ಮಂಗಳೂರು: ನಗರದ ಪಂಜಿಮೊಗರು ನಿವಾಸಿ ಹಾಮದ್ ಬಿಜೈ ರೋಹನ್ ಕಾರ್ಪೊರೇಶನ್ ಕಟ್ಟಡದ ಬಳಿಯಿಂದ ಲಾಲ್‌ಬಾಗ್ ಕಡೆಗೆ ನಡೆದುಕೊಂಡು ಬರುವ ವೇಳೆ ರಸ್ತೆ ದಾಟಲು ಪ್ರಯತ್ನಿಸುತ್ತಿದ್ದಾಗ ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಾ ಬಂದ ಬೈಕೊಂದು ಹಾಮದ್ ಡಿಕ್ಕಿ ಹೊಡೆದ ವೇಗಕ್ಕೆ ತನ್ನ ಬಲಗಾಲಿಗೆ ಮತ್ತು ತಲೆಗೆ ಆಳವಾದ ಗಾಯವಾಗಿದೆ ಎಂದು ಅಧ್ಯಕ್ಷ ಬಿ.ಕೆ. ಇಮ್ಮಿಯಾಜ್ ತಿಳಿಸಿದ್ದಾರೆ.
ಈ ಘಟನೆ ದಿನಾಂಕ 21-12-2024ರಂದು ನಡೆದಿದೆ. ಆ ವೇಳೆ ಸ್ಥಳೀಯರು ಕೂಡಲೇ ಗಾಯಗೊಳಗಾದ ಹಾಮದ್ ಎಂಬವರನ್ನು ತಕ್ಷಣ ಕದ್ರಿ ಪ್ರದೇಶದ ತೇಜಸ್ವಿನಿ ಆಸ್ಪತ್ರೆಗೆ ಸುಮಾರು ಸಂಜೆ 4.40ಕ್ಕೆ ದಾಖಲಿಸಿದ್ದಾರೆ. ಮಂಗಳೂರು
ತೀವ್ರವಾದ ಗಾಯಗೊಳಗಾಗಿ ಆಸ್ಪತ್ರೆಗೆ ಧಾವಿಸಿರುವಂತಹ ಸಂತ್ರಸ್ತ ಗಾಯಾಳುವನ್ನು ಸರಿಯಾಗಿ ಪರೀಕ್ಷಿಸದೆ ಕೇವಲ ಮುರಿತಕ್ಕೊಳಗಾಗಿರುವ ಬಲಗಾಲಿನ ಮೂಳೆಯನ್ನು ಶಸ್ತ್ರಚಿಕಿತ್ಸೆ ನಡೆಸಿ ಸರಿಪಡಿಸಲು ತಗಲುವ ವೆಚ್ಚದ ಕುರಿತು ಚೌಕಾಸಿ ನಡೆಸುತ್ತಿದ್ದರು. ಮಂಗಳೂರು
ಇದನ್ನೂ ಓದಿ: ನವದೆಹಲಿ| ದಟ್ಟವಾದ ಮಂಜು ಆವರಿಕೆ; 100 ಕ್ಕೂ ಹೆಚ್ಚು ವಿಮಾನಗಳ ಸಂಚಾರ ವಿಳಂಬ
ಅದಲ್ಲದೆ ತೇಜಸ್ವಿನಿ ಆಸ್ಪತ್ರೆಯ ವೈದ್ಯರು ಸಂತ್ರಸ್ತ ಕುಟುಂಬಸ್ಥರಿಂದ ಚಿಕಿತ್ಸಾ ವೆಚ್ಚ ಭರಿಸುವ ಹಣಕ್ಕಾಗಿ ಪೀಡಿಸುತ್ತಿದ್ದರೇ ಹೊರತು ಗಾಯಾಳುವನ್ನು ಸರಿಯಾಗಿ ಪರೀಕ್ಷೆ ನಡೆಸದೆ ಒಳರೋಗಿಯಾಗಿ ದಾಖಲಿಸಲು ಕೂಡಾ ಹಿಂಜರಿಯುತ್ತಿದ್ದರು ಎಂದು ಹೇಳಿದ್ದಾರೆ.
ಆ ದಿನ ಸಂಜೆ 4.40ಕ್ಕೆ ಆಸ್ಪತ್ರೆಗೆ ಧಾವಿಸಿರುವ ಸಂತ್ರಸ್ತ ಗಾಯಾಳುವನ್ನು ರಾತ್ರಿ 8.30ರ ವರೆಗೂ ಕನಿಷ್ಠ ಒಳರೋಗಿಯಾಗಿಯೂ ದಾಖಲಿಸದೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದರು.
ಸುಮಾರು ರಾತ್ರಿ 8 ಗಂಟೆಯ ನಂತರ ಗಾಯಾಳು ಹಾಮದ್ ಎಂಬವರ ಆರೋಗ್ಯದಲ್ಲಿ ಏರುಪೇರಾಗಲು ಪ್ರಾರಂಭಿಸಿದಾಗ ಆ ಮಾಹಿತಿಯನ್ನು ಸ್ವತಹ ಕುಟುಂಬಸ್ಥರೇ ವೈದ್ಯರ ಬಳಿ ತೋಡಿಕೊಂಡು ಒತ್ತಡ ಹೇರಿದಾಗ ನಂತರ ತಲೆಯ ಸ್ಕ್ಯಾನಿಂಗ್ ಹಾಗೂ ಹೆಚ್ಚಿನ ಪರೀಕ್ಷೆಗೆ ಒಳಪಡಿಸಲು ಮುಂದಾಗಿದ್ದಾರೆಯೇ ಹೊರತು ಅಲ್ಲಿಯವರೆಗೆ ಯಾವುದೇ ತುರ್ತು ಚಿಕಿತ್ಸೆ ನೀಡುದೆ ಬೇಜವಾಬ್ದಾರಿಯನ್ನು ವಹಿಸಿದ್ದಾರೆ.
ಮಾತ್ರವಲ್ಲದೇ ಅಪಘಾತಗೊಳಗಾದ ಗಾಯಾಳು ಆಸ್ಪತ್ರೆ ಸೇರಿ ರಾತ್ರಿ 8.00 ಗಂಟೆಯವರೆಗೂ ಕನಿಷ್ಟ ಪೊಲೀಸರಿಗೆ ಪ್ರಥಮ ಮಾಹಿತಿಯನ್ನು ಕೂಡಾ ಒದಗಿಸದೆ ಕಾನೂನು ನಿಯಮವನ್ನು ಪಾಲಿಸದೆ ಕರ್ತವ್ಯ ಲೋಪವನ್ನು ಎಸಗಿರುದ್ದಾರೆ.
ಗಾಯಾಳು ಹಾಮದ್ ಎಂಬವರನ್ನು ತೇಜಸ್ವಿನಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ನಡೆಸಿಕೊಂಡ ರೀತಿ, ತಪ್ಪಾದ ಚಿಕಿತ್ಸಾ ಕ್ರಮ ಹಾಗೂ ವೈದ್ಯಕೀಯ ನಿರ್ಲಕ್ಷ್ಯತನದಿಂದಾಗಿ ಅಮಾಯಕ ಜೀವ ಪ್ರಾಣ ಕಳೆದುಕೊಳ್ಳುವಂತಾಗಿದೆ. ಹಾಮದ್ ಕೂಲಿ ಕೆಲಸ ಮಾಡಿ ಬದುಕುತ್ತಿದ್ದು, ಇವರನ್ನು ಅವಲಂಭಿಸಿ ಜೀವಿಸುವ 4 ಮಕ್ಕಳು ಮತ್ತು ಮಡದಿ ಬೀದಿಗೆ ಬೀಳುವಂತಾಗಿದೆ ಎಂದರು.
ಈ ಎಲ್ಲಾ ಹಿನ್ನಲೆಯಲ್ಲಿ ಅಪಘಾತಕ್ಕೊಳಗಾದ ಹಾಮದ್ ಎಂಬವರಿಗೆ ಸರಿಯಾದ ಸಮಯದಲ್ಲಿ ತುರ್ತು ಚಿಕಿತ್ಸೆ ನೀಡದೇ ಪ್ರಾಣ ಕಳೆದುಕೊಳ್ಳುವಂತೆ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯತನ ವಹಿಸಿದ ತೇಜಸ್ವಿನಿ ಆಸ್ಪತ್ರೆ ಮತ್ತು ಅಲ್ಲಿನ ತಪ್ಪಿತಸ್ಥ ವೈದ್ಯರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಹಾಗೂ ಪ್ರಕರಣ ಸಮಗ್ರ ತನಿಖೆಗೊಳಪಡಿಸಲು ಮತ್ತು ಸಂತ್ರಸ್ತ ಕುಟುಂಬಕ್ಕೆ ಗರಿಷ್ಠ ಪ್ರಮಾಣದ ಪರಿಹಾರ ಒದಗಿಸಿಕೊಡಬೇಕೆಂದು ಹೇಳಿದ್ದಾರೆ.
ಇದನ್ನೂ ನೋಡಿ: ಬೀದಿಬದಿ ವ್ಯಾಪಾರಿಗಳ ಐಕ್ಯತೆಯನ್ನು ಮುರಿದು ಹೋರಾಟವನ್ನು ಹತ್ತಿಕ್ಕಲು ಶಾಸಕ ವೇದವ್ಯಾಸ ಕಾಮತ್ ಕುಮ್ಮಕ್ಕು