ಭಾಲ್ಕಿ: ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಪ್ರತಿಮೆಯನ್ನು ಮಂಗಳವಾರ ರಾತ್ರಿ ಕಿಡಿಗೇಡಿಗಳು ವಿರೂಪಗೊಳಿಸಿರುವುದರಿಂದ ಬುಧವಾರ ಬೆಳಿಗ್ಗೆ ಎರಡು ಗಂಟೆ ಭಾಲ್ಕಿ-ಹುಮನಾಬಾದ್ ಹೆದ್ದಾರಿ ಸಂಚಾರ ಸ್ಥಗಿತವಾಗಿತ್ತೆಂದು ವರದಿಯಾಗಿದೆ.
ಬಸವಣ್ಣನವರ ಪ್ರತಿಮೆಯ ಕೈ ಮುರಿದು, ಧ್ಜಜ ಕಂಬ ಕಿತ್ತೆಸೆಯಲು ಕಿಡಿಗೇಡಿಗಳು ಪ್ರಯತ್ನಿಸಿದ್ದಾರೆ. ಬೆಳಿಗ್ಗೆ ವಿರೂಪಗೊಂಡ ಬಸವಣ್ಣನವರ ಪ್ರತಿಮೆಯನ್ನು ಗಮನಿಸಿದ ಗ್ರಾಮಸ್ಥರು, ಸಾರ್ವಜನಿಕರು ರಸ್ತೆಗಿಳಿದು ಬೆಂಕಿ ಹಚ್ಚಿ, ವಾಹನ ತಡೆದು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಕೂಡಿಟ್ಟು ಮಗನ ವಿದ್ಯಾಭ್ಯಾಸಕ್ಕೆ ಲ್ಯಾಪ್ ಟಾಪ್ ಕೊಡಿಸಿದ ತಾಯಿ
ಸ್ಥಳಕ್ಕೆ ಧಾವಿಸಿದ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರನ್ನು ಪತ್ತೆ ಹಚ್ಚಲು ಗಂಭೀರವಾದ ಪ್ರಯತ್ನ ಮಾಡುತ್ತೇವೆಂದ ಮೇಲೆ ಪ್ರತಿಭಟನೆಕಾರರು ವಾಹನ ಸಂಚಾರಕ್ಕೆ ಮತ್ತೆ ಅವಕಾಶ ನೀಡಿದರೆಂದು ತಿಳಿದು ಬಂದಿದೆ. ಪ್ರತಿಮೆಗೆ ಈಗ ಬಟ್ಟೆ ಮುಚ್ಚಲಾಗಿದೆ.
ಬಸವಕಲ್ಯಾಣ, ಹುಮನಾಬಾದ್ ಕಡೆ ತೆರಳುವ ವಾಹನಗಳು ದಾಡಗಿ ಕ್ರಾಸ್ ಬಳಿ ಭಾರೀ ಪ್ರಮಾಣದಲ್ಲಿ ಜಮಾಯಿಸಿದ್ದರಿಂದ ಸಂಚಾರ ಸಂಪೂರ್ಣ ಎರಡು ಗಂಟೆ ಸ್ಥಗಿತಗೊಂಡಿತ್ತು.
ಇದನ್ನೂ ನೋಡಿ: ಸವಿತಕ್ಕ ಜೊತೆ ಸಂಕ್ರಾಂತಿ ಸುಗ್ಗಿ ಹಾಡು, ಒಂದಿಷ್ಟು ಮಾತುJanashakthi Media