ದೆಹಲಿ ರೈತ ಚಳುವಳಿ ನೇರ ಅನುಭವ – 8 : ಸರ್ವಾಧಿಕಾರಿ ಧೋರಣೆಯ ವಿರುದ್ದ, ಸಂವಿಧಾನ ಉಳಿಸುವ ಹೋರಾಟ”

ರೈತ ನಾಯಕ ಎಚ್.ಆರ್. ನವೀನ್ ಕುಮಾರ್ ದೆಹಲಿ ರೈತ ಚಳುವಳಿ ಅನುಭವ ಹಂಚಿಕೊಂಡಿದ್ದಾರೆ

ಹಾಗೆ ಮುಂದೆ ಹೆಜ್ಜೆ ಹಾಕಿದರೆ ಹತ್ತು ಹಲವು ವಿಶೇಷತೆಗಳು ನಮ್ಮ ಕಣ್ಣಿಗೆ ಗೋಚರಿಸುತ್ತವೆ. KFC ಎನ್ನುವ ಬಹುರಾಷ್ಟ್ರೀಯ ಕಂಪನಿಯ ಆಹಾರೋಧ್ಯಮದ ದೊಡ್ಡ ಕಟ್ಟಡ ದೆಹಲಿಯ ಸಿಂಗು ಗಡಿಭಾಗದಲ್ಲಿದೆ. ಈ ಕಟ್ಟಡದ ಸುತ್ತ ರೈತರು ತಮ್ಮ ಟ್ರ್ಯಾಕ್ಟರ್ ಗಳನ್ನ ನಿಲ್ಲಿಸಿಕೊಂಡು ಸುತ್ತಲೂ ಬಿಡಾರ ಹೂಡಿದ್ದಾರೆ. ಮಾತ್ರವಲ್ಲ ಸರಿಸುಮಾರು ಐದರಿಂದ ಆರು ಅಂತಸ್ತಿನ ಈ ಬೃಹತ್ ಕಟ್ಟಡದ ಮೇಲೆ ಸುಮಾರು ನೂರು ಅಡಿಗಳಿಗೂ ದೊಡ್ಡದಾದ ಒಂದು ಪಿಲ್ಲರ್ ನಿರ್ಮಿಸಲಾಗಿದೆ. ಈ ಪಿಲ್ಲರ್ ನ ಮೇಲೆ KFC ಎಂಬ ದೊಡ್ಡ ಬೋರ್ಡ್ ಇದೆ.

ಇದನ್ನು ಓದಿ : ಮೋದಿಯವರ ಅಡ್ಡಗೋಡೆಗಳನ್ನು ದಾಟಿದ ದೇಶಪ್ರೇಮಿ ಹೋರಾಟ

ಇದೇ ಬೋರ್ಡ್ ನ ಪಕ್ಕದಲ್ಲೇ ರೈತರು ಮತ್ತೊಂದು ಬೋರ್ಡನ್ನು ತೂಗುಹಾಕಿ, ಹೋರಾಟದ ಬಾವುಟಗಳನ್ನ ಹಾಕಿದ್ದಾರೆ. ಆ ಬೋರ್ಡ್ ನಲ್ಲಿ KFC ಎಂದರೆ ಕಿಸಾನ್ ಫುಡ್ ಕಾರ್ನರ್ Kisan Food Corner (ರೈತರ ಆಹಾರ ಕೇಂದ್ರ) ಇಲ್ಲಿ ಎರಡು ವಿಷಯಗಳನ್ನು ಗಮನಿಸಬಹುದು ಒಂದು ರೈತರ ಕ್ರಿಯಾಶೀಲತೆ ಮತ್ತು ಆಹಾರ ಎನ್ನುವುದು ಬಹುರಾಷ್ಟ್ರೀಯ ಕಂಪನಿಗಳ ಲಾಭಕ್ಕಾಗಿ ಬಳಕೆಯಾಗುತ್ತಿದೆ. ಆದರೆ ಇಲ್ಲಿ ರೈತರು ತಮ್ಮ ಲಂಗರ್ ಗಳ ಮೂಲಕ ಎಲ್ಲರಿಗೂ ಉಚಿತವಾಗಿ ಆಹಾರವನ್ನ ನೀಡುತ್ತಿದ್ದಾರೆ ಎಂಬುದು.

ಇದನ್ನೂ ಓದಿ : ಜೈಜವಾನ್ ಜೈಕಿಸಾನ್ ಘೋಷಣೆ ಗೆ ಅರ್ಥ ಬರಬೇಕಾದರೆ ನಾವು ಈ ರೈತ ಹೋರಾಟದಲ್ಲಿ ಭಾಗಿಯಾಗಬೇಕು

ಸುಮಾರು ಇಪ್ಪತ್ತು ಕಿಲೋಮೀಟರ್ ದೂರದವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹತ್ತಾರು ಸಾವಿರ ಟ್ರ್ಯಾಕ್ಟರ್ ಗಳನ್ನು‌ ನಿಲ್ಲಿಸಿಕೊಂಡು ಒಂದು‌ ದೊಡ್ಡ ಹಳ್ಳಿಯನ್ನೇ ನಿರ್ಮಿಸಿಕೊಂಡು ಚಳುವಳಿ‌ ಮಾಡುತ್ತಿರುವುದೇ ಒಂದು‌ ವಿಶೇಷವಾಗಿದೆ. (ಭವಿಷ್ಯ ಭಾರತದಲ್ಲಿ‌ ಇಷ್ಟು ದೊಡ್ಡ‌ ಹಳ್ಳಿ ಇರಲು ಸಾಧ್ಯವೇ ಇಲ್ಲ) ಅದರಲ್ಲಿ ಅವರ ಸಂಸ್ಕೃತಿಗಳು ಇನ್ನೂ ವಿಶೇಷ. ಅಲ್ಲಿ ನಮ್ಮ ಕಣ್ಣಿಗೆ ಕೆಲವು ಮನೆಗಳು ಗೋಚರಿಸಿದವು. ಇವುಗಳು ಟ್ರ್ಯಾಕ್ಟರ್ ನ ಟ್ರ್ಯಾಲಿಯ ಮೇಲೆ ನಿರ್ಮಿಸಿದ ಶೆಡ್ ನ ಮನೆಗಳು. ಆ ಮನೆಗಳು ಟ್ರ್ಯಾಕ್ಟರ್ ಟ್ರ್ಯಾಲಿಯ ಎರಡು (ಕೆಲವಕ್ಕೆ ನಾಲ್ಕು) ಚಕ್ರಗಳ ಮೇಲೆ ಹೆದ್ದಾರಿಯಲ್ಲಿ ನಿಂತಿರಬಹುದು ಆದರೆ ಅದರ ಒಳಗೆ ನಾವು ಪ್ರವೇಶಿಸಿದರೆ ಗೊತ್ತಾಗುತ್ತದೆ. ಅದು ಗ್ರಾಮಗಳಲ್ಲಿರುವ ಮನೆಗಳಿಗೂ ಇಲ್ಲಿಗೂ ಯಾವ ವ್ಯತ್ಯಾಸಗಳು ಕಾಣಿಸುವುದಿಲ್ಲ. ಅಲ್ಲಿ ಕಬ್ಬಿಣ, ಇಟ್ಟಿಗೆ ಬಳಸಿ ಗೋಡೆ ಕಟ್ಟಲಾಗಿರುತ್ತದೆ ಇಲ್ಲಿ ಬಿದಿರು, ಪ್ಲಾಸ್ಟಿಕ್ ಟಾರ್ಪಲ್ ಬಳಸಿ ಗೋಡೆ ನಿರ್ಮಿಸಲಾಗಿದೆ.

ಇದನ್ನೂ ಓದಿ : ದೆಹಲಿ ರೈತ ಚಳುವಳಿ ನೇರ ಅನುಭವ – 5 “ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು”

ನೆಲಹಾಸಿಗೆ ಸುಮಾರು ಅರ್ದ ಅಡಿಯಷ್ಟು ಎತ್ತರದ ಹುಲ್ಲನ್ನ ಹಾಸಿ ಅದರ ಮೇಲೆ ಹಾಸಿಗೆಯನ್ನು ಹಾಸಲಾಗಿದೆ. ಮೇಲೊಂದು ಉರಿಯುವ ಲೈಟ್ (ಕೆಲವರು ಸೋಲಾರ್ ಬಳಸಿದರೆ, ಇನ್ನೂ ಕೆಲವರು ಅಧಿಕೃತವಾಗಿ ತಾತ್ಮಾಲಿಕ ವಿದ್ಯುತ್ ಸಂಪರ್ಕ ತೆಗೆದುಕೊಂಡಿದ್ದಾರೆ) ಜೊತೆಗೆ ಮೊಬೈಲ್ ಚಾರ್ಜ್ ಗೆ ಬೇಕಾದ ಪ್ಲಗ್ ಪಾಯಿಂಟ್, ಪಕ್ಕದಲ್ಲಿ ಒಂದು ಟೀವಿ, ಅದಕ್ಕಾಗಿ ಟ್ರ್ಯಾಕ್ಟರ್ ಚಾವಣಿ ಮೇಲೆ ಡಿಶ್ ಆಂಟೆನ. ಈ ರೀತಿಯ ಒಂದು ಟೆಂಟ್ ನಲ್ಲಿ 3-4 ಜನರ ವಾಸ. ಜೊತೆಗೆ ಅವರಿಗೆ ಬೇಕಾದ ಅಡುಗೆ ಸಾಮಾನುಗಳು, ಒಂದಷ್ಟು ಪುಸ್ತಕ ಮತ್ತು ಪತ್ರಿಕೆಗಳು, ಭಗತ್ ಸಿಂಗ್ ನ ಒಂದು ಫೋಟೋ, ಐ ಲವ್ ಖೇತಿ (ನಾನು ವ್ಯವಸಾಯವನ್ನು ಪ್ರೀತಿಸುತ್ತೇನೆ) ಎನ್ನುವ ಒಂದು ಸ್ಟಿಕ್ಕರ್. ಶೆಡ್ ನ ಮುಂದೆ ಸೌದೆಯ ಬೆಂಕಿ ಯಾವಾಗಲೂ ಉರಿಯುತ್ತಿರುತ್ತದೆ. ಅದರ ಸುತ್ತ ನಾಲ್ಕೈದು ಕುರ್ಜಿಗಳು ಕೆಲವರು ಗ್ಯಾಸ್ ಸಿಲೆಂಡರ್ ನಲ್ಲಿ ಅಡುಗೆ ಮಾಡಿಕೊಳ್ಳುತ್ತಾರೆ, ಬಹುತೇಕರು ಇಟ್ಟಿಗೆಗಳನ್ನು ಇಟ್ಟು ಒಲೆಯನ್ನು ನಿರ್ಮಿಸಿಕೊಂಡು ಅಡುಗೆ ಮಾಡುತ್ತಾರೆ.

ಇದನ್ನೂ ಓದಿ : ದೆಹಲಿ ರೈತ ಚಳುವಳಿ ನೇರ ಅನುಭವ – 3 : ಮೋದಿ ಅಂದರೆನೇ “ಏನೂ ಆಗಲ್ಲ”

ಅದಕ್ಕಾಗಿ ಕೆಲವು ಪಾತ್ರೆಗಳು ನೀರಿಗಾಗಿ ಒಂದು ಸಣ್ಣ ಸಿಂಟೆಕ್ ಅಥವಾ ಡ್ರಮ್. ಎತ್ತರದಲ್ಲಿರುವ ಟ್ರ್ಯಾಲಿಯ ಮನೆಗೆ ಹತಗತಲು ಕಬ್ಬಿಣದ, ನರದ ಏಣಿಗಳು. ಇದು ಒಂದು ಟೆಂಟ್ ನ ದೃಶ್ಯವಲ್ಲ ಟಿವಿಯೊಂದನ್ನ ಹೊರತುಪಡಿಸಿದರೆ ಇಲ್ಲಿರುವ ಎಲ್ಲಾ ಸಾವಿರಾರು ಟೆಂಟುಗಳಲ್ಲೂ ಇದೇ ರೀತಿಯ ವ್ಯವಸ್ಥೆ ಇದೆ. ಇದೆಲ್ಲವನ್ನ ಸೂಕ್ಷ್ಮವಾಗಿ ಗಮನಿಸಿದರೆ ಇವರು ಈ ಚಳುವಳಿಗಾಗಿ ನಡೆಸಿದ ತಯಾರಿ ಎಂತಹದ್ದು ಎಂದು ಗೊತ್ತಾಗುತ್ತದೆ. ಮಾತ್ರವಲ್ಲದೆ ಇವರು ಏನನ್ನಾದರೂ ಸಾಧಿಸಿಯೇ ಹೋಗುವುದೆಂದು ನಿರ್ಧರಿಸಿಕೊಂಡೇ ಬಂದಂತಿದೆ.

ಇದನ್ನೂ ಓದಿ : ದೆಹಲಿ ರೈತ ಚಳುವಳಿ ನೇರ ಅನುಭವ – 4 ದೆಹಲಿ ರೈತರ ಪ್ರತಿಭಟನೆ ಇಡೀ ದೇಶದ ಪ್ರತಿಭಟನೆ

ಮುಂದೆ ಹೋದಂತೆಲ್ಲ ದಾರಿ ಸಾಗುತ್ತಲೇ‌ ಇಲ್ಲ ಎಂದೆನಿಸುತ್ತಿತ್ತು. ದೆಹಲಿಯ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಶಾಲಾ ಬಸ್ ಗಳನ್ನು ಮಹಿಳೆಯರ ವಸತಿ ಗೃಹಗಳನ್ನಾಗಿ ಪರಿವರ್ತಿಸಿ ಕಳುಹಿಸಿದ್ದಾರೆ. ಕೊರೊನಾದ ಕಾರಣಕ್ಕಾಗಿ ಶಾಲೆಗಳು ನಡೆಯದಿರುವುದರಿಂದ ಅಲ್ಲಿ ಸುಮ್ಮನೆ ನಿಂತಿದ್ದ ಬಸ್ಸುಗಳು ಇಲ್ಲಿ ನಿಲ್ಲುವ ಮೂಲಕ ಮಹತ್ ಕಾರ್ಯದಲ್ಲಿ ಕೈಜೋಡಿಸಿವೆ. ಈ ಬಸ್ಸುಗಳಲ್ಲಿರುವ ಸೀಟುಗಳನ್ನೆಲ್ಲ ತೆಗೆದು ಹಾಸಿಗೆಗಳನ್ನ ಹಾಸಲಾಗಿದೆ. ಒಂದು ಬಸ್ಸಿನಲ್ಲಿ ಕನಿಷ್ಟ ಹತ್ತು ಜನ ಆರಾಮಾಗಿ ಮಲಗಬಹುದು.

ಇದನ್ನೂ ಓದಿ : ದೆಹಲಿ ರೈತ ಚಳುವಳಿ ನೇರ ಅನುಭವ -6 : ರೈತರ ಹೋರಾಟ ಒಂದು ವಿಶ್ವವಿದ್ಯಾಲಯದಂತಿದೆ

ನಮ್ಮ ಗಮನವನ್ನು ಸೆಳೆದ ಮತ್ತೊಂದು ಸಂಗತಿಯೆಂದರೆ ಒಂದು ಕಡೆ ದೊಡ್ಡ ಪೆಂಡಾಲನ್ನ ಹಾಕಿ ಅದರಲ್ಲಿ ಭಾರತದ ಸಂವಿಧಾನದ ಪ್ರತಿಯ ಕಲಾಕೃತಿಯನ್ನು ನಿರ್ಮಿಸಿ ಡಾ.ಬಿ.ಆರ್.ಅಂಬೇಡ್ಕರ್, ಜ್ಯೋತಿ ಬಾಪುಲೆ, ಸಾವಿತ್ರಿ ಬಾಪುಲೆ, ಮಾರ್ಟಿ ಲೂತರ್ ಕಿಂಗ್, ನೆಲ್ಸನ್ ಮಂಡೇಲಾ ರವರ ಭಾವ ಚಿತ್ರಗಳು ಮತ್ತು ಅವರ ಬರಹಗಳನ್ನೊಳಗೊಂಡ ಪುಸ್ತಕಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಅಲ್ಲಿದ್ದವರನ್ನ ಮಾತನಾಡಿಸಿದಾಗ ಅವರು ಹೇಳಿದ್ದು ಈ ಚಳುವಳಿಯಲ್ಲಿ ದೊಡ್ಡಸಂಖ್ಯೆಯಲ್ಲಿ ದಲಿತರಿದ್ದಾರೆ ಆದರೆ ನಾವೆಲ್ಲ ಇಲ್ಲಿ ಕೇವಲ ರೈತ ವರ್ಗವಾಗಿ ಮಾತ್ರ ಭಾಗವಹಿಸಿದ್ದೇವೆ. ನಮ್ಮೆಲ್ಲರ ಗುರಿ ಒಂದೇ ಕರಾಳ ಕೃಷಿ ಕಾಯ್ದೆಗಳು ರದ್ದಾಗಬೇಕು, ಆಮೂಲಕ ಈ ದೇಶದ ಕೃಷಿ ಉಳಿಯಬೇಕು. ದೇಶದ ಸಂವಿಧಾನ ಉಳಿಯಬೇಕು. ಇದು ಸಂವಿಧಾನದ ಆಶಯಗಳನ್ನು ನಾಶಮಾಡುತ್ತಿರುವ ಮೋದಿ ಸರ್ಕಾರದ ಸರ್ವಾಧಿಕಾರಿ ದೋರಣೆಯ ವಿರುದ್ದ, ಸಂವಿಧಾನ ಉಳಿಸುವ ಹೋರಾಟ” ಎಂದರು. (ಮುಂದುವರೆಯುತ್ತದೆ)

ದೆಹಲಿ ರೈತರ ಹೋರಾಟದಲ್ಲಿ ಅಧ್ಯಯನ ಮತ್ತು ಶಿಸ್ತು

 

 

Donate Janashakthi Media

Leave a Reply

Your email address will not be published. Required fields are marked *