ಉತ್ತರ ಪ್ರದೇಶ| ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆ; ಇಂಟರ್ನೆಟ್ ಸ್ಥಗಿತ

ಸಂಭಲ್:  ಉತ್ತರ ಪ್ರದೇಶದ ಸಂಭಲ್‌ನ ಮಸೀದಿಯೊಂದರ ಸಮೀಕ್ಷೆಗೆ ಸಂಬಂಧಿಸಿದಂತೆ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿದ್ದು ಹಿಂಸಾಚಾರ ಹೆಚ್ಚಾಗುತ್ತಿದ್ದಂತೆ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಜೊತೆಗೆ ಡಿಸೆಂಬರ್ 1 ರವರೆಗೆ ಹೊರಗಿನವರು ನಗರದೊಳಗೆ ಪವೇಶಿಸದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಉತ್ತರ

25ಕ್ಕೂ ಹೆಚ್ಚು ಪೊಲೀಸರು ಸೇರಿದಂತೆ 36 ಮಂದಿ ಹಿಂಸಾಚಾರದಲ್ಲಿ ಗಾಯಗೊಂಡಿದ್ದಾರೆ. ಘರ್ಷಣೆಯ ಹಿನ್ನೆಲೆ ಜಿಲ್ಲಾಡಳಿತ ವಿಷೇಧಾಜ್ಞೆ ಜಾರಿಗೊಳಿಸಿದ್ದು ಅದರಂತೆ ಪ್ರದೇಶ ಸುತ್ತ ಇಂಟರ್ನೆಟ್ ಸ್ವಗಿತಗೊಳಿಸಲಾಗಿದ್ದು ಜೊತೆಗೆ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಾಲೆಗಳನ್ನು ಬಂದ್‌ ಮಾಡಲಾಗಿದೆ. ಜನರು ಗುಂಪು ಗುಂಖಾಗಿ ಸೇರದಂತೆ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ದಿಗ್ವಿಜಯವಾಗಿ ಕಾಣುತ್ತಿದೆ – ಸಿದ್ದರಾಮಯ್ಯ

ಆದರೆ ಈ ಎಲ್ಲದರ ನಡುವೆ ಸಮೀಕ್ಷೆ ವೇಳೆ ಹಿಂಸಾಚಾರ ಭುಗಿಲೆಳಲು ಕಾರಣ ಏನು ಎಂಬ ಪ್ರಶ್ನೆ ಏಳತೊಡಗಿದೆ.  ಪ್ರಾಥಮಿಕ ಮಾಹಿತಿ ಪ್ರಕಾರ ಮಸೀದಿ ಸಮೀಕ್ಷೆ ವೇಳೆ ಅಲ್ಲಿ ನೆರೆದಿದ್ದ ಜನರ ಗುಂಪು ಘೋಷಣೆಗಳನ್ನು ಕೂಗಲು ಆರಂಭಿಸಿದ್ದು ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದೇ ಘರ್ಷಣೆ ನಡೆಯಲು ಕಾರಣ ಎನ್ನಲಾಗಿದೆ. ಸದ್ಯ ಸಂಭಲ್ ಪ್ರದೇಶದಲ್ಲಿ ಹೆಚ್ಚಿನ ಭದ್ರತಾ ಸಿಬಂದಿಗಳನ್ನು ನೇಮಿಸಲಾಗಿದೆ.

ಇದನ್ನೂ ನೋಡಿ: ಒಂದು ದೇಶ, ಒಂದು ಚುನಾವಣೆ | ಸಂವಿಧಾನದ ಮೂಲಭೂತರಚನೆಗೆ ಗಂಡಾಂತರ – ಕೆ.ಎನ್. ಉಮೇಶ್ Janashakthi Media

Donate Janashakthi Media

Leave a Reply

Your email address will not be published. Required fields are marked *