ದೆಹಲಿ | 350 ರೂ.ಗಾಗಿ 60 ಬಾರಿ ಇರಿದು, ದೇಹದ ಮೇಲೆ ಡ್ಯಾನ್ಸ್‌ ಮಾಡಿದ ಬಾಲಕ!

ನವದೆಹಲಿ: ಕೇವಲ 350 ರೂ.ಗಾಗಿ ಹದಿಹರೆಯದ ಹುಡುಗನೊಬ್ಬ 18 ವರ್ಷದ ಯುವಕನನ್ನು 60 ಕ್ಕೂ ಹೆಚ್ಚು ಬಾರಿ ಇರಿದು, ಯುವಕನ ದೇಹದ ಮೇಲೆ ನೃತ್ಯ ಮಾಡಿದ ಬರ್ಬರ ಘಟನೆ ಮಂಗಳವಾರ ರಾತ್ರಿ ದೆಹಲಿಯ ವೆಲ್‌ಕಂ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿವೆ.

ಸಂತ್ರಸ್ತ ಯುವಕನನ್ನು ದಾಳಿಕೋರ ಬಾಲಕನು ಮೊದಲಿಗೆ ಕತ್ತು ಹಿಸುಕಿ ಪ್ರಜ್ಞಾಹೀನ ಮಾಡುವುದು ಕಣ್ಗಾವಲು ಕ್ಯಾಮರಾದಲ್ಲಿ ದಾಖಲಾಗಿದೆ. 350 ರೂ.ಗಳನ್ನು ದರೋಡೆ ಮಾಡಲು 60 ಕ್ಕೂ ಹೆಚ್ಚು ಬಾರಿ ಇರಿದು ಕೊಲ್ಲಾಗಿದೆ ಎಂದು ಪೊಲೀಸರು ಹೇಳಿದ್ದಾಗಿ NDTV ವರದಿ ಮಾಡಿದೆ. ದೆಹಲಿ

ಇದನ್ನೂ ಓದಿ: ಉತ್ತರಕಾಶಿ ಸುರಂಗ ಅಪಘಾತ: ರಕ್ಷಣಾ ಕಾರ್ಯಾಚರಣೆಯನ್ನು ಹೆಚ್ಚಿಸಿ, ಕಾರ್ಮಿಕರ ಸುರಕ್ಷತೆಯನ್ನು ಖಾತ್ರಿಪಡಿಸಿ: CWFI ಆಗ್ರಹ 

ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದು, ಮೃತ ವ್ಯಕ್ತಿಯಿಂದ ಪಡೆದಿದ್ದಾನೆ ಎನ್ನಲಾದ 350 ರೂ. ವನ್ನು ಕೂಡಾ ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಆದರೆ ಮೃತ ವ್ಯಕ್ತಿಯನ್ನು ಇನ್ನೂ ಗುರುತಿಸಲಾಗಿಲ್ಲ ಎಂದು ತಿಳಿದುಬಂದಿದೆ. ದೆಹಲಿ

ಆರೋಪಿ 16 ವರ್ಷದವನಾಗಿದ್ದು, ಮೃತ ಯುವಕನ ಬಗ್ಗೆ ಆತನಿಗೆ ತಿಳಿದಿರಲಿಲ್ಲ. ಆದೆರೆ ದರೋಡೆ ವೇಳೆ ಯುವಕ ಪ್ರತಿರೋಧ ತೋರಿದ ಕಾರಣಕ್ಕೆ ಆರೋಪಿ ಹಲ್ಲೆ ನಡೆಸಿದ್ದಾನೆ. ದಾಳಿಕೋರನು ಯುವಕನ ದೇಹವನ್ನು ಕಿರಿದಾದ ಗಲ್ಲಿಗೆ ಎಳೆದುಕೊಂಡು ಹೋಗುತ್ತಿರುವುದನ್ನು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿವೆ.

ಇದನ್ನೂ ಓದಿ: ಎರಡು ವರ್ಷಗಳ ಕಾಲ ಬಂಧನದಲ್ಲಿದ್ದ ಕಾಶ್ಮೀರಿ ಪತ್ರಕರ್ತ ಫಹಾದ್ ಶಾ ಮರಳಿ ಮನೆಗೆ!

ಗಲ್ಲಿಗೆ ಎಳೆದುಕೊಂಡು ಹೋದ ಬಳಿಕ ಸಾಯುವವರೆಗೂ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದು, ಬಳಿಕ ತಲೆಗೆ ಒಂದೆರಡು ಬಾರಿ ಆರೋಪಿಯು ಒದ್ದಿದ್ದಾನೆ. ಇಷ್ಟೆ ಅಲ್ಲದೆ ದೇಹವು ನಿರ್ಜೀವ ದೇಹದ ಮೇಲೆ ನಿಂತು ನೃತ್ಯ ಕೂಡಾ ಮಾಡಿದ್ದು, ಈ ಭೀಬತ್ಸ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

“ಮಂಗಳವಾರ ರಾತ್ರಿ 11.15 ರ ಸುಮಾರಿಗೆ ಪಿಸಿಆರ್ ಕರೆ ಬಂದಿದ್ದು, 18 ವರ್ಷ ವಯಸ್ಸಿನ ಯುವಕನನ್ನು ದರೋಡೆ ಮಾಡುವ ಉದ್ದೇಶದಿಂದ ಅಪ್ರಾಪ್ತ ವಯಸ್ಕನು ವೆಲ್ಕಮ್ ಏರಿಯಾದ ಜಂತಾ ಮಜ್ದೂರ್ ಕಾಲೋನಿಯಲ್ಲಿ ಚಾಕುವಿನಿಂದ ಇರಿದು ಕೊಂದಿದ್ದಾನೆ” ಎಂದು ಉಪ ಪೊಲೀಸ್ ಆಯುಕ್ತ (ಈಶಾನ್ಯ ಈಶಾನ್ಯ) ) ಜಾಯ್ ಟಿರ್ಕಿ ಹೇಳಿದ್ದಾರೆ ಎಂದು ವರದಿ ಹೇಳಿವೆ. ಯುವಕನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಆದರೆ ಅಷ್ಟೊತ್ತಿಗೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಡಿಯೊ ನೋಡಿ: ನೇಜಾರು ಹತ್ಯೆ ಪ್ರಕರಣ :ಕೊಲೆಗಾರನ ಹಿನ್ನೆಲೆ ತನಿಖೆಯಾಗಲಿ, ಕೋಮುವಾದದ ವಾಸನೆಯೂ ಬಡಿಯುತ್ತಿದೆ Nejaru murder case

Donate Janashakthi Media

Leave a Reply

Your email address will not be published. Required fields are marked *