ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭಾ ಚುನಾವಣೆ ದಿನಾಂಕವನ್ನು ಭಾರತೀಯ ಚುನಾವಣಾ ಆಯೋಗ ಪ್ರಕಟಿಸಿದ್ದು, ಎಲ್ಲಾ 70 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ 5 ರಂದು ಮತದಾನ ನಡೆಯಲಿದ್ದು, ಫೆಬ್ರವರಿ 8ರಂದು ಮತ ಎಣಿಕೆ ನಡೆಯಲಿದೆ.
ಚುನಾವಣೆ ದಿನಾಂಕ ಘೋಷಿಸುವ ಮುನ್ನ ಚುನಾವಣಾ ಇಲಾಖೆಯ ಕಳೆದ ವರ್ಷದ ಸಾಧನೆ ಕುರಿತು ಮೆಲುಕು ಹಾಕಿದ ಮುಖ್ಯ ಚುನಾವಣಾಧಿಕಾರಿ ರಾಜೀವ್ ಕುಮಾರ್ ಈ ಬಾರಿ ದೆಹಲಿ ಚುನಾವಣೆಯಲ್ಲಿ ʼಮನಸ್ಸಿನಿಂದ ಮತಹಾಕಿʼ ಎಂದು ಮತದಾರರಿಗೆ ಕರೆ ನೀಡಿದರು.
ಇನ್ನು ಈ ಬಾರಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಎಎಪಿ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಲಿದ್ದು, ಮತದಾರ ಪ್ರಭು ಯಾರಿಗೆ ಜೈ ಎನ್ನುತ್ತಾನೆ ಎಂಬುದು ಸದ್ಯ ಕುತೂಹಲವನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: ಮದುವೆಗೆ ಸಾಲ ಕೊಡುವುದಾಗಿ ನಂಬಿಸಿ, ಯುವತಿಗೆ ಮದ್ಯ ಕುಡಿಸಿ ಆತ್ಯಾಚಾರವೆಸಗಿದ ಬಿಜೆಪಿ ಮುಖಂಡ
ಒಟ್ಟು 1.55 ಕೋಟಿ ಮತದಾರರು:
ಪುರುಷ ಮತದಾರರು: 83.49 ಲಕ್ಷ
ಮಹಿಳಾ ಮತದಾರರು: 71.74 ಲಕ್ಷ
ಯುವ ಮತದಾರರು (20-29): 25.89 ಲಕ್ಷ
ಇದೇ ಮೊದಲ ಬಾರಿಗೆ ಮತದಾನ ಮಾಡುತ್ತಿರುವವರು: 2.08 ಲಕ್ಷ
ಹಿರಿಯ ಮತದಾರರು (85+ ವಯಸ್ಸಿನವರು ): 1.09 ಲಕ್ಷ
ತೃತೀಯಲಿಂಗಿ ಮತದಾರರು: 1,261 ಮತದಾರರು.
ಇದನ್ನೂ ನೋಡಿ: ಅಕ್ಷರದವ್ವ ಸಾವಿತ್ರಿಬಾಯಿ ಫುಲೆ | ಮಂಜುಳಾ ಹುಲಿಕುಂಟೆ Janashakthi Media