ಹೊಸದಿಲ್ಲಿ ಫೆ 21: ಸಿಂಗು ಗಡಿಯಲ್ಲಿ ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡಿಪಡಿಸಿದ್ದಾರೆ ಹಾಗೂ ಪೊಲೀಸ್ ಓರ್ವರು ಗಾಯಗೊಳ್ಳಲು ಕಾರಣಕರ್ತರಾಗಿದ್ದಾರೆ ಎಂಬ ಆರೋಪದ ಮೇರೆಗೆ ಬಂಧನಕ್ಕೊಳಗಾಗಿದ್ದ ಸ್ವತಂತ್ರ್ಯ (ಫ್ರಿಲ್ಯಾನ್ಸರ್) ಪತ್ರಕರ್ತ ಮನ್ ದೀಪ್ ಪೂನಿಯಾರವರಿಗೆ ದೆಹಲಿ ಜಾಮೀನು ನೀಡಿದೆ.
ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸತ್ವೀರ್ ಸಿಂಗ್ ಲಂಬಾ, ಅವರು ಹೇಳಿದಂತೆ ಆರೋಪಿಯು ಪೊಲೀಸ್ ಕಾನ್ ಸ್ಟೇಬಲ್ ಆಗಿರುವ ರಾಜ್ ಕುಮಾರ್ ಎಂಬವರನ್ನು ಪ್ರತಿಭಟಿಸುತ್ತಿದ್ದ ರೈತರ ಕಡೆಗೆ ತಳ್ಳಿದ ಕಾರಣ ಸಣ್ಣ ಗಲಭೆ ಉಂಟಾಗಿತ್ತು. ಅಲ್ಲಿಗೆ ಕೆಲವು ಪೊಲೀಸರನ್ನೂ ನಿಯೋಜಿಸಲಾಗಿತ್ತು” ಆ ಸಂದರ್ಭದಲ್ಲಿ ಆರೋಪಿಯ ಚರಂಡಿಯಲ್ಲಿ ಬಿದ್ದನು, ಇದರಿಂದ ಬಂಧಿಸಲು ಸುಲಭವಾಯಿತು ಎಂದು ಪೊಲೀಸರು ತಿಳಿಸಿದರು.
‘ಪ್ರಸ್ತುತ ಘಟನೆಯು ಸಂಜೆ 6.30 ರ ಸುಮಾರಿಗೆ ನಡೆದಿತ್ತು ಎಂದು ಇಲ್ಲಿ ಉಲ್ಲೇಖಿಸುವುದು ಸೂಕ್ತವಾಗಿದೆ ಆದರೆ, ಎಫ್‌ಐಆರ್ ಮರುದಿನ ಮುಂಜಾನೆ 1.21 ರ ಸುಮಾರಿಗೆ ನೋಂದಾಯಿಸಲಾಗಿದೆ. ಹಾಗೆಯೇ ಆರೋಪಿಯ ವಿರುದ್ಧ ದೂರು ನೀಡಿದವರು, ಬಲಿಪಶುಗಳು ಮತ್ತು ಸಾಕ್ಷಿಗಳು ಪೊಲೀಸ್ ಸಿಬ್ಬಂದಿ ಮಾತ್ರ ಆಗಿದ್ದಾರೆ. ಆದ್ದರಿಂದ, ಆರೋಪಿ / ಅರ್ಜಿದಾರರು ಯಾವುದೇ ಪೊಲೀಸ್ ಅಧಿಕಾರಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿಲ್ಲ. ಎಂದು ನ್ಯಾಯಾಧೀಶರು ಮನ್ದೀಪ್ ಪೂನಿಯಾ ರವರಿಗೆ 25 ಸಾವಿರ ರೂ.ಗಳ ಬಾಂಡ್ ನೊಂದಿಗೆ ಜಾಮೀನು ನೀಡಿದ್ದಾರೆ.
ವರದಿ : ಭೀಮನಗೌಡ ಸುಂಕೇಶ್ವರಾಳ