ಡಿಸೆಂಬರ್ 2-3ರಂದು ಕಟ್ಟಡ ಕಾರ್ಮಿಕರ ರಾಷ್ಟ್ರೀಯ ಮುಷ್ಕರ

ಹೊಸಪೇಟೆ: 1996ರ ಕಟ್ಟಡ ಕಾರ್ಮಿಕ ಕಾನೂನು ಹಾಗೂ ಸೆಸ್ ಕಾನೂನುಗಳೆರಡನ್ನು ಹೊಸ ನೂತನ‌‌ ಕಾರ್ಮಿಕ‌ ಸಂಹಿತೆ ವ್ಯಾಪ್ತಿಯಿಂದ ಹೊರಗಿಡಬೇಕು ಮತ್ತು ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಬೆಲೆಗಳ‌ ಮೇಲಿನ ಸರಕು ಸೇವಾ ತೆರಿಗೆಯನ್ನು ಕಡಿತಗೊಳಿಸಬೇಕು ಕಟ್ಟಡ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ಅನುದಾನ ನೀಡಬೇಕು ಹಾಗೂ ನಿರ್ಮಾಣ ವಲಯದ  ಕಾರ್ಮಿಕರ ಬೇಡಿಕೆಗಳ ಡಿಸೆಂಬರ್ 2 ಹಾಗೂ 3 ರಂದು ಎರಡು ದಿನಗಳ ಕಟ್ಟಡ ಕಾರ್ಮಿಕರ ಮುಷ್ಕರ ನಡೆಸಲು ಕರೆ ನೀಡಲಾಗಿದೆ ಎಂದು‌ ಕರ್ನಾಟಕ ರಾಜ್ಯ ಕಟ್ಟಡ ‌ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ (ಸಿಐಟಿಯು) ‌ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ ಹೇಳಿದರು.

ಇದನ್ನು ಓದಿ: ಅಸುರಕ್ಷವಾಗಿದೆ ಭವ್ಯ ಸೌಧಗಳ ಕಟ್ಟುವವರ ಬದುಕು: ಕೆ.ಮಹಾಂತೇಶ ವಿಷಾಧ

ಹೊಸಪೇಟೆ ಸರ್ಕಾರಿ ನೌಕರರ ಸಭಾಂಗಣದಲ್ಲಿ ಇಂದು ಆಯೋಜನೆಗೊಳಿಸಲಾಗಿದ್ದ ಬಳ್ಳಾರಿ ಜಿಲ್ಲಾ ಕಟ್ಟಡ ನಿರ್ಮಾಣ ವಲಯದ ಕಾರ್ಯಗಾರದಲ್ಲಿ‌ ಪಾಲ್ಗೊಂಡು ಮಾತನಾಡಿದ ಅವರು ದೇಶದಲ್ಲಿ ಪ್ರಸ್ತುತ 10 ಕೋಟಿಗಿಂತ ಅಧಿಕ ಕಾರ್ಮಿಕರು ನಿರ್ಮಾಣ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ ಇವರಿಗೆ ಸಾಮಾಜಿಕ ಭದ್ರತೆ ನೀಡುವ‌ ಸಲುವಾಗಿಯೇ 1996 ರಲ್ಲಿ ಎರಡು‌ ಕಾನೂನು ರಚನೆಯಾಗಿವೆ ಅದರಡಿ ಮುವತ್ತು ರಾಜ್ಯಗಳಲ್ಲಿ ಕಲ್ಯಾಣ ಮಂಡಲಿ ರಚನೆಯಾಗಿ ಸುಮಾರು 70 ಸಾವಿರ ಕೋಟಿ ಸೆಸ್ ಹಣ ಸಂಗ್ರಹವಾಗಿ ಹತ್ತಾರು ಸೌಲಭ್ಯಗಳನ್ನು ಕಾರ್ಮಿಕರು ಪಡೆಯುತ್ತಿದ್ದಾರೆ. ಹೀಗಿದ್ದೂ ಇನ್ನೂ ಕೋಟ್ಯಾಂತರ ಕಾರ್ಮಿಕರು ಸಾಮಾಜಿಕ ಭದ್ರತೆಯಿಂದ ವಂಚಿತಾಗಿದ್ದಾರೆ.

ಇಂತಹ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರ ಈ ಎರಡು ಕಾನೂನುಗಳನ್ನು ಪರಿಣಾಮವಾಗಿ ಜಾರಿಗೊಳಿಸುವ ಬದಲು ಅವುಗಳನ್ನು ಹೊಸ ಸಂಹಿತೆಗಳಲ್ಲಿ ವಿಲೀನಗೊಳಿಸಿದೆ. ಇದರಿಂದ ಸೆಸ್‌ಸಂಗ್ರಹ  ಕಲ್ಯಾಣ ಮಂಡಳಿ ಕೆಲಸ ಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈಗಾಗಲೇ ನಿರ್ಮಾಣ ವಲಯ ನೋಟು ಅಮಾನ್ಯೀಕರಣ, ಜಿ.ಎಸ್.ಟಿ ಹಾಗೂ ಕರೋನಾ ಬಿಕ್ಕಟ್ಟುಗಳಿಂದ ತತ್ತರಿಸಿದೆ  ಹೀಗಿರುವಾಗ ಕೇಂದ್ರ ಸರ್ಕಾರ ಇದ್ದ ಅಲ್ಪ ಸ್ವಲ್ಪ ಸಾಮಾಜಿಕ ಭದ್ರತೆಗಳನ್ನು ಬಲಪಡಿಸುವ ಬದಲು  ನಾಶಪಡಿಸಲು ಹೊರಟಿದೆ ಇದರ ವಿರುದ್ದ ಇಡೀ ದೇಶದ ನಿರ್ಮಾಣ ವಲಯದ ಕಾರ್ಮಿಕರು ಡಿಸೆಂಬರ್ 2-3. ರಂದು ಈ ಎರಡು ದಿನಗಳ ದೇಶವ್ಯಾಪಿ ಮುಷ್ಕರ ನಡೆಸಲಿದ್ದಾರೆ. ಇದನ್ನು ರಾಜ್ಯದಲ್ಲಿ ಯಶಸ್ವಿಗೊಳಿಸಲು ಸಿದ್ದತೆಗಳು ನಡೆಯುತ್ತಿವೆ ಎಂದು ಹೇಳಿದರು.

ಕಾರ್ಯಾಗಾರದಲ್ಲಿ  ಬಳ್ಳಾರಿ ಜಿಲ್ಲಾ ಫೆಡರೇಶನ್ ಅಧ್ಯಕ್ಷರಾದ ಯಲ್ಲಾಲಿಂಗ, ಹೊಸಪೇಟೆ ತಾಲೂಕು ಅಧ್ಯಕ್ಷರಾದ ಗೋಪಾಲ್ ಕಾರ್ಯದರ್ಶಿ ರಾಮಾಂಜೀ, ಕೂಡ್ಲಿಗಿ ತಾಲೂಕು ಕಾರ್ಯದರ್ಶಿ ರಾಘವೇಂದ್ರ, ಕಂಪ್ಲಿ ತಾಲೂಕು ಅಧ್ಯಕ್ಷರಾದ ನಾಗರಾಜ್,‌ಕಾರ್ಯದರ್ಶಿ ಹೊನ್ನೂರು ಸಾಬ್, ರಾಜಾಭಕ್ಷೀ, ಸಂಡೂರು ತಾಲೂಕಿನ ಸಿದ್ದಪ್ಪ ಮತ್ತು ಬಾಬಯ್ಯ ಸೇರಿ ಪ್ರಮುಖ ಮುಖಂಡರು ,ಕಾರ್ಮಿಕರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *