ಮ್ಯಾನ್ಮಾರ್​ ಭೂಕಂಪ: ಮೃತರ ಸಂಖ್ಯೆ 1,700ಕ್ಕೆ ಏರಿಕೆ

ಮ್ಯಾನ್ಮಾರ್: ​ದೇಶದಲ್ಲಿ ಸಂಭವಿಸಿರುವ ಭೂಕಂಪ ಜನರನ್ನು ಅಕ್ಷರಶಃ ಆತಂಕಕ್ಕೆ ದೂಡಿದೆ. ಬೃಹತ್​ ಕಟ್ಟಡಗಳು, ರಸ್ತೆ, ಸೇತುವೆಗಳ ಕುಸಿತ, ಸಾವುಗಳ ನೋವು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ನಿನ್ನೆಯವರೆಗೂ ಮ್ಯಾನ್ಮಾರ್​ನಲ್ಲಿ ಸಂಭವಿಸಿದ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 1600ಕ್ಕೆ ತಲುಪಿತ್ತು. ಮೃತ

ಆದರೆ, ಇಂದು ಸಹ ಸಾವಿನ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದು, ಮೃತರ ಸಂಖ್ಯೆ ಈಗ 1,700ಕ್ಕೆ ತಲುಪಿದೆ.

ಇದನ್ನೂ ಓದಿ: ಏ.2ರಿಂದ ರಾಜ್ಯಾದ್ಯಂತ ಭಾರೀ ಮಳೆ ಸಾಧ್ಯತೆ

ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ಅನ್ನು ಅಪ್ಪಳಿಸಿದ ಭಾರಿ ಭೂಕಂಪದಿಂದ ಭಾನುವಾರ (ಮಾ.30) ಎರಡೂ ದೇಶಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಮ್ಯಾನ್ಮಾರ್‌ನಲ್ಲಿ, ಇದುವರೆಗೆ ಸುಮಾರು 1,700 ಜನರು ಸಾವನ್ನಪ್ಪಿದ್ದಾರೆ ಎಂದು ಇತ್ತೀಚಿನ ವರದಿ ದೃಢಪಡಿಸಿದೆ. ಸುಮಾರು 3,400ಕ್ಕೂ ಅಧಿಕ ಜನರು ಗಾಯಗೊಂಡಿದ್ದರೆ, 300ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ಆಡಳಿತಾರೂಢ ಜುಂಟಾ ತಿಳಿಸಿದೆ.

ಅದೇ ರೀತಿ, ಬ್ಯಾಂಕಾಕ್‌ನಲ್ಲಿಯೂ ಸಾವನ್ನಪ್ಪಿದವರ ಸಂಖ್ಯೆ 17ಕ್ಕೆ ಏರಿದೆ ಎಂದು ನಗರದ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಬ್ಯಾಂಕಾಕ್ ಮೆಟ್ರೋಪಾಲಿಟನ್ ಪ್ರಾಧಿಕಾರದ ಪ್ರಕಾರ, 32 ಜನರು ಗಾಯಗೊಂಡಿದ್ದಾರೆ ಮತ್ತು 82 ಜನರು ಇನ್ನೂ ಸುಳಿವಿಗೆ ಸಿಕ್ಕಿಲ್ಲ. ಭೂಕಂಪಕ್ಕೆ ತತ್ತರಿಸಿರುವ ಥೈಲಾಂಡ್​ ಮತ್ತು ಮ್ಯಾನ್ಮಾರ್​ ದೇಶಗಳಿಗೆ ಭಾರತ, ಚೀನಾ, ಅಮೆರಿಕ ಸೇರಿದಂತೆ ಇತರೆ ದೊಡ್ಡ ದೇಶಗಳು ಸಹಾಯಹಸ್ತ ನೀಡಲು ಮುಂದಾಗಿವೆ.

ಇದನ್ನೂ ನೋಡಿ: ದುಡಿಮೆಗೆ ತಕ್ಕ ಬೆಲೆ ಕೊಡದೆ ಹೋದರೆ ಸ್ಕೀಂ ನೌಕರರ ಸಂಕಷ್ಟ ಇನ್ನಷ್ಟು ಹೆಚ್ಚಲಿದೆ – ಮೀನಾಕ್ಷಿ ಸುಂದರಂ Janashakthi

Donate Janashakthi Media

Leave a Reply

Your email address will not be published. Required fields are marked *