ ಸಂಸ್ಥೆಯ ದೆಹಲಿಯಲ್ಲಿರುವ ಎರಡು ಕಛೇರಿಗಳ ಮೇಲೆ ಧಾಳಿ ನಡೆಸಿದೆ. ಆದರೆ ಪೊಲೀಸರು ದೂರು ಅಥವಾ ದೂರುದಾರರ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.