BJP ಸೋಲಿಸಿ ಭಾರತ ಉಳಿಸಿ; NEP ತಿರಸ್ಕರಿಸಿ ಶಿಕ್ಷಣ ಉಳಿಸಿ

ವಿಜಯನಗರ : ಇಂದು ಭಾರತದಲ್ಲಿ ಪ್ರಜಾಪ್ರಭುತ್ವ ರಕ್ಷಣೆ ಮಾಡುವ ಸಂದರ್ಭದಲ್ಲಿ ನಾವಿದ್ದೇವೆ. ಇದಕ್ಕೆ ಬಹುಮುಖ್ಯ ಕಾರಣವೇ ಸಾರ್ವತ್ರಿಕ ಲೋಕಸಭಾ ಚುನಾವಣೆ ಆದ್ದರಿಂದ ಇಂದು ಎಸ್ಎಫ್ಐ ಸಂಘಟನೆ ಕೋಮುವಾದಿ ಬಿಜೆಪಿಯನ್ನು ಸೋಲಿಸುವುದು ಬಹುಮುಖ್ಯ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ರಾಷ್ಟ್ರೀಯ ಉಪಾಧ್ಯಕ್ಷ ನಿತೀಶ್ ನಾರಾಯಣ ಹೇಳಿದರು. BJP

ಅವರು ವಿಜಯನಗರ ಜಿಲ್ಲೆಯಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಸಿ ಮಾತನಾಡಿದ್ದು, ಜಗತ್ತಿನ ಅನೇಕ ದೇಶಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಆದರೆ ಭಾರತದಲ್ಲಿ ಶಿಕ್ಷಣ ವಿರೋಧಿ ಸರ್ಕಾರವಿದೆ. ಉದಾಹರಣೆಗೆ ಜಪಾನ್ 10 ಲಕ್ಷ ಜನರಿಗೆ 5 ಸಾವಿರ ಸಂಶೋಧಕರಿದ್ದಾರೆ. ನಮ್ಮಲ್ಲಿ 10 ಜನರಿಗೆ ಕೇವಲ 5 ಜನ ಮಾತ್ರ ಸಂಶೋಧಕರ ಇದ್ದರೆ. ಬಿಜೆಪಿ ಸರ್ಕಾರ ಬಂದಾಗಿನಿಂದ ಕಳೆದ ಐದು ವರ್ಷದಲ್ಲಿ ಸುಮಾರು ಪ್ರತಿ ತಿಂಗಳು ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೈಕ್ಷಣಿಕ ಕಾರಣಕ್ಕಾಗಿ ದೇಶದಲ್ಲಿ ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾರ್ವಜನಿಕ ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗಿಕರಣ ಮಾಡಿದ್ದಲ್ಲದೆ, ಜೆಎನ್‌ಯುನಲ್ಲಿ ಖಾಸಗಿ ಮ್ಯಾನೇಜ್ಮೆಂಟ್ ಕೋರ್ಸ್ ತೆರೆಯಲಾಗಿದೆ. ಇದನ್ನು ಪ್ರಶ್ನೆಸುವ ವಿದ್ಯಾರ್ಥಿಗಳಿಗೆ ನೋಟಿಸ್ ನೀಡಿ ಅವರ ಅಧ್ಯಯನ ಮೊಟುಕುಗೊಳಿಸಿ ಇಲ್ಲವೇ ನಿರಂತರ ಕಿರುಕುಳ ನೀಡಿ ಸುಸೈಡ್ ಮಾಡಿಕೊಳ್ಳುವ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಆದ್ದರಿಂದ ರಿಜೆಕ್ಟ್ ಎನ್ಇಪಿ, ರಿಜೆಕ್ಟ್ ಬಿ.ಜೆ.ಪಿ ಎಂದು ದೇಶದಾದ್ಯಂತ SFI ಸಂಘಟನೆ ಹೋರಾಟಕ್ಕೆ ಕರೆ ಕೊಟ್ಟಿದೆ. ಈ ಹೋರಾಟ ನಿರಂತರವಾಗಿದೆ. ಎನ್ಇಪಿ ಈ ದೇಶದ ಸೌಹಾರ್ದತೆಗೆ, ಜಾತ್ಯತೀತತೆಗೆ ಧಕ್ಕೆ ತರುತ್ತಿದೆ. ಮಾನವಿಯ ಮೌಲ್ಯಗಳ ಮೇಲೆ ನಂಬಿಕೆ ಇಲ್ಲ. ದಲಿತ ಮತ್ತು ಮೇಲ್ವರ್ಗದ ವಿದ್ಯಾರ್ಥಿಗಳ ನಡುವೆ ಅಂತರ ಸೃಷ್ಟಿ ಮಾಡಿ ಕೋಮು ವಿಷಬೀಜ ಬಿತ್ತುತ್ತಿದೆ.

ಇದನ್ನು ಓದಿ : ಪೆನ್‌ಡ್ರೈವ್‌ ಲೈಂಗಿಕ ದೌರ್ಜನ್ಯ,ಪ್ರಕರಣದ ಆರೋಪಿಗಳ ಬಂಧನ ಸೇರಿದಂತೆ ಸಂತ್ರಸ್ತ ಮಹಿಳೆಯರ ಗೌಪ್ಯತೆ ಕಾಪಾಡುವಂತೆ ಸಿಪಿಐಎಂ ಹಾಗೂ ವಿವಿಧ ಸಂಘಟನೆಯ ಆಗ್ರಹ

ದಲಿತ ಸಂಶೋಧನ ವಿದ್ಯಾರ್ಥಿ ಮುಂಬಯಿ ವಿಶ್ವವಿದ್ಯಾಲಯದ ರಾಮದಾಸ್, ಕರ್ನಾಟಕ ದೊಡ್ಡಬಸವರಾಜ ಕರ್ನಾಟಕ, ಗುಲ್ಬರ್ಗ ವಿಶ್ವವಿದ್ಯಾಲಯ ದಲ್ಲಿ ಸರ್ಕಾರ, ಆಡಳಿತದ ವಿರುದ್ಧ ಪ್ರಶ್ನೆ ಮಾಡಿದಕ್ಕೆ ಪಿಎಚ್‌ಡಿ ರದ್ದು ಮಾಡುವಂತೆ ನೋಟಿಸ್ ನೀಡಿತ್ತು. ಇದು ಸಂಪೂರ್ಣ ಅಪ್ರಜಾಸತ್ತಾತ್ಮಕವಾಗಿ ವರ್ತಿಸುತ್ತಿದೆ. ಸಂವಿಧಾನ ವಿರೋಧಿಯಾಗಿದೆ. ಅದಕ್ಕಾಗಿ SFI ಬಿಜೆಪಿಯನ್ನು ರಿಜಕ್ಟ್ ಮಾಡುತ್ತಿದೆ ಎಂದು ನಿತೀಶ್ ನಾರಾಯಣ ಅವರು ಹೇಳಿದರು.

ಸಂಘಟನೆಯ ರಾಜ್ಯಾಧ್ಯಕ್ಷರ ಅಮರೇಶ ಕಡಗದ ಮಾತನಾಡಿ, BJP ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿ ವಿರೋಧಿ ನೀತಿಯನ್ನು ಬಲವಂತವಾಗಿ ಒತ್ತಡ ಹಾಕಿ ಜಾರಿ ಮಾಡುತ್ತದೆ. ಇದನ್ನು‌ SFI ಸಂಘಟನೆ ವಿರೋಧ ಮಾಡುತ್ತ ಬಂದಿದೆ. BJP ಸರ್ಕಾರ ಕಳೆದ ಹತ್ತು ವರ್ಷದಲ್ಲಿ GDP ಯ ಕೇವಲ 0.45 ಮಾತ್ರ ಅನುದಾನ ಕೊಟ್ಟಿದೆ. ಖಾಸಗಿ ಹಾಗೂ ವಿದೇಶಿ ವಿಶ್ವವಿದ್ಯಾಲಯಗಳಿಗೆ ಮಾತ್ರ ಆದ್ಯತೆ ಕೊಡುತ್ತದೆ, ಸರಕಾರಿ ವಿಶ್ವವಿದ್ಯಾಲಯಗಳನ್ನು ಕಡೆಗಣಿಸಿದೆ.

ಮೂಲಭೂತ ಸೌಲಭ್ಯಗಳನ್ನು ಕೊಡುತ್ತಿಲ್ಲ. PHD ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಕೊಡುತ್ತಿಲ್ಲ. ಮತ್ತೆ ಖಾಸಗಿ ಕೋಟದಲ್ಲಿ ವೃತ್ತಿಪರ ಕೋರ್ಸ್ ಅಭ್ಯಾಸ ಮಾಡುತ್ತಿರುವ ದಲಿತ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಮತ್ತು ವಿದ್ಯಾರ್ಥಿ ವೇತನ ನಿರಾಕರಣೆ ಮಾಡಿದೆ ಈ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಕೊಡುತ್ತ ಶಿಕ್ಷಣವನ್ನು ಸಂಪೂರ್ಣವಾಗಿ ಕಾರ್ಪೋರೆಟ್ ಮಾಡುತ್ತಿದೆ. ಕರ್ನಾಟಕದಲ್ಲಿ ಈ ಹಿಂದೆ ಪಠ್ಯ ಪುಸ್ತಕ ಪರಿಷ್ಕರಣ ಮಾಡಿದಾಗ ಸಂವಿಧಾನ ಶಿಲ್ಪಿ ಡಾ.ಬಿ.ಆರ್, ಅಂಬೇಡ್ಕರ್, ಬಸವಣ್ಣ, ಕನಕದಾಸ, ನಾರಾಯಣ ಇನ್ನಿತರ ಮಹಾನಾಯಕರಿಗೆ ಅಪಮಾನ ಮಾಡಿದನ್ನು ನಾವು ಕರ್ನಾಟಕದಲ್ಲಿ ನೋಡಿದ್ದವೆ. ಅದೇ ರೀತಿಯಲ್ಲಿ ಕೇಂದ್ರ ಸರಕಾರ ತನ್ನ ಹಿಡನ್ ಅಜೆಂಡಾವನ್ನು ಜಾರಿ ಮಾಡಲು ಅನೇಕ ಪಠ್ಯ ಪುಸ್ತಕಗಳ ಬದಲಾವಣೆಗೆ ಮುಂದಾಗಿದೆ. ಸಂವಿಧಾನ ವಿರೋಧಿ ಕೆಲಸ ಮಾಡುವ BJP ಪಕ್ಷವನ್ನು ಸೋಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಸಮಿತಿ‌ ಸದಸ್ಯ ಶಿವರಡ್ಡಿ, ಜಿಲ್ಲಾ ಅಧ್ಯಕ್ಷ ಬಸವರಾಜ ಗುಳ್ಳದಾಳ,ಹೊಸಪೇಟೆ ತಾಲ್ಲೂಕು ಉಪಾಧ್ಯಕ್ಷ ಪವನಕುಮಾರ, ಇತರರು ಇದ್ದರು.

ಇದನ್ನು ನೋಡಿ : ಕೊಪ್ಪಳ ಲೋಕಸಭೆ : ಬಿಜೆಪಿಯ ಬಂಡಾಯ ಕಾಂಗ್ರೆಸ್‌ಗೆ ಲಾಭ, ಕರಡಿಯ ಕುಣಿತದ ಮೇಲೆ ಫಲಿತಾಂಶ Janashakthi Media

Donate Janashakthi Media

Leave a Reply

Your email address will not be published. Required fields are marked *