ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳ ಸಮವಸ್ತ್ರಕ್ಕೆ ಕಳಪೆ ಬಟ್ಟೆ ಪೂರೈಕೆ ಮತ್ತು ಅದಕ್ಕೆ 117 ಕೋಟಿ ಹಣ ಪಾವತಿಸಿರುವ ಪ್ರಕರಣದ ಬಗ್ಗೆ ಇಲಾಖಾ ತನಿಖೆ ನಡೆಸಲು ಗುರುವಾರ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ ಅವರು ಈ ಕುರಿತು ವಿವರ ನೀಡಿ, ಇದೊಂದು ಗಂಭೀರ ಅವ್ಯವಹಾರವಾಗಿದ್ದು ತನಿಖೆ ಅಗತ್ಯ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು ಎಂದರು.
ಇದನ್ನೂ ಓದಿ:ಶಾಲಾ ಮಕ್ಕಳ ಸಮವಸ್ತ್ರ ಹಂಚಿಕೆಯಲ್ಲಿ ಗೋಲ್‌ಮಾಲ್ – ಕೆಹೆಚ್ಡಿಸಿ ಹಿಂದಿನ ವ್ಯವಸ್ಥಾಪಕ ಸೇರಿ ಮೂವರ ಮೇಲೆ ಎಫ್ಐಆರ್
2022-23 ಮತ್ತು 2023-24 ಸಾಲಿಗೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಶಿಕ್ಷಣ ಇಲಾಖೆಯಿಂದ ಮಕ್ಕಳಿಗೆ ಸಮವಸ್ತ್ರ ಸಿದ್ದಪಡಿಸಲು ಬಟ್ಟೆಯನ್ನು ಪೂರೈಕೆ ಮಾಡಿತ್ತು. ಆದರೆ ಪೂರೈಕೆ ಮಾಡಿದ ಬಟ್ಟೆ ಶೇ 90 ರಷ್ಟು ಕಳಪೆ ಗುಣಮಟ್ಟದಾಗಿತ್ತು. ಆದರೆ ಈ ಬಟ್ಟೆ ಪೂರೈಕೆಗೆ ಪೂರ್ಣ ಪ್ರಮಾಣದಲ್ಲಿ ಹಣ ಪಾವತಿಸಲಾಗಿತ್ತು. ಕಳಪೆ ಬಟ್ಟೆ ಪೂರೈಕೆಗೆ ಯಾರು ಕಾರಣರು ಎಂಬುದನ್ನು ಪತ್ತೆ ಮಾಡಿ ಅಂತಹವರ ವಿರುದ್ಧ ಸಿವಿಲ್ ಮತ್ತು ಕ್ರಿಮಿಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಪಾಟೀಲ ತಿಳಿಸಿದರು. ಸಮವಸ್ತ್ರ