ದೆಹಲಿ ಚಲೋ ಹೋರಾಟ | ಪೊಲೀಸರ ಮತ್ತು ರೈತರ ನಡುವೆ ಘರ್ಷಣೆ; 21 ವರ್ಷದ ರೈತ ಸಾವು

ನವದೆಹಲಿ: ಹಲವು ಬೇಡಿಕೆಗಳನ್ನು ಮುಂದಿಟ್ಟು ಹಮ್ಮಿಕೊಂಡಿರುವ ‘ದೆಹಲಿ ಚಲೋ’ ಪ್ರತಿಭಟನೆ ವೇಳೆ ನಡೆದ ರೈತರು ಮತ್ತು ಪೊಲೀಸರ ನಡುವಿನ ಸಂಘರ್ಷದಲ್ಲಿ 21 ವರ್ಷದ ಯುವ ರೈತ ಸಾವನ್ನಪ್ಪಿಸದ್ದಾರೆ. ಮೃತರನ್ನು ಪಂಜಾಬ್‌ನ ಬಟಿಂಡಾ ಜಿಲ್ಲೆಯ ಬಲೋಕೆ ಗ್ರಾಮದ ನಿವಾಸಿ ಶುಭಕರನ್ ಸಿಂಗ್ ಎಂದು ಗುರುತಿಸಲಾಗಿದೆ. ಅವರ ತಲೆಗೆ ರಬ್ಬರ್ ಬುಲೆಟ್ ಗಾಯಗಳಾಗಿವೆ ಎಂದು ವರದಿಗಳು ಉಲ್ಲೇಖಿಸಿವೆ.

“ಮಧ್ಯಾಹ್ನ 3 ಗಂಟೆಗೆ ಅವರನ್ನು ಆಸ್ಪತ್ರೆಗೆ ಕರೆತಂದಾಗ ಅವರು ಆಗಲೇ ಮೃತಪಟ್ಟಿದ್ದರು. ಅವರ ತಲೆಗೆ ಗುಂಡು ತಗುಲಿದೆ” ಎಂದು ಪಟಿಯಾಲದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ರಾಜೇಂದ್ರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಹರ್ನಾಮ್ ಸಿಂಗ್ ಅವರು ಹೇಳಿದ್ದಾರೆ ಎಂದು ದಿ ಕ್ವಿಂಟ್‌ ವರದಿ ಹೇಳಿದೆ. ದೆಹಲಿ ಚಲೋ

ಇದನ್ನೂ ಓದಿ: ವಿಧಾನ ಪರಿಷತ್ತಿನಲ್ಲೂ ಅಂಗೀಕಾರಗೊಂಡ ಕನ್ನಡ ಭಾಷಾ ಮಸೂದೆ

ಪ್ರತಿಭಟನಾ ನಿರತ ರೈತರು ನವದೆಹಲಿಗೆ ಪ್ರವೇಶಿಸದಂತೆ ಪೊಲೀಸ್ ಅಧಿಕಾರಿಗಳು ಭದ್ರತೆಯನ್ನು ಹೆಚ್ಚಿಸಿದ ನಂತರ ಬುಧವಾರ ಪಂಜಾಬ್-ಹರಿಯಾಣ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿತ್ತು. ಮೂಲಗಳ ಪ್ರಕಾರ, ಘರ್ಷಣೆಯಲ್ಲಿ ಕನಿಷ್ಠ 12 ರೈತರು ಗಂಭೀರವಾಗಿ ಗಾಯಗೊಂಡಿದ್ದು, ಅವರಲ್ಲಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ದೆಹಲಿ ಚಲೋ

ಯುವ ರೈತನ ಸಾವಿಗೆ ಕಾಂಗ್ರೆಸ್ ನಾಯಕ ಸುಖಪಾಲ್ ಸಿಂಗ್ ಖೈರಾ ಅವರು ಸಂತಾಪ ವ್ಯಕ್ತಪಡಿಸಿದ್ದು,“2024ರ ರೈತರ ಹೋರಾಟದ ಸಂದರ್ಭದಲ್ಲಿ ಖಾನೌರಿ ಗಡಿಯಲ್ಲಿ ಇಂದು ಹರಿಯಾಣ ಪೊಲೀಸರ ಗುಂಡಿಗೆ ಬಲಿಯಾದ ರೈತ ಶುಭಕರನ್ ಅವರ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪ. ಇದು ತೀವ್ರ ಕಳವಳಕಾರಿ ಸಂಗತಿಯಾಗಿದೆ. ಅದೇ ಸಮಯದಲ್ಲಿ 200 ಕ್ಕೂ ಹೆಚ್ಚು ರೈತರನ್ನು ಗಾಯಗೊಳಿಸಿದ ಮತ್ತು ಈ ಯುವಕನನ್ನು ಕೊಂದಿರುವ ಹರಿಯಾಣ ಪೊಲೀಸರು ಪಂಜಾಬ್ ಪ್ರದೇಶಕ್ಕೆ ನುಗ್ಗುವಾಗ ಮೂಕ ಪ್ರೇಕ್ಷಕರಾಗಿದ್ದಕ್ಕಾಗಿ ಎಎಪಿಯ ಬಲವಂತ್ ಮಾನ್ ಅವರಿಗೆ ನಾಚಿಕೆಯಾಗಬೇಕು” ಎಂದು ಹೇಳಿದ್ದಾರೆ.ದೆಹಲಿ ಚಲೋ

ಇದನ್ನೂ ಓದಿ: ಬೆಂಗಳೂರು | ಫೆಬ್ರವರಿ 27, 28ರಂದು ನಗರದ ಕೆಲವೆಡೆ ನೀರು ಸ್ಥಗಿತ; ಪಟ್ಟಿ ಇಲ್ಲಿದೆ

ಅದಾಗ್ಯೂ, ಘಟನೆಯಲ್ಲಿ ಯಾವುದೇ ರೈತ ಸಾವನ್ನಪ್ಪಿಲ್ಲ ಎಂದು ಹರಿಯಾಣ ಪೊಲೀಸರು ಪ್ರತಿಪಾದಿಸಿದ್ದಾರೆ. “ಇದು ಕೇವಲ ವದಂತಿ. ದಾತಾ ಸಿಂಗ್-ಖನೌರಿ ಗಡಿಯಲ್ಲಿ ಇಬ್ಬರು ಪೊಲೀಸರು ಮತ್ತು ಒಬ್ಬ ಪ್ರತಿಭಟನಾಕಾರ ಗಾಯಗೊಂಡಿರುವ ಬಗ್ಗೆ ಮಾಹಿತಿ ಇದೆ. ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಅದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದೆ.

ಪ್ರತಿಭಟನಾ ನಿರತ ರೈತರು ಮತ್ತು ಹರಿಯಾಣ ಪೊಲೀಸರ ನಡುವಿನ ಘರ್ಷಣೆಯ ನಂತರ ಪಂಜಾಬ್‌ನ ಐದು ಜಿಲ್ಲೆಗಳಲ್ಲಿ ಆಸ್ಪತ್ರೆಗಳನ್ನು ಅಲರ್ಟ್ ಮಾಡಲಾಗಿದೆ. ಪಂಜಾಬ್-ಹರಿಯಾಣ ಗಡಿಯಲ್ಲಿ ಪೊಲೀಸರು ಹಲವಾರು ಪದರಗಳ ಬ್ಯಾರಿಕೇಡ್‌ಗಳನ್ನು ನಿರ್ಮಿಸಿದ್ದಾರೆ. ಹರಿಯಾಣ ಪೊಲೀಸರು ರೈತರ ಮೇಲೆ ಅಶ್ರುವಾಯು ಪ್ರಯೋಗಿಸಿದ್ದಾರೆ.

ವಿಡಿಯೊ ನೋಡಿ: ‘ತತ್ವಜ್ಞಾನಿ ಬಸವಣ್ಣ ಸಾಂಸ್ಕೃತಿಕ ನಾಯಕ’ ಹಿನ್ನೆಲೆ ಮತ್ತು ಆಗಬೇಕಾದ ಕೆಲಸಗಳು – ವಿಶ್ಲೇಷಣೆ : ಮೀನಾಕ್ಷಿ ಬಾಳಿ

Donate Janashakthi Media

Leave a Reply

Your email address will not be published. Required fields are marked *