ಹಾಸನ : ಏಪ್ರಿಲ್ 26 ರಂದು ನಡೆಯುತ್ತಿರುವ ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಭ್ರಷ್ಟ ಬಿಜೆಪಿ ಮತ್ತು ಸ್ವಾರ್ಥಿ ಜೆಡಿಎಸ್ ಅಪವಿತ್ರ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ಬಲ್ ರೇವಣ್ಣ ಅವರನ್ನು ಸೋಲಿಸುವಂತೆ ಹಾಸನ ಜೆಲ್ಲೆಯ ಜನಪರ ಚಳುವಳಿಗಳ ಒಕ್ಕೂಟ ಹಾಸನ ಲೋಕಸಭಾ ಕ್ಷೇತ್ರದ ಮತದಾರರಿಗೆ ಮನವಿ ಮಾಡಿಕೊಂಡಿದೆ. ಭ್ರಷ್ಟ ಬಿಜೆಪಿ
ಈ ಸಂಬಂಧ ಮಾರ್ಚ್ 31 ರಂದು ಹಾಸನದಲ್ಲಿ ನಡೆದ ಹಾಸನ ಜಿಲ್ಲೆಯ ಕಮ್ಯೂನಿಸ್ಟ್, ದಲಿತ, ರೈತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಅಲ್ಪಸಂಖ್ಯಾತ ಮತ್ತಿತರೆ ಜನ ವಿಭಾಗಗಳ ಜನಪರ ಚಳುವಳಿಗಳ ನಾಯಕರು ಮತ್ತು ಜಿಲ್ಲೆಯ ಜನಪರ ವ್ಯಕ್ತಿಗಳ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದ್ದು ‘ಬಿಜೆಪಿ – ಜೆಡಿಎಸ್ ಸೋಲಿಸಿ; ಹಾಸನ ಉಳಿಸಿ’ ಎಂಬ ಅಬಿಯಾನವನ್ನು ಹಾಸನ ಲೋಕಸಭಾ ಕ್ಷೇತ್ರದಾದ್ಯಂತ ವ್ಯಾಪಕವಾಗಿ ನಡೆಸಲು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಭ್ರಷ್ಟ ಬಿಜೆಪಿ
‘ಭ್ರಷ್ಟ ಬಿಜೆಪಿ ಸೋಲಿಸಿ; ಭಾರತ ಉಳಿಸಿ’
ಹಿರಿಯ ಪತ್ರಕರ್ತ ಆರ್ ಪಿ ವೆಂಕಟೇಶ ಮೂರ್ತಿ ಮಾತನಾಡಿ, ಕಳೆದ 10 ವರ್ಷಗಳ ಹಿಂದೆ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಾಗ ಅವರು ಹೇಳಿದ್ದೇನು? ನಾವು ಇತರರಂತಲ್ಲ ಬಿಜೆಪಿ ಇತರ ಪಕ್ಷಗಳಿಗಿಂತ ಭಿನ್ನ ಪಕ್ಷ, ನಮ್ಮದು ಪ್ರಾಮಾಣಿಕ ಮತ್ತು ದೇಶಭಕ್ತರ ಪಕ್ಷ, ಸ್ವಾತಂತ್ರ್ಯಾನಂತರದ ಭಾರತ ಯಾವುದೇ ಅಭಿವೃದ್ಧಿಯಾಗಿಲ್ಲ, ಈ ದೇಶದ ಜನ ಬೆಲೆ ಏರಿಕೆ, ನಿರುದ್ಯೋಗ, ಬಡತನ, ರೈತರ ಆತ್ಮಹತ್ಯೆ, ಭ್ರಷ್ಟಾಚಾರ ಇನ್ನಿತರ ಸಮಸ್ಯೆಗಳಿಂದ ಬಳಲುತ್ತಿದ್ದಾರೆ, ಇದುವರೆಗೂ ಅಧಿಕಾರ ನಡೆಸಿದವರು ಸ್ವಿಸ್ ಬ್ಯಾಂಕ್‌ಗಳಲ್ಲಿ ಕಪ್ಪುಹಣ ಕೂಡಿಟ್ಟಿದ್ದಾರೆ, ನಾವು ಅದನ್ನೆಲ್ಲಾ ದೇಶಕ್ಕೆ ಮರಳಿ ತರುತ್ತೇವೆ, ‘ ಜನರ ಹಣವನ್ನು ನಾನೂ ತಿನ್ನುವುದಿಲ್ಲಾ… ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ’ (ನಾ ಖಾವೂಂಗಾ… ನಾ ಮೇ ಖಾನೇ ದೂಂಗಾ…) ‘ನಾನು ಈ ದೇಶದ ಜನರ ಖಜಾನೆಯ ಕಾವಲುಗಾರ’ (ಮೇ ಚೌಕೀದಾರ್ ಹೂಂ…) ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮೊದಲು ಮಾಡುವ ಕೆಲಸ ಎಂದರೆ ರೈತರ ಸಾಲಮನ್ನಾ ಮಾಡಿ ಅವರು ಬೆಳೆದ ಬೆಳೆಗೆ ಡಾ. ಸ್ವಾಮಿನಾಥನ್ ಶಿಫ಼ಾರಸ್ಸಿನಂತೆ ಕನಿಷ್ಟ ಬೆಂಬಲ ಬೆಲೆ ನೀಡುತ್ತೇವೆ, ಯುವಜನರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿಸಲಾಗುವುದು, ಅಗತ್ಯ ವಸ್ತುಗಳ ಮತ್ತು ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆಗಳನ್ನು ಇಳಿಸುತ್ತೇವೆ, ದೇಶ ಮತ್ತು ದೇಶದ ಸಂಪತ್ತನ್ನು ಸುರಕ್ಷಿತವಾಗಿಟ್ಟು ಜನರಿಗೆ ‘ಒಳ್ಳೆಯ ದಿನ’ ತರಲಾಗುವುದು ಎಂದಿದ್ದರು. ಆದರೆ ಆಗಿದ್ದೇನು? ಬಿಜೆಪಿ ಮಾಡಿದ್ದೇನು? ಎಂದರು. ಭ್ರಷ್ಟ ಬಿಜೆಪಿ
ಕಾಲಕಾಲಕ್ಕೆ ಪ್ರತೀವರ್ಷ ಜಾಗತಿಕವಾಗಿ ಪ್ರಕಟಿಸುವ ಹಸಿವು, ಆರೋಗ್ಯ, ನಿರುದ್ಯೋಗ, ಬಡತನ, ಅಪೌಷ್ಟಿಕತೆ, ಭ್ರಷ್ಟಾಚಾರ, ಮುಕ್ತ ಮಾಧ್ಯಮ ಸ್ವಾತಂತ್ಯ, ಶಿಕ್ಷಣ, ಆರ್ಥಿಕ ಮತ್ತಿತರೆ ಜಾಗತಿಕ ಸೂಚ್ಯಂಕಗಳ ಪಟ್ಟಿಯಲ್ಲಿ ದೇಶದ ಸ್ಥಾನ ವರ್ಷದಿಂದ ವರ್ಷಕ್ಕೆ ಅತ್ಯಂತ ಕೆಳಮಟ್ಟಕ್ಕೆ ಕುಸಿಯುತ್ತಲೇ ಇದೆ. ಹಾಗಾದರೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಾಧಿಸಿದ್ದೇನು? ದೇಶದ ಸಾರ್ವಜನಿಕ ಆಸ್ತಿ, ಸಂಪತ್ತನ್ನು ಮತ್ತು ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಲು ಅಂಬಾನಿ, ಅದಾನಿಯಂತಹ ಹತ್ತಾರು ಕಾರ್ಪೊರೇಟ್ ಕಂಪನಿಗಳಿಗೆ ಕಾನೂನಾತ್ಮಕವಾಗಿ ಮುಕ್ತ ಅವಕಾಶ ನೀಡಲಾಗಿದೆ. ಅಂತಹ ಕಂಪನಿಗಳಿಂದ ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಾವಿರಾರು ಕೋಟಿ ದೇಣಿಗೆ ಪಡೆದಿದೆ. ಅಗತ್ಯ ವಸ್ತುಗಳು, ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆಗಳನ್ನು ಇಳಿಸುವ ಬದಲಿಗೆ ಅವುಗಳ ಬೇಕಾಬಿಟ್ಟಿ ಬೆಲೆಏರಿಕೆಗೆ ಮುಕ್ತ ಅವಕಾಶ ನೀಡಿ ಜನರ ದುಡಿಮೆಯ ಹಣವನ್ನು ಲೂಟಿ ಮಾಡಲು ಅವಕಾಶ ನೀಡಲಾಗಿದೆ. ಬೆಜೆಪಿ ತಾನು ಹೇಳಿದಂತೆ ಹೊಸದಾಗಿ ಉದ್ಯೋಗಗಳನ್ನು ಸೃಷ್ಟಿಸುವುದಿರಲಿ ಬದಲಿಗೆ ಇದುವರೆಗೆ ಇದ್ದ ಉದ್ಯೋಗದ ಅವಕಾಶಗಳನ್ನೇ ನಾಶಪಡಿಸಿದೆ. ಖಾಸಗೀಕರಣ ಮತ್ತು ಗುತ್ತಿಗೇಕರಣ ನೀತಿಗಳು ಮತ್ತು ಕೈಗಾರಿಕಾ ಉತ್ಪಾದನಾ ವಲಯಗಳನ್ನು ಸಂಪೂರ್ಣ ಕಡೆಗಣಿಸಿದ ಪರಿಮಣಾಮವಾಗಿ ದೇಶದಲ್ಲಿ ಕೋಟ್ಯಾಂತರ ಉದ್ಯೋಗಗಳು ನಾಶವಾಗಿವೆ. ಕಳೆದ 10 ವರ್ಷಗಳಲ್ಲಿ ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಮಿಕರ ವೇತನದ ಪಾಲು ಕಡಿಮೆಯಾಗಿ ಮಾಲೀಕರ ಲಾಭದ ಪಾಲು ಹೆಚ್ಚಾಗುತ್ತಿದೆ ಎಂದರು. ಭ್ರಷ್ಟ ಬಿಜೆಪಿ
ದಲಿತ ಮುಖಂಡ ಎಚ್ ಕೆ ಸಂದೇಶ್ ಮಾತನಾಡಿ, ದೇಶದಲ್ಲಿ ಬಡತನ, ಅಪೌಷ್ಟಿಕತೆ, ನಿರುದ್ಯೋಗ, ಅನಾರೋಗ್ಯದ ಮಟ್ಟ ಕಳೆದ 45 ವರ್ಷಗಳ ಹಿಂದಕ್ಕೆ ಹೋಲಿಸಿದಲ್ಲಿ ಅತ್ಯಂತ ತೀವ್ರವಾಗಿ ಏರಿಕೆಯಾಗಿದೆ. ನರೇಂದ್ರ ಮೋದಿ ನೇತೃತ್ವದ ಬೆಜೆಪಿ ಸರ್ಕಾರ ಭ್ರಷ್ಟಾಚಾರವನ್ನೇ ಕಾನೂನುನದ್ಧಗೊಳಿಸಿ ‘ಚುನಾವಣಾ ಬಾಂಡ್’ ಹೆಸರಿನಲ್ಲಿ ಸಾವಿರಾರು ಕೋಟಿ ಹಣವನ್ನು ತನ್ನ ಪಕ್ಷಕ್ಕೆ ದೇಣಿಗೆಯಾಗಿ ಪಡೆದಿದೆ. ಅಲ್ಲದೆ ತನಗೆ ದೇಣಿಗೆ ನೀಡಿದ ಕಂಪನಿಗಳು ಮತ್ತು ಉದ್ಯಮಿಗಳಿಗೆ ಲಕ್ಷಾಂತರ ಕೋಟಿ ರೂಪಾಯಿಗಳ ಜನರ ತೆರಿಗೆ ಹಣದ ಲೂಟಿಗೆ ಅವಕಾಸ ನೀಡಿದೆ ಈ ಕೊಡುಗೆಗಾಗಿ ತಾನೂ ಕೂಡ ಲಕ್ಷಾಂತರ ಕೋಟಿ ಹಣವನ್ನು ಲೂಟಿ ಮಾಡಿದೆ. ‘ಚುನಾವಣಾ ಬಾಂಡ್’ ಹಿನ್ನೆಲೆಯಲ್ಲಿ ದೇಶದಲ್ಲಿ ಇದುವರೆಗೂ ತಜ್ಞರು ಅಂದಾಜಿಸಿರು ಪ್ರಕಾರ ಒಟ್ಟು 127 ಲಕ್ಷ ಕೋಟಿ ಅಕ್ರಮ ನಡೆದಿದೆ ಈ ಹಣದಲ್ಲಿ ನರೇಂದ್ರ ಮೋದಿ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಅತ್ಯಂತ ಪ್ರಮುಖ ಪಾಲುದಾರರಾಗಿದ್ದಾರೆ. ಇದೊಂದು ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡದಾದ ಭ್ರಹ್ಮಾಂಡ ಭ್ರಷ್ಟಾಚಾರವಾಗಿದೆ. ಇಂತಹ ಕಡುಭ್ರಷ್ಟ, ಜನವಿರೋಧಿ ಮತ್ತು ದೇಶವರೋಧಿ ಬಿಜೆಪಿ ತನ್ನ ಅಕ್ರಮ, ದುರಾಡಳಿತ, ಭ್ರಷ್ಟಾಚಾರ ಮುಚ್ಚಿಟ್ಟುಕೊಳ್ಳಲು ಹಿಂದುತ್ವ, ಧರ್ಮ, ಸಂಸ್ಕೃತಿ ಹೆಸರಿನಲ್ಲಿ ಜನರನ್ನು ವಿಭಜಿಸಿ ವಿಧ್ವಂಸಕ ರಾಜಕಾರಣದಲ್ಲಿ ತೊಡಗಿದೆ. ದೇಶದ ಸಂವಿಧಾನವನ್ನೇ ಬುಡಮೇಲು ಮಾಡಲು ಸಂಚು ರೂಪಿಸಿದೆ. ದೇಶದ ಸಂವಿಧಾನಬದ್ಧ ಸ್ವಾಯತ್ತ ತನಿಕಾ ಸಂಸ್ಥೆಗಳನ್ನು ವಿರೋಧ ಪಕ್ಷಗಳನ್ನು, ಜನಚಳುವಳಿಗಳನ್ನು ಮತ್ತು ಮಾಧ್ಯಮ ಸಂಸ್ಥೆಗಳನ್ನು ಮಟ್ಟಹಾಕಲು ಹಾಗೂ ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಬಳಸುತ್ತಿದೆ. ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಅಪಾಯಕ್ಕೆ ಸಿಲುಕಿದೆ. ಭಾರತ ಉಳಿಯಬೇಕಿದ್ದರೆ ಬಿಜೆಪಿ ಸೋಲಲೇ ಬೇಕೆದೆ. ಹಾಗಾಗಿ ‘ಬಿಜೆಪಿ ಸೋಲಿಸಿ ಭಾರತ ಉಳಿಸಿ’ ಎಂದರು. ಭ್ರಷ್ಟ ಬಿಜೆಪಿ
ಇದನ್ನು ಓದಿ : ಕೊಳೆಗೇರಿ ನಿವಾಸಿಗಳಿಗೆ ಮನೆ ಕೊಡುವ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಕತೆ ಗೊತ್ತಾ ನಿಮಗೆ? – ಸಿದ್ದರಾಮಯ್ಯ ಪ್ರಶ್ನೆ
‘ಸ್ವಾರ್ಥಿ ಜೆಡಿಎಸ್ ಸೋಲಿಸಿ; ಹಾಸನ ಉಳಿಸಿ’
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್ ಮಾತನಾಡಿ, ದೇಶ ಎದುರಿದುತ್ತಿರುವ ಇಂತಹ ಅಪಾಯಕಾರಿ ಸಂದರ್ಭದಲ್ಲಿ ತನ್ನನ್ನು ತಾನು ‘ಜಾತ್ಯಾತೀತ’ ಮತ್ತು ಕಾಂಗ್ರೇಸ್ ಮತ್ತು ಬೆಜೆಪಿಗೆ ಪರ್ಯಾಯವಾಗಿ ಕರ್ನಾಟಕದ ಜನರ ಹಿತಾಸಕ್ತಿಗಾಗಿ ಇರುವ ಪ್ರಾದೇಶಿಕ ಪಕ್ಷ ಎಂದು ಹೇಳಿಕೊಳ್ಳುತ್ತಿದ್ದ ಜೆಡಿಎಸ್ ಭ್ರಷ್ಟ ಹಾಗೂ ಸಂವಿಧಾನ ವಿರೋದಿ ಬಿಜೆಪಿ ಜೊತೆಗೆ ಸೇರಿ ಚುನಾವಣಾ ಮೈತ್ರಿ ಮಾಡಿಕೊಂಡಿದೆ. ಈ ಮೈತ್ರಿ ಕೇವಲ ದೇವೇಗೌಡರ ಕುಟುಂಬದ ಆಸ್ತಿ ಮತ್ತು ಸಂಪತ್ತಿನ ರಕ್ಷಣೆಗೆ, ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಅಧಿಕಾರ ಸಿಗಬೇಕು ಎನ್ನುವ ಏಕೈಕ ಉದ್ದೇಶದಿಂದ ಅತ್ಯಂತ ಸ್ವಾರ್ಥದಿಂದ ಮಾಡಿಕೊಂಡಿರುವ ಅತ್ಯಂತ ಅಪವಿತ್ರ ಮೈತ್ರಿಯಾಗಿದೆ. ಕೇವಲ ತನ್ನು ಕುಟುಂಬದ ಸ್ವಾರ್ಥಕ್ಕಾಗಿ ಜಿಲ್ಲೆಯ ಹಾಗೂ ದೇಶ ಜನರ ಹಿತಾಸಕ್ತಿಯನ್ನು ಬಲಿಕೊಟ್ಟು ಅಪಾಯಕಾರಿ ಬಿಜೆಪಿ ಜೊತೆಗೆ ಜೆಡಿಎಸ್ ಕೈಜೋಡಿಸಿದೆ. ಇದು ಜೆಡಿಎಸ್ ಹಾಸನ ಜಿಲ್ಲೆಯ ಮತ್ತು ಕರ್ನಾಟಕದ ಜನರಿಗೆ ಮಾಡಿದ ಬಹುದೊಡ್ಡ ದ್ರೋಹವಾಗಿದೆ ಎಂದರು. ಭ್ರಷ್ಟ ಬಿಜೆಪಿ
ಇಷ್ಟು ವರ್ಷಗಳ ಕಾಲ ಹಾಸನ ಜಿಲ್ಲೆಯ ಜನತೆ ಜೆಡಿಎಸ್‌ಗೆ ನೀಡಿದ ಅಭೂತಪೂರ್ವ ಬೆಂಬಲ ಮತ್ತು ಅಧಿಕಾರವನ್ನು ಸಂಪೂರ್ಣವಾಗಿ ಒಂದೇ ಕುಟುಂಬ ತನ್ನ ಹಿಡಿತದಲ್ಲಿಟ್ಟುಕೊಂಡಿದೆ. ದೇಶದ ಪ್ರದಾನಿ ಸ್ಥಾನ, ರಾಜ್ಯದ ಮುಖ್ಯಮಂತ್ರಿ ಸ್ಥಾನ, ಪ್ರಭಾವಿ ಮಂತ್ರಿ ಸ್ಥಾನ, ಸಂಸತ್ ಸದಸ್ಯ, ಪರಿಷತ್ ಸದಸ್ಯ, ಜಿಲ್ಲಾ ಪಂಚಾಯತಿ, ಹಾಸನ ಡೈರಿ ಹೀಗೆ ಹತ್ತು ಹಲವಾರು ಅಧಿಕಾರ ಹಾಗೂ ಸವಲತ್ತುಗಳನ್ನು ಅನುಭವಿಸಿರುವ ದೇವೇಗೌಡರು, ಕುಮಾರಸ್ವಾಮಿ ಮತ್ತು ರೇವಣ್ಣ ಅವರ ಕುಟುಂಬ ಮಾಡಿರುವುದೇನು? ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಲೂಟಿ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಜಾತೀವಾದ ಮತ್ತು ಪಾಳೇಗಾರಿ ದೌರ್ಜನ್ಯ ಅಷ್ಟೇ… ಕರ್ನಾಟಕದ ಜನತೆ ಹಾಗೂ ಹಾಸನ ಜಿಲ್ಲೆಯ ಜನತೆಗೆ ಸದಾ ಋಣಿಯಾಗಬೇಕಿದ್ದ ದೇವೇಗೌಡರ ಕುಟುಂಬ ಬೆಜೆಪಿ ಎಂಬ ದುಷ್ಟಕೂಟಕ್ಕೆ ಬೆಂಬಲ ನೀಡುವ ಮುಖಾಂತರ ತಾನೂ ಕೂಡ ಬೆಜೆಪಿಗಿಂತಲೂ ಜಿಲ್ಲೆಯ ಹಾಗೂ ರಾಜ್ಯದ ಜನರಿಗೆ ಅತ್ಯಂತ ಅಪಾಯಕಾರಿ ಎನ್ನುವುದನ್ನು ಸಾಬೀತು ಪಡಿದಿದೆ. ಈ ಹಿನ್ನೆಲೆಯಲ್ಲಿ… ಭ್ರಷ್ಡ ಬೆಜೆಪಿ ಮತ್ತು ಸ್ವಾರ್ಥಿ ಜೆಡಿಸ್ ಅಪವಿತ್ರ ಮೈತ್ರಿಯನ್ನು ತಿರಸ್ಕರಿಸುವಂತೆ ‘ಬೆಜೆಪಿ – ಜೆಡಿಸಿ ಸೋಲಿಸಿ; ಹಾಸನ ಉಳಿಸಿ’ ಎಂಬ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಭ್ರಷ್ಟ ಬಿಜೆಪಿ
ಆದ್ದರಿಂದ ಹಾಸನ ಲೋಕಸಭಾ ಕ್ಷೇತ್ರದ ಭ್ರಷ್ಟ ಬೆಜೆಪಿ ಮತ್ತು ಸ್ವಾರ್ಥಿ ಜೆಡಿಎಸ್ ಮೈತ್ರಿಯ ಅಭ್ಯರ್ಥಿಯಾದ ಪ್ರಜ್ವಲ್ ರೇವಣ್ಣ ಅವರನ್ನು ಸೋಲಿಸಲು ಈ ಕ್ಷೇತ್ರದ ಮತದಾರರು ‘ಇಂಡಿಯಾ’ ಕೂಟದ ಅಭ್ಯರ್ಥಿಯಾದ ಶ್ರೀ ಶ್ರೇಯಸ್ ಪಟೇಲ್ ಅವರನ್ನು ಬೆಂಬಲಿಸಿ ಮತ ಚಲಾಯಿಸಬೇಕೆಂದು ಈ ಮೂಲಕ ಕರೆ ನೀಡಿದೆ ಎಂದರು. ಭ್ರಷ್ಟ ಬಿಜೆಪಿ
ಈ ವೇಳೆ ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಂ.ಸಿ ಡೋಂಗ್ರೆ, ಎದ್ದೇಳು ಕರ್ನಾಟದ ಇರ್ಷಾದ್ ಹಮದ್, ನಿವೃತ್ತ LIC ಆಧಿಕಾರಿ, ರಾಜು ಗೊರೂರು, DYFI ನ ಪೃಥ್ವಿ ಹಾಜರಿದ್ದರು.
ಇದನ್ನು ನೋಡಿ : ಸಾಂವಿಧಾನಿಕ ವ್ಯವಸ್ಥೆಯನ್ನು ದುರ್ಬಲಗೊಳಿಸಿದ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಬೇಕು- ಎಂ ಎ ಬೇಬಿ