ನವದೆಹಲಿ: ‘ಉದ್ಯೋಗಿಗಳು ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು’ ಎಂಬ ಹೇಳಿಕೆ ನೀಡಿರುವ ಎಲ್ ಆ್ಯಂಡ್ ಟಿ ಸಂಸ್ಥೆಯ ಮುಖ್ಯಸ್ಥರಾದ ಉದ್ಯಮಿ ಎಸ್.ಎನ್. ಸುಬ್ರಮಣ್ಯನ್ ರ ಬಗ್ಗೆ ದೀಪಿಕಾ ಪ್ರತಿಕ್ರಿಯಿಸಿದ್ದಾರೆ.
‘ಭಾನುವಾರವೂ ನಿಮ್ಮಿಂದ ಕೆಲಸ ಮಾಡಿಸಲು ಸಾಧ್ಯವಾಗುತ್ತಿಲ್ಲದಿರುವುದಕ್ಕೆ ನನಗೆ ವಿಷಾದ ಇದೆ. ನಾನು ಭಾನುವಾರವೂ ಕೆಲಸ ಮಾಡುತ್ತೇನೆ. ನೀವೂ ಕೂಡ ಭಾನುವಾರ ಕೆಲಸ ಮಾಡಿದರೆ ನನಗೆ ಹೆಚ್ಚು ಖುಷಿಯಾಗುತ್ತದೆ. ಪ್ರತಿ ಉದ್ಯೋಗಿ ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು’ ಎಂದು ಉದ್ಯಾಮಿ ಸುಬ್ರಮಣ್ಯನ್ ಅಭಿಪ್ರಾಯಪಟ್ಟಿದ್ದಾರೆ. ಇದನ್ನು ದೀಪಿಕಾ ಟೀಕಿಸಿದ್ದಾರೆ. ‘ಅವರು ಪರಿಸ್ಥಿತಿಯನ್ನು ಮತ್ತಷ್ಟು ಕೆಟ್ಟದಾಗಿ ಮಾಡಿದ್ದಾರೆ’ ಎಂದಿದ್ದಾರೆ.
ಇದನ್ನೂ ಓದಿ: ಕಲಬುರಗಿ| ಜನವರಿ 17 ರಿಂದ 19 ರಾಜ್ಯ ಮಟ್ಟದ ಸೌಹಾರ್ದ ಸಮಾವೇಶ ಚಲೋ
ವಾರಕ್ಕೆ 90 ಗಂಟೆ ಕೆಲಸ ಮಾಡುವುದು ಎಂದರೆ ಅದು ಸುಲಭದ ಮಾತಲ್ಲ. ಈ ರೀತಿ ಮಾಡಿದಾಗ ವ್ಯಕ್ತಿಯ ಆರೋಗ್ಯದ ಮೇಲೆ, ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆ. ಆ ರೀತಿ ಆಗಬಾರದು ಎಂದು ಅನೇಕರು ಅಭಿಪ್ರಾಯಕೊಟ್ಟಿದ್ದಾರೆ. ಈ ವಿಚಾರದಲ್ಲಿ ದೀಪಿಕಾ ಧ್ವನಿ ಎತ್ತಿದ್ದು ಖುಷಿ ಆಗಿದೆ.
ಈ ಮೊದಲು ಕೂಡ ಸುಬ್ರಮಣ್ಯನ್ ಅವರು ‘ಭಾನುವಾರವೂ ಉದ್ಯೋಗಿಗಳು ಕೆಲಸ ಮಾಡಬೇಕು’ ಎಂದಿದ್ದರು. ಆ ಸಂದರ್ಭದಲ್ಲೂ ದೀಪಿಕಾ ಪ್ರತಿಕ್ರಿಯಿಸಿದ್ದರು. ‘ಇಷ್ಟು ದೊಡ್ಡ ಪೋಸ್ಟ್ನಲ್ಲಿ ಇರುವವರು ಈ ರೀತಿಯ ಹೇಳಿಕೆ ನೀಡುವುದನ್ನು ನೋಡಿದರೆ ಶಾಕ್ ಆಗುತ್ತದೆ’ ಎಂದು ಹೇಳಿದ್ದರು. ಭಾನುವಾರವೂ ಕೆಲಸ ಮಾಡಬೇಕು ಎಂದಿದ್ದಲ್ಲದೆ ಸುಬ್ರಮಣ್ಯಮ್ ಅವರು, ‘ಉದ್ಯೋಗಿಗಳು ಮನೆಯಲ್ಲಿದ್ದುಕೊಂಡು ಏನು ಮಾಡುತ್ತಾರೆ’ ಎಂದು ಪ್ರಶ್ನೆ ಮಾಡಿದ್ದರು.
ದೀಪಿಕಾ ಪಡುಕೋಣೆ ಅವರು ಈ ವಿಚಾರವಾಗಿ ಧ್ವನಿ ಎತ್ತಿದ್ದು ಅನೇಕರಿಗೆ ಖುಷಿ ನೀಡಿದೆ. ಬಾಲಿವುಡ್ನ ಎಲ್ಲರೂ ಈ ರೀತಿಯ ವಿಚಾರ ಬಂದಾಗ ಮುಂದೆ ಬಂದು ಕೆಲಸ ಮಾಡಬೇಕು ಎಂದು ಹೇಳಿದ್ದರು.
ಇದನ್ನೂ ನೋಡಿ: ದೇಶದ ಮೊದಲ ಮುಸ್ಲಿಂ ಶಿಕ್ಷಕಿ | ಫಾತಿಮಾ ಶೇಖ್ : ಶಿಕ್ಷಣಕ್ಕೆ ಅವರ ಕೊಡುಗೆಗಳೇನು? ವಿಶ್ಲೇಷಣೆ : ಕೆ. ಪರೀಫಾ