ಬೆಂಗಳೂರು:ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಇನ್ನೂ ಮುಂದೆ ಶಾಲೆಗಳಲ್ಲಿ ವಾರಕ್ಕೆ 2 ಮೊಟ್ಟೆ ನೀಡಲು ನಿರ್ಧರಿಸಲಾಗಿದೆ ಎಂದು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ,ಮಾತನಾಡಿದ ಅವರು,ಶಾಲೆಗಳಲ್ಲಿ ಮಕ್ಕಳಿಗೆ ವಾರಕ್ಕೆ 2 ಮೊಟ್ಟೆ ಕೊಡುವ ಬಗ್ಗೆ ಮುಖ್ಯಮಂತ್ರಿಗೆ ಮನವಿ ಮಾಡಿಕೊಂಡಿದ್ದೆ. ಸಿಎಂ ಒಪ್ಪಿಗೆ ನೀಡಿ ವಾರಕ್ಕೆ 2 ಮೊಟ್ಟೆ ನೀಡಲು ಅನುಮೋದಿಸಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.
ವಾರ್ಷಿಕವಾಗಿ 84 ದಿನ ಮಕ್ಕಳಿಗೆ ಕೊಡಲಾಗುತ್ತದೆ.ಮೊಟ್ಟೆ ತಿನ್ನದೇ ಇರುವವರು ಚಿಕ್ಕಿ ಬಾಳೆ ಹಣ್ಣು ಕೊಡುವ ವ್ಯವಸ್ಥೆ ಮಾಡಲಾಗಿದೆ. ಎಸ್‌ಡಿಎಮ್‌ಸಿ ಅವರಿಗೆ ಎಲ್ಲಾ ಅಧಿಕಾರ ಕೊಟ್ಟಿದ್ದೇವೆ.ಶ್ಯೂ ವಿಚಾರ ಕೂಡ ಅವರಿಗೆ ಅಧಿಕಾರ ಕೊಟ್ಟಿದ್ದೇವೆ. 280 ಕೋಟಿ ಈ ಮೊಟ್ಟೆ ಕೊಡಲು ಸದ್ಯ ಯೋಜನೆ ಮಾಡಿಕೊಂಡಿದ್ದೇವೆ. ಕ್ವಾಲಿಟಿ ಚೆನ್ನಾಗಿಲ್ಲ ಅಂದರೇ ಎಸ್ ಡಿಎಮ್‌ಸಿ ಅವರೇ ಜವಾಬ್ದಾರಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧುಬಂಗಾರಪ್ಪ ತಿಳಿಸಿದರು.
ಇದನ್ನೂಓದಿ:ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಶಿಕ್ಷಣ ಸಚಿವರಿಗೆ ಮನವಿ
ಹಿಂದಿನ ಸರ್ಕಾರ ವಾರದಲ್ಲಿ ಒಂದೇ ಮೊಟ್ಟೆ ಕೊಡ್ತಿತ್ತು. ಮೊಟ್ಟೆ ,ಚಿಕ್ಕಿ ಬಾಳೆಹಣ್ಣು ಕೊಡುವುದರಿಂದ ಮಾರ್ಜಿನಲ್ ಹೆಲ್ಪ್ ಆಗಿದೆ. ಅಷ್ಟೇ ಶಿಕ್ಷಣ ವ್ಯವಸ್ಥೆಯಲ್ಲಿ ಇರುವ ಸಮಸ್ಯೆ ಮಾನ್ಯ ಮುಖ್ಯಮಂತ್ರಿಗಳಿಗೆ ಗೊತ್ತು. ಹೀಗಾಗಿ ನಾನು ಅವರ ಬಳಿ ಮನವಿ ಮಾಡಿದೆ ಎಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ನಾನು ಅಧಿಕಾರಕ್ಕೆ ಬಂದಾಗ ಸೊರಬ ಕ್ಷೇತ್ರದಲ್ಲಿ 52 ಶಾಲೆಯಲ್ಲಿ ಶಿಕ್ಷಕರೇ ಇರಲಿಲ್ಲ. ಎಷ್ಟೋ ಪೋಷಕರು ಖಾಸಗಿ ಶಾಲೆಗೆ ಮಕ್ಕಳನ್ನ ಸೇರಿಸುತ್ತಾರೆ. ನಾವು ಮುಂದಿನ ಎಂಟು ತಿಂಗಳ ಒಳಗೆ ಕೆಲವೊಂದಿಷ್ಟು ಪ್ಲಾನ್ ಮಾಡಿಕೊಂಡಿದ್ದೇವೆ. ಈ ವ್ಯವಸ್ಥೆ ಯಾವ ತರ ನಡೆಯುತ್ತೆ ಎನ್ನುವುದನ್ನು ತಿಳಿದು ಕೊಳ್ಳುತ್ತಿದ್ದೇನೆ ಎಂದು ಹೇಳಿದರು.