ಸಂವಾದ, ಹಾಡು, ಕವಿತೆ ವಾಚನ, ಪುಸ್ತಕಗಳ ಬಿಡುಗಡೆ, ಅಪರೂಪದ ಛಾಯ ಚಿತ್ರ ಪದರ್ಶನ
ಬೆಂಗಳೂರು: ಅಂತರರಾಷ್ಟ್ರೀಯ ಸೌಹಾರ್ದತೆ-ಮಾನವೀಯ ಸಹಾಯಕ್ಕೆ ಹೆಸರಾದ, ಕ್ಯೂಬಾದ ಕ್ರಾಂತಿಯ ನಾಯಕ ಫಿಡೆಲ್ ಕ್ಯಾಸ್ಟ್ರೋ ಅವರ ನೂರನೇ ಜನ್ಮ (ಆಗಸ್ಟ್ 13, 1926) ವರ್ಷಾಚರಣೆ (ಆಗಸ್ಟ್-2025-ಆಗಸ್ಟ್-2026) ಆರಂಭದ ಕಾರ್ಯಕ್ರಮವಾಗಿ ಆಗಸ್ಟ್ 12ರಂದು ‘ಪ್ರೀತಿಯ ಫಿಡೆಲ್… 100 ರ ನೆನಪು ಒಂದು ಪ್ರೀತಿಯ ಸಮಾರಂಭ’ವು ಅಮೆರಿಕದ ಕ್ರೂರ ಅಮಾನವೀಯ ದಿಗ್ಬಂಧನದಿಂದ ಸಂಕಷ್ಟಕ್ಕೆ ಸಿಲುಕಿರುವ ಕ್ಯೂಬಾದ ನೆರವಿಗೆ ನಿಲ್ಲುವ ಮಹತ್ವದ ಘೋಷಣೆಯೊಂದಿಗೆ ಹಾಗು ಕ್ಯೂಬಾಕ್ಕೆ ಭೇಟಿ ನೀಡಿ ಅಲ್ಲಿನ ಜನರ ಬದುಕನ್ನು ಕಂಡಿರುವ ಕವಿ-ಸಾಹಿತಿ-ಚಿಂತಕರೊಂದಿಗೆ ಸಂವಾದ, ಹಾಡುಗಳು ಕವನ ವಾಚನ, ಚಿತ್ರ ರಚನೆ, ಛಾಯಾಚಿತ್ರ ಪ್ರದರ್ಶನ ಮುಂತಾದವುಗಳ ಮೂಲಕ ಕಾರ್ಯಕ್ರಮವ ಬಹಳ ವರ್ಣ ರಂಜಿತವಾಗಿ ನಡೆಯಿತು. ಪ್ರೀತಿಯ
ಕ್ಯೂಬಾ ಸೌಹಾರ್ದ ಸಮಿತಿಯ ಕೆ. ಮಹಾಂತೇಶ್ ಮಾತನಾಡಿ, ಅಮೆರಿಕದ ಕ್ರೂರ ದಿಗ್ಬಂಧನದಿಂದ ಕ್ಯೂಬಾದಲ್ಲಿ ಶೈಕ್ಷಣಿಕ ಸಾಮಾಗ್ರಿಗಳು, ಜನರಿಗೆ ಔಷಧಗಳು, ರೈತರಿಗೆ ವಿದ್ಯುತ್ ಉಪಕರಣಗಳು ಸಿಗದಂತೆ ಆಗಿದೆ. ಕ್ಯೂಬಾ ಜನರ ಪ್ರೀತಿಯ ನಾಯಕ ಫಿಡೆಲ್‌ರನ್ನು ಕೊಲ್ಲಲು ಅಮೆರಿಕ 637 ಬಾರಿ ಹತ್ಯಾ ಯತ್ನ ಮಾಡಿ ವಿಫಲವಾಗಿದೆ. ಎಂತಹ ಸಂಕಷ್ಟದಲ್ಲೂ ‘ಸಮಾಜವಾದ ಇಲ್ಲವೇ ಸಾವು’ ಎಂಬ ಘೋಷಣೆಗೆ ಬದ್ಧವಾದವರು ಕ್ಯೂಬಾದ ಜನರು ಎಂದರು. ಪ್ರೀತಿಯ
ಹಿರಿಯ ಪತ್ರಕರ್ತರು, ಕವಿಗಳೂ ಆದ ಜಿ.ಎನ್. ಮೋಹನ್ ಕ್ಯೂಬಾಕ್ಕೆ ಭೇಟಿ ನೀಡಿದ ಗಣ್ಯರೊಂದಿಗಿನ ಸಂವಾದವನ್ನು ನಡೆಸಿಕೊಟ್ಟರು. ‘ಒಂದು ಬೆಳಕಿನ ದೀಪ ಬೇಕು ಎಂದೆ, ಅವರು ಕ್ಯೂಬಾದ ಭೂಪಟ ನೀಡಿದರು’ ಎಂಬ ತಮ್ಮ ಕವಿತೆಯನ್ನು ಓದಿದ ಮೋಹನ್ ‘‘ಸೌಹಾರ್ದತೆ’ ಎನ್ನುವುದು ರಕ್ತದಾನದಂತೆ, ಅದಕ್ಕೆ ನಾಸ್ತಿಕ, ಆಸ್ತಿಕ, ಕಪ್ಪು ಜನ-ಬಿಳಿ ಜನರು, ಶ್ರೀಮಂತ-ಬಡವ ಎಂಬ ಬೇಧ ಇರುವುದಿಲ್ಲ’ ಎಂಬ ಫಿಡೆಲ್ಲರ ಮಾತನ್ನು ಉಲ್ಲೇಖಿಸಿದ ಮೋಹನ್, ತೊಂಭತ್ತರ ದಶಕದಲ್ಲಿ ಭಾರತದಿಂದ ರಾಜಕೀಯ ಪಕ್ಷಗಳು, ಜನಚಳುವಳಿಗಳು ಸೇರಿ 10,015 ಟನ್ ಗೋಧಿ ಕಳಿಸಿದ್ದನ್ನು ನೆನಪಿಸಿಕೊಂಡರು. ಪ್ರೀತಿಯ
ಇದನ್ನೂ ಓದಿ: ಪಶುವೈದ್ಯನ ಪಯಣ: ಪಶುವೈದ್ಯಕೀಯ ವೃತ್ತಿಯ ರೋಚಕ ಅನುಭವಗಳು
ಅಮೆರಿಕದ ಜನರಲ್ಲಿಯೂ ಸಾಕಷ್ಟು ಜನ ಕ್ಯೂಬಾ ಪ್ರೇಮಿಗಳಿದ್ದಾರೆ. ಕೆಟ್ಟ ಸಂಗೀತ ಸಾಧನಗಳನ್ನು ಅಮೆರಿಕದ ಕ್ಯೂಬಾ ಪ್ರೇಮಿಗಳೇ ಹೋಗಿ ರಿಪೇರಿ ಮಾಡಿ ಕೊಡುತ್ತಾರೆ. ಅವರು ವಾಪಸ್ ಬಂದಾಗ ಅಮೆರಿಕ ಸರಕಾರ ಅವರನ್ನು ಬಂಧಿಸುತ್ತದೆ. ಆದರೆ ಅವರನ್ನು ಬಿಡಿಸಲು ಸಾಕಷ್ಟು ವಕೀಲರು ಕಾದಿರುತ್ತಾರೆ ಎಂದು ವಿವರಿಸಿದರು. ಪ್ರೀತಿಯ
ಹೊಸತು ಪತ್ರಿಕೆಯ ಸಂಪಾದಕರಾದ ಸಿದ್ಧನಗೌಡ ಪಾಟೀಲ್ ಅವರು ಮಾತನಾಡಿ, 1996 ರಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿ-ಯುವಜನರ ಉತ್ಸವಕ್ಕೆಂದು ನಾವು ಕ್ಯೂಬಾಗೆ ಹೋಗುವ ಸಂದರ್ಭದಲ್ಲಿ ಅಮೆರಿಕದವರು ಕ್ಯೂಬಾದ ವಿಮಾನಗಳನ್ನು ಹೊಡೆದು ಪತನಗೊಳಿಸಿದ್ದಾರೆ ಎಂಬ ಸುದ್ದಿಗಳನ್ನು ಹರಡಿ ಜನರು ಬರದಂತೆ ಮಾಡಲಾಗಿದ್ದನ್ನು ನೆನಪಿಸಿಕೊಂಡರು.
ಇನ್ಸ್‌ಸ್ಟಿಟ್ಯೂಟ್ ಆಫ್ ಸ್ಪ್ಯಾನಿಷ್ ಸ್ಟಡೀಸ್‌ನ ನಿರ್ದೆಶಕರಾದ ರಂಜಿತ್ ಕುಮಾರ್ ಮಾತನಾಡಿ, ‘ಲ್ಯಾಟಿನ್ ಅಮೆರಿಕನ್ ಸ್ಕೂಲ್ ಆಫ್ ಮೆಡಿಸಿನ್’ನಲ್ಲಿ ಅಮೆರಿಕದ ವಿದ್ಯಾರ್ಥಿಗಳು ಸೇರಿದಂತೆ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದ್ದು ಜಗತ್ತಿಗೆ ಅಮೋಘ ಕೊಡುಗೆ ಎಂದರು. ಹಾಗೆಯೇ ಪ್ಯಾಲಿಸ್ಟೆöÊನ್ ಹಾಗೂ ವೆನೆಜುವೆಲಾಗಳ ಕ್ರಾಂತಿಕಾರಿ ಹೋರಾಟಗಳ ಸ್ಫೂರ್ತಿಯನ್ನು ರಕ್ಷಿಸಲು ಕ್ಯೂಬಾದ ಜನತೆ ಕೆಲಸ ಮಾಡುತ್ತಿದ್ದಾರೆ ಎಂದರು.
ಕೇಂದ್ರ ಸಾಹಿತ್ಯ ಅಕಾಡೆಮಿಯ ಮೂಲಕ ಸಾಹಿತ್ಯದ ವಿಚಾರವಾಗಿ ಕ್ಯೂಬಾಕ್ಕೆ ಹೋಗಿ ಬಂದ ಕವಿಯತ್ರಿ ಮಮತ ಸಾಗರ್ ತಮ್ಮ ನೆನಪುಗಳನ್ನು ಹಂಚಿಕೊAಡರು. ತನ್ನ ದೇಶವಾದ ಅಮೆರಿಕವನ್ನು ತೊರೆದು, ಕ್ಯೂಬಾವೇ ನನ್ನ ದೇಶ ಎಂದು ಅಲ್ಲಿಯೇ ಬಾಳಿದ ಜಗದ್ವಿಖ್ಯಾತ ಸಾಹಿತಿ ಹೆಮ್ಮಿಗ್ವೆಯ ಶಿಲ್ಪ, ಅವನು ಬಾಳಿ ಬದುಕಿದ ಸಮುದ್ರ ತೀರ ಎಲ್ಲವನ್ನು ಕಂಡ ಪುಳಕದ ಕ್ಷಣಗಳ ವಿವರಗಳು ಸಂವಾದದಲ್ಲಿ ಅನಾವರಣಗೊಂಡವು.

ಮಮತ ಸಾಗರ್ ಅವರು ಮಾತನಾಡಿ ಕಡುಕಷ್ಟಗಳ ಕಾಲದಲ್ಲಿಯೂ ಕಪ್ಪು ಜನರು ಬಿಳಿ ಜನರು ಎಂಬ ಬಣ್ಣಗಳ ಬೇಧವಿಲ್ಲದೇ, ಹಾಡು, ಚಿತ್ರಕಲೆ, ಶಿಲ್ಪಕಲೆ, ಸಾಹಿತ್ಯದ ಮೂಲಕ ತಮ್ಮ ಹೋರಾಟದ ಚೈತನ್ಯವನ್ನು ಉಳಿಸಿಕೊಂಡಿರುವ ಕ್ಯೂಬಾದ ಜನರು, ಯುವಜನರನ್ನು ಕಂಡು ಮಾತನಾಡಿದ್ದು ಸ್ಪೂರ್ತಿದಾಯಕ ಅನುಭವ ಎಂದರು. ಕ್ಯೂಬಾ ತನ್ನತನ ಉಳಿಸಿಕೊಳ್ಳಲು ಹೋರಾಡುತ್ತಿದೆ ಎಂದೂ ಮಮತ ಹೇಳಿದರು.
ಜನ ವೈದ್ಯರಾದ ಡಾ. ಅನಿಲ್ ಕುಮಾರ್ ಮಾತನಾಡಿ ಕ್ಯೂಬಾದಲ್ಲಿ ಎಲ್ಲರಿಗೂ ಉಚಿತ ಶಿಕ್ಷಣ ಇದೆ, ‘ನೆರೆ ಹೊರೆ’ ಶಾಲಾ ವ್ಯವಸ್ಥೆ ಇದೆ. ಪುಸ್ತಕಕ್ಕೂ ಹೊಲ-ಗದ್ದೆ-ಕಾರ್ಖಾನೆಗಳ ದುಡಿಮೆಗೂ ಶಿಕ್ಷಣಕ್ಕೂ ಸಂಬಂಧವಿರುವ ಉತ್ತಮ ಶೈಕ್ಷಣಿಕ ವ್ಯವಸ್ಥೆ ಅದು. ಗಣಿತದಲ್ಲಿ ಕೋನಗಳ ಬಗೆಗೆ ಕಲಿಸಲು – ಮರಗೆಲಸದ ಬಡಗಿಗಳೊಂದಿಗೆ ವಿದ್ಯಾರ್ಥಿಗಳಿಗೆ ಸಂಬಂಧ ಕಲ್ಪಿಸಲಾಗಿದೆ. ನಮ್ಮಲ್ಲಿ ಅಕ್ಬರ್ – ಅಶೋಕ ಎಂಬಂತೆ ವ್ಯಕ್ತಿಗಳಾಗಿ ಇತಿಹಾಸ ಕಲಿಸಲಾಗುತ್ತದೆ. ಆದರೆ ಕ್ಯೂಬಾದಲ್ಲಿ ಇತಿಹಾಸ ಎಂದರೆ ಶೋಷಣೆ ಯಾರು ಮಾಡುತ್ತಿದ್ದರು, ಯಾರು ಅದರ ವಿರುದ್ಧ ಹೋರಾಟ ಮಾಡುತ್ತಿದ್ದರು ಎಂದು ಅಲ್ಲಿ ಕಲಿಸಲಾಗುತ್ತಿದೆ. ಹೀಗಾಗಿ ಶೋಷಣಾಮುಕ್ತ ಸಮ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ‘ಏನೇ ಆಗಲಿ ನಮ್ಮ ಕ್ರಾಂತಿಯನ್ನು ಉಳಿಸಿಕೊಳ್ಳಬೇಕು.’ ಎಂಬ ಭಾವನೆ ಕ್ಯೂಬಾ ಜನರಲ್ಲಿದೆ ಎಂದರು.
ಹಿರಿಯ ಚಿತ್ರ ಕಲಾವಿದ ಬಿ.ಜಿ. ಗುಜ್ಜಾರಪ್ಪ ಅವರು ಫಿಡೆಲ್ ಕ್ಯಾಸ್ಟ್ರೋ ಅವರ ರೇಖಾ ಚಿತ್ರವನ್ನು ಸ್ಥಳದಲ್ಲೇ ಬಿಡಿಸಿದರು. ಡಾ. ಕೆ. ಪ್ರಕಾಶ್ ಅನುವಾದಿಸಿರುವ ಕ್ಯಾಸ್ಟ್ರೋ ಕತೆ, ಹಾಗೂ ಜಿ.ಎನ್. ಮೋಹನ್ ಅವರ ‘ನನ್ನೊಳಗಿನ ಹಾಡು ಕ್ಯೂಬಾ’ ಪುಸ್ತಕದ ತಮಿಳು ಹಾಗೂ ತೆಲುಗು ಅನುವಾದಗಳ ಬಿಡುಗಡೆ ಸಹ ನಡೆಯಿತು. ಈ ಸಂದರ್ಭದಲ್ಲಿ, ಫಿಡೆಲ್ ಕ್ಯಾಸ್ಟ್ರೋ ಅವರೊಂದಿಗೆ ಕ್ಯೂಬಾದ ನೆಲದಲ್ಲಿ ನಡೆದಾಡಿದ ಹಿರಿಮೆ ಹೊಂದಿರುವ ಇ.ಪಿ. ಮೆನನ್ ಫಿಡೆಲ್ ಕ್ಯಾಸ್ಟ್ರೋ ಕುರಿತ ಶುಭಾಶಯ ಪತ್ರಗಳ ಬಿಡುಗಡೆ ಮಾಡಿದರು.ಇನ್ಸ್‌ಸ್ಟಿಟ್ಯೂಟ್ ಆಫ್ ಸ್ಪ್ಯಾನಿಷ್ ಸ್ಟಡೀಸ್‌ನ ವಿದ್ಯಾರ್ಥಿಗಳು ‘ಗ್ವಂತನ ಮೇರಾ’ ಹಾಡನ್ನು, ಕೆ.ಎಸ್. ಲಕ್ಷ್ಮಿ ಕ್ರಾಂತಿಗೀತೆಯನ್ನು ಹಾಡಿದರು. ಡಾ. ವಸುಂಧರಾ ಭೂಪತಿ, ಎಚ್.ಆರ್. ಸುಜಾತಾ, ಕೆ. ಮಹಾಂತೇಶ್, ಬೇಲೂರು ರಘುನಂದನ್ ತಮ್ಮ ಕವನಗಳನ್ನು ಓದಿದರು.
ಸಮಾರೋಪ: ಮಹಿಳಾಪರ ಚಿಂತಕರಾದ ಕೆ.ಎಸ್. ವಿಮಲ ಮಾತನಾಡಿ ಕೊರೊನ ಸಮಯದಲ್ಲಿ ಕಷ್ಟಗಳ ನಡುವೆ ಜಗತ್ತಿನ 40 ದೇಶಗಳಿಗೆ ವೈದ್ಯರನ್ನು ದಾದಿಯರನ್ನು ಕಳಿಸಿ ಸಹಾಯ ಹಸ್ತ ಚಾಚಿದ ದೇಶ ಕ್ಯೂಬಾ, ಅಮೆರಿಕದ ದಿಗ್ಬಂಧನದಿAದ ‘ಸಿರಿಂಜ್’ ಇಲ್ಲದ ಪರಿಸ್ಥಿತಿ ಉಂಟಾಗಿ ವ್ಯಾಕ್ಸಿನ್‌ಗಳನ್ನು ಕೊಡುವುದು ಕಷ್ಟವಾದಾಗ – ಮೂಗಿನ ಮೂಲಕ ಹಾಕುವ ವ್ಯಾಕ್ಸಿನ್ ಅನ್ನು ಕಂಡು ಹಿಡಿದು ವೈದ್ಯಕೀಯ ಜಗತ್ತಿಗೆ ಕಾಣಿಕೆ ನೀಡಿದ ದೇಶ ಕ್ಯೂಬಾ. ಮಾತೃ ಮರಣ ತಡೆ, ಶಿಶು ಮರಣ ತಡೆ ಎಲ್ಲದರಲ್ಲೂ ಅಮೆರಿಕ, ಯೂರೋಪ್‌ಗಳಿಗೆ ಸಮನಾದ ಸಾಧನೆಯನ್ನು ಕ್ಯೂಬಾ ಮಾಡಿದೆ ಎಂದು ಹೇಳಿದರು.
ಸಿ.ಪಿ.ಐ.(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಡಾ. ಕೆ. ಪ್ರಕಾಶ್ ಮಾತನಾಡಿ ಫಿಡೆಲ್ 25 ಸಾವಿರ ಎಕರೆ ಭೂಮಿ ಇದ್ದ ಒಬ್ಬ ದೊಡ್ಡ ಜಮೀನ್ದಾರನ ಮಗ, ಆದರೆ ಅವರು ಭೂಮಿ ಇಲ್ಲದವರ ಪರವಾಗಿ, ಅಮೆರಿಕದ 2-3 ಕಂಪನಿಗಳೇ ಕ್ಯೂಬಾದ ಭೂಮಿಯನ್ನು ಕಬಳಿಸಿಕೊಂಡಿರುವ ಪರಿಸ್ಥಿತಿಯ ವಿರುದ್ಧ ಒಬ್ಬ ಬಂಡಾಯಗಾರನಾಗಿ ಹೋರಾಟ ಮಾಡಿದರು. ಕ್ರಾಂತಿಗೆ ಮುಂಚೆ ಕ್ಯೂಬಾದ ಕಬ್ಬಿನ ಗದ್ದೆ ಹಾಗೂ ತೋಟದ ಕಾರ್ಮಿಕರು ಎಂದರೆ ಅಫ್ರಿಕಾದಿಂದ ಎಳೆದು ತರಲಾದ ಕರಿಯ ಗುಲಾಮರು. ಅವರನ್ನು ಅತ್ಯಂತ ವಿಪರೀತವಾಗಿ ಶೋಷಣೆ ಮಾಡಲಾಗುತ್ತಿತ್ತು. ಕ್ಯೂಬಾ ಕ್ರಾಂತಿ ಈ ಶೋಷಣೆಯನ್ನು ಕೊನೆಗೊಳಿಸಿತು. ಕ್ಯೂಬಾದ ಜೊತೆಗೆ ವ್ಯಾಪಾರ ವ್ಯವಹಾರ ಮಾಡುವ ಯಾವ ದೇಶಗಳೊಂದಿಗೂ ತಾನು ವ್ಯಾಪಾರ ವ್ಯವಹಾರ ಮಾಡುವುದಿಲ್ಲ, ದಿಗ್ಬಂಧನ ವಿಧಿಸುತ್ತೇನೆ ಎನ್ನುವ ಅಮೆರಿಕದ ಧೋರಣೆ ಬಹಳ ಕ್ರೂರವಾಗಿದ್ದು, ಈಗಿನ ಅಮೆರಿಕದ ಅಧ್ಯಕ್ಷ ಟ್ರಂಪ್ ಧೋರಣೆ ಸಹ ಭಾರತಕ್ಕೆ ಮತ್ತು ಜಗತ್ತಿಗೆ ಮಾರಕವಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ, ಫಿಡೆಲ್ ಕ್ಯಾಸ್ಟ್ರೋ ಅವರೊಂದಿಗೆ ಕ್ಯೂಬಾದ ನೆಲದಲ್ಲಿ ನಡೆದಾಡಿದ ಹಿರಿಮೆ ಹೊಂದಿರುವ ಇ.ಪಿ. ಮೆನನ್ ಫಿಡೆಲ್ ಕ್ಯಾಸ್ಟ್ರೋ ಕುರಿತ ಶುಭಾಶಯ ಪತ್ರಗಳ ಬಿಡುಗಡೆ ಮಾಡಿದರು. ಕ್ಯೂಬಾ ಜನರ ಜಾಗೃತಿಯ ಕುರಿತು ಬಹುಮತವಿರುವ ಅಭಿಪ್ರಾಯಕ್ಕೆ ರಾಜನ ಶಕ್ತಿಗಿಂತ ಹೆಚ್ಚು ಬಲವಿದೆ. ಅನೇಕ ನೂಲುಗಳಿಂದ ಹೆಣೆದ ಹಗ್ಗ ಸಿಂಹವನ್ನು ಕಟ್ಟಿ ಹಾಕುತ್ತದೆ ಎಂದು ಹೇಳಿದ ಇ.ಪಿ. ಮೆನನ್ ಅವರು ತಾವು ೩೦ ವರ್ಷದ ಯುವಕರಾಗಿದ್ದಾಗ ಫಿಡೆಲ್ ಕ್ಯಾಸ್ಟ್ರೋ ಅವರ ಜೊತೆ ಕ್ಯೂಬಾದ ಪರ್ವತಗಳನ್ನು ಹತ್ತಿದ ಘಟನಾವಳಿಗಳನ್ನು ನೆನಪಿಸಿಕೊಂಡರು. ಬೆಟ್ಟದ ಮೇಲೆ ಮರದ ನೆರಳಲ್ಲಿ ಕುಳಿತು ಏಷ್ಯಾದ ಯುವಜನರೊಡನೆ ಚರ್ಚಿಸಿದ ಫಿಡೆಲ್, ನಮ್ಮ ಸಲಹೆಯನ್ನು ಕೇಳಿ, ಆ ಸಲಹೆಯಂತೆ ಆಗ ಚೀನಾದಿಂದ ಕ್ಯೂಬಾಕ್ಕೆ ಬರುತ್ತಿದ್ದ ೧೫,೦೦೦ ಟನ್ ಅಕ್ಕಿಯನ್ನು, ಅಮೆರಿಕದ ಘೋರ ಆಕ್ರಮಣವನ್ನು ಎದುರಿಸಿ ಹೋರಾಡುತ್ತಿದ್ದ ವಿಯೆಟ್ನಾಮ್ ದೇಶಕ್ಕೆ ಕಳಿಸುವ ತೀರ್ಮಾನ ಕೈಗೊಂಡರು. ಅದನ್ನು 25 ಸಾವಿರ ಜನರಿದ್ದ ಸಭೆಯಲ್ಲಿ ಘೋಷಿಸಿದ್ದರ ಕುರಿತು ಮೆನನ್ ವಿವರಿಸಿದರು.
ಕ್ಯೂಬಾದ ಜೊತೆಗೆ ವ್ಯಾಪಾರ-ವ್ಯವಹಾರ ಮಾಡುವ ಯಾವ ದೇಶಗಳೊಂದಿಗೂ ತಾನು ವ್ಯಾಪಾರ ವ್ಯವಹಾರ ಮಾಡುವುದಿಲ್ಲ, ದಿಗ್ಬಂಧನ ವಿಧಿಸುತ್ತೇನೆ ಎನ್ನುವ ಅಮೆರಿಕದ ಧೋರಣೆ ಬಹಳ ಕ್ರೂರವಾಗಿದ್ದು, ಹೆಲ್ಸ್- -ಬರ್ಟ್‌ನ್ ಕಾಯ್ದೆ, ಟೋರಿ ಸೆಲ್ಲಿ ಕಾಯ್ದೆ ಮುಂತಾದ ಕಾಯ್ದೆಗಳ ಮೂಲಕ ಕ್ಯೂಬಾದಲ್ಲಿ ಆಂತರಿಕ ದಂಗೆ ಪ್ರಚೋದನೆ ಮಾಡಲು ಅಮೆರಿಕ ಪ್ರಯತ್ನಿಸುತ್ತಿದೆ. ಈಗಿನ ಅಮೆರಿಕದ ಅಧ್ಯಕ್ಷ ಟ್ರಂಪ್ ಧೋರಣೆ ಸಹ ಕ್ಯೂಬಾ, ಭಾರತ ಸೇರಿದಂತೆ ಮತ್ತು ಜಗತ್ತಿಗೆ ಮಾರಕವಾಗಿದೆ ಎಂದು ವಿವರಿಸಿದರು.
ಬೆಂಗಳೂರಿನ ಸುಬ್ಬಯ್ಯ ಸರ್ಕಲ್ ಸಮೀಪದ ‘ಸೌಹಾರ್ದ’ದಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ನ ರಾಜ್ಯ ಅಧ್ಯಕ್ಷೆ ಲವಿತ್ರ ಆರಂಭದಲ್ಲಿ ಸ್ವಾಗತ ಕೋರಿದರು. ಎಸ್.ಎಫ್.ಐ. ರಾಜ್ಯ ಕಾರ್ಯದರ್ಶಿ ಟಿ.ಎಸ್. ವಿಜಯ್ ಕುಮಾರ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಸೌಹಾರ್ದ ಕರ್ನಾಟಕದ ಆರ್. ರಾಮಕೃಷ್ಣ ವಂದನಾರ್ಪಣೆ ಸಲ್ಲಿಸಿದರು.
ಇದನ್ನೂ ನೋಡಿ: ಪುಷ್ಪಗಳಲ್ಲಿ ಅರಳಲಿದ ‘ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ’Janashakthi Media
