33 ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ದಂಪತಿಗೆ ಮರಣ ದಂಡನೆ!

ನವದೆಹಲಿ: ದಂಪತಿಗೆ ಮೂರು ವರ್ಷದ ಮಕ್ಕಳು ಸೇರಿದಂತೆ 33 ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮರಣ ದಂಡನೆಯನ್ನು ಉತ್ತರ ಪ್ರದೇಶದ ಬಂಡಾ ಪೋಕ್ಸೋ ಕಾಯ್ದೆ ವಿಶೇಷ ನ್ಯಾಯಾಲಯ ಈ ಮಹತ್ವದ ತೀರ್ಪು ಪ್ರಕಟಿಸಿದೆ.

ಆರೋಪಿ ದಂಪತಿ ರಾಮಭಾವನ್ ಮತ್ತು ದುರ್ಗಾವತಿ ಅವರಿಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ. ಅಸಹಜ ಅಪರಾಧಗಳು, ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿರುವುದು, ಮಕ್ಕಳ ಅಶ್ಲೀಲತೆ ಮತ್ತು ಅಪರಾಧ ಪಿತೂರಿ ಸೇರಿದಂತೆ ವಿವಿಧ ಸೆಕ್ಷನ್ಗಳಡಿ ಶಿಕ್ಷೆ ವಿಧಿಸಲಾಗಿದೆ.

ಇದನ್ನೂ ಓದಿ: ಫೆ. 21ರಿಂದ ಷರತ್ತುಬದ್ಧವಾಗಿ ಸಫಾರಿ ಪುನರಾರಂಭ: ಈಶ್ವರ್ ಖಂಡ್ರೆ

ಪ್ರತಿ ಸಂತ್ರಸ್ತ ಮಕ್ಕಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ. ಅಂತೆಯೇ ಆರೋಪಿಗಳ ಮನೆಯಿಂದ ವಶಪಡಿಸಿಕೊಂಡ ಹಣವನ್ನು ಎಲ್ಲ ಸಂತ್ರಸ್ತ ಮಕ್ಕಳಿಗೆ ಸಮಾನವಾಗಿ ಹಂಚುವಂತೆ ಆದೇಶಿಸಲಾಗಿದೆ.

ಕೇಂದ್ರೀಯ ತನಿಖಾ ಸಂಸ್ಥೆ 2020ರಲ್ಲಿ ಆರೋಪಿಗಳ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿತ್ತು. ಆರೋಪಿಗಳು ಲೈಂಗಿಕ ದೌರ್ಜನ್ಯ ಎಸಗಿದ್ದನ್ನು ಸಿಬಿಐ ತನಿಖೆಯ ವೇಳೆ ಪತ್ತೆ ಮಾಡಿತ್ತು. ಅಪರಾಧಗಳು ಬರ್ಬರವಾಗಿದ್ದವು. ಕೆಲ ಸಂತ್ರಸ್ತರ ಗುಪ್ತಾಂಗಗಳಿಗೆ ಸೇರಿದಂತೆ ಗಾಯಗಳಾಗಿದ್ದವು. ಕೆಲ ಮಕ್ಕಳು ವರ್ಷಗಟ್ಟಲೆ ಆಸ್ಪತ್ರೆಗಳಲ್ಲಿ ಇದ್ದ ನಿದರ್ಶನಗಳನ್ನು ಸಿಬಿಐ ಪತ್ತೆ ಮಾಡಿತ್ತು.

ಕೆಲವರ ಕಣ್ಣುಗಳಿಗೆ ಗಾಯಗಳಾಗಿದ್ದರೆ, ಮತ್ತೆ ಕೆಲವರು ಮಾನಸಿಕ ಆಘಾತದಿಂದ ಬಳಲುತ್ತಿದ್ದರು. ಉತ್ತರ ಪ್ರದೇಶದ ಬಂಡಾ ಮತ್ತು ಚಿತ್ರಕೂಟ ಪ್ರದೇಶಗಳಲ್ಲಿ ಆರೋಪಿಗಳು 2010ರಿಂದ 2020ರ ವರೆಗೆ ಈ ಅಪರಾಧಗಳನ್ನು ಎಸಗಿದ್ದರು. ರಾಮಭವನ ನೀರಾವರಿ ಇಲಾಖೆಯಲ್ಲಿ ಕಿರಿಯ ಎಂಜಿನಿಯರ್ ಆಗಿದ್ದ. ನಗದು ಹಾಗೂ ಉಡುಗೊರೆ ನೀಡುವುದು, ಆನ್ಲೈನ್ ಗೇಮ್ ಹೀಗೆ ವಿವಿಧ ಆಮಿಷ ಒಡ್ಡಿ ಮಕ್ಕಳನ್ನು ಸೆಳೆಯುತ್ತಿದ್ದ ಎಂದು ಆಪಾದಿಸಲಾಗಿತ್ತು.

ಇದನ್ನೂ ನೋಡಿ: “ಯು.ಎಸ್ ಸಾಮ್ರಾಜ್ಯಶಾಹಿ : ಭಾರತ ಜನತೆಯ ಶತ್ರು” | ಹಿನ್ನೆಲೆ ಧ್ವನಿ : ಗುರುರಾಜ ದೇಸಾಯಿ Janashakthi Media

Donate Janashakthi Media

Leave a Reply

Your email address will not be published. Required fields are marked *