ಪೇಶಾವರ: ಪಾಕಿಸ್ತಾನದಲ್ಲಿ ಮಸೀದಿವೊಂದರ ಮೇಲೆ ಉಗ್ರರು ನಡೆಸಿದ ದಾಳಿಯಿಂದಾಗಿ ಮೃತಪಟ್ಟವರ ಸಂಖ್ಯೆ 83ಕ್ಕೆರಿದೆ ಎಂದು ವರದಿಯಾಗಿದ್ದು, 150ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದು ಗಂಭೀರ ಸ್ವರೂಪದ ದಾಳಿಗೆ ಈಡಾಗಿದ್ದಾರೆ. ಇದರಿಂದ ಸಾವು-ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ಒಂದೆಡೆ ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಪಾಕಿಸ್ತಾನದಲ್ಲಿ ಇದೀಗ ಪೇಶಾವರ ಮಸೀದಿ ಸ್ಫೋಟಗೊಂಡು ಸಾವು ನೋವುಗಳಿಗೆ ಕಾರಣವಾಗಿರುವುದು ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ. ನೆನ್ನೆ(ಜನವರಿ 30) ನಡೆದ ಆತ್ಮಾಹುತಿ ದಾಳಿಯಿಂದ ಸಾವನ್ನಪ್ಪಿದವರ ಹೆಚ್ಚಾಗುತ್ತಲೇ ಇದೆ.
ಇದನ್ನು ಓದಿ: ಜಮ್ಮು – ಕಾಶ್ಮೀರದಲ್ಲಿ ನಿಲ್ಲದ ಉಗ್ರರ ದಾಳಿ; ಉತ್ತರ ಪ್ರದೇಶ ಮೂಲದ ಇಬ್ಬರು ಕಾರ್ಮಿಕರು ಬಲಿ
ಸ್ಪೋಟದಿಂದ ಮಸೀದಿಯ ಬಹುತೇಕ ಪ್ರಮಾಣದಲ್ಲಿ ನಾಶಗೊಂಡಿದ್ದು, ಅವಶೇಷದಡಿ ಸಿಲುಕಿಕೊಂಡಿರುವ ಶವಗಳನ್ನು ಹೊರತೆಗೆಯುವ ಕಾರ್ಯ ಇನ್ನೂ ಮುಂದುವರೆದಿದೆ. ಮಸೀದಿಯ ಚಾವಣಿಯ ಕೊನೆ ಭಾಗ ತೆಗೆದುಹಾಕಿದ್ದೇವೆ. ಹೀಗಾಗಿ ಶವಗಳನ್ನು ಹೊರತೆಗೆಯಲು ಸುಲಭವಾಗಿದೆ. ಆದರೆ, ಅವಶೇಷಗಳಡಿ ಸಿಲುಕಿಕೊಂಡಿದ್ದ ಯಾರೊಬ್ಬರೂ ಬದುಕುಳಿದಿರುವ ಸಾಧ್ಯತೆಗಳಿಲ್ಲ ಎಂದು ರಕ್ಷಣಾ ಸಂಸ್ಥೆ ವಕ್ತಾರ ಬಿಲಾಲ್ ಆಹ್ಮದ್ ತಿಳಿಸಿದ್ದಾರೆ.
ಸ್ಪೋಟದ ಸಂದರ್ಭದಲ್ಲಿ ಪೇಶಾವರದ ಮಸೀದಿಯೊಳಗೆ ಇಮಾಮ್ ಪ್ರಾರ್ಥನೆ ವೇಳೆ ಸುಮಾರು 400 ಆರಾಧಕರು ಹಾಜರಿದ್ದ ವೇಳೆ ಆತ್ಮಾಹುತಿ ಬಾಂಬ್ ಹೊತ್ತ ವ್ಯಕ್ತಿಯೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಸ್ಪೋಟದ ತೀವ್ರತೆಗೆ ಸ್ಥಳದಲ್ಲೇ 17 ಜನ ಸಾವನ್ನಪ್ಪಿದ್ದಾರೆ. ಗಂಭೀರ ಗಾಯಗೊಂಡಿದ್ದ ಇತರರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ 66 ಮಂದಿ ಆಸ್ಪತ್ರೆಯಲ್ಲಿ ಹಾಗೂ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಇದನ್ನು ಓದಿ: ಕೊಲೆ ಮಾಡುವಾಗ ಉಗ್ರರು ಜಾತಿ-ಧರ್ಮ ನೋಡಲ್ಲ
ದಟ್ಟ ಕಪ್ಪು ಹೊಗೆ ಕಾಣಿಸುತ್ತಿದ್ದಂತೆ ನನ್ನ ಜೀವ ಉಳಿಸಿಕೊಳ್ಳಲು ನಾನು ಓಡಿ ಹೋದೆ ಎಂದು ಬದುಕುಳಿದಿರುವ 47 ವರ್ಷದ ಪೆಪೊಲೀಸ್ ಶಾಹಿದ್ ಆಲಿ ತಿಳಿಸಿದ್ದಾರೆ.
ಪ್ರಧಾನಿ ಶೆಹಬಾಜ್ ಷರೀಫ್ ಘಟನೆಯನ್ನು ಖಂಡಿಸಿದ್ದು, ಪಾಕಿಸ್ತಾನವನ್ನು ರಕ್ಷಿಸುವ ಕರ್ತವ್ಯವನ್ನು ನಿರ್ವಹಿಸುವವರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ಭಯವನ್ನು ಸೃಷ್ಟಿಸಲು ಇಂತಹ ಕೃತ್ಯಗಳನ್ನು ನಡೆಸಲಾಗುತ್ತಿದೆ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ