ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳಿಂದ ಅವಘಡಗಳು ಹೆಚ್ಚಾಗುತ್ತಿದ್ದೂ, ನವೆಂಬರ್ 3ರೊಳಗೆ ಗುಂಡಿ ಮುಚ್ಚಲು ಆದೇಶ ನೀಡಲಾಗಿತ್ತು ಆದರೆ ಇದೀಗ ರಸ್ತೆ ಗುಂಡಿ ಮುಚ್ಚಲು ಸಿಎಂ, ಡಿಸಿಎಂ ನೀಡಿದ್ದ ಡೆಡ್ಲೈನ್ ನವೆಂಬರ್ 10ಕ್ಕೆ ವಿಸ್ತರಣೆಯಾಗಿದೆ.
ಗ್ರೇಟರ್ ಬೆಂಗಳೂರು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಕೂಡ ನವೆಂಬರ್ 3ರೊಳಗೆ ನಗರದ ರಸ್ತೆ ಗುಂಡಿಗಳ ಮುಚ್ಚಲು ಆದೇಶ ನೀಡಿದ್ದರು. ಆದರೆ ಬಹುತೇಕ ಬೆಂಗಳೂರಿನ ರಸ್ತೆ ಗುಂಡಿಗಳು ಹಾಗೇ ಇದೆ. ಗಡುವು ಮುಗಿದರೂ ಗುಂಡಿಗಳು ಮುಚ್ಚಿಲ್ಲ. ಹೀಗಾಗಿ ಮಹೇಶ್ವರ್ ರಾವ್ ಕೊನೆಗೆ ತಮ್ಮ ಡೆಡ್‌ಲೈನ್ ಮುಂದೂಡಿದ್ದಾರೆ. ಬೆಂಗಳೂರು
ಇದನ್ನೂ ಓದಿ: ಗ್ರಾಮಗಳಿಗೆ ಪ್ರವೇಶ ನಿರಾಕರಿಸುವ ಫಲಕ ಹಾಕುವುದು ಸಂವಿಧಾನಬಾಹಿರವಲ್ಲ: ಹೈಕೋರ್ಟ್
ನವೆಂಬರ್ 10ರೊಳಗೆ ಎಲ್ಲಾ ಗುಂಡಿ ಮುಚ್ಚುವ ಹೊಸ ಆದೇಶ ನೀಡಲಾಗಿದೆ.ಜಿಬಿಎ ಆಯುಕ್ತರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಹೊಸ ಡೆಡ್ ಲೈನ್ ನೀಡಿಲಾಗಿದೆ. ಬೆಂಗಳೂರು
ನವೆಂಬರ್ 10ರ ಒಳಗೆ ಮುಖ್ಯ ರಸ್ತೆ, ಉಪ ಮುಖ್ಯ ರಸ್ತೆ ಹಾಗೂ ವಾರ್ಡ್ ರಸ್ತೆ ಗುಂಡಿ ಮುಚ್ಚಲು ಸೂಚನೆ ನೀಡಲಾಗಿದೆ. ಆದರೆ ನವೆಂಬರ್ 3ರ ಗಡುವು ಪಾಲಿಸದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಇದೀಗ ನವೆಂಬರ್ 10ರ ಗಡುವು ಪಾಲಿಸುತ್ತಾರ ಅನ್ನೋ ಪ್ರಶ್ನೆ ಎದುರಾಗಿದೆ.
ಗುಂಡಿ ಮುಚ್ಚದ ಗುತ್ತಿಗೆದಾರರಿಗೆ ದಂಡ
ರಸ್ತೆ ಗುಂಡಿ ಮುಚ್ಚಲು ಒಪ್ಪದ ಗುತ್ತಿಗೆದಾರರಿಗೆ ದಂಡ ವಿಧಿಸಲು ಸೂಚನೆ ನೀಡಲಾಗಿದೆ. ಜಿಬಿಎ ವ್ಯಾಪ್ತಿಯ ಐದು ಪಾಲಿಕೆ ಆಯುಕ್ತರು, ಅಧಿಕಾರಿಗಳ ಸಭೆಯಲ್ಲಿ ಮುಖ್ಯ ಆಯಕ್ತ ಮಹೇಶ್ವರ ರಾವ್ ಸೂಚನೆ ನೀಡಿದ್ದಾರೆ. ಬೆಂಗಳೂರು ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ 44 ಸಿಸಿ ರೋಡ್ ಕಾಮಗಾರಿಗಳ ಪ್ರಸ್ತಾಪವಿದೆ. ಆ ರಸ್ತೆಗಳಲ್ಲಿನ ಗುಂಡಿ ಮುಚ್ಚಲು ಗುತ್ತಿಗೆದಾರರು ಕ್ರಮ ವಹಿಸುತ್ತಿಲ್ಲ ಎಂದು ಕೇಂದ್ರ ಪಾಲಿಕೆ ಆಯುಕ್ತರು ಸಭೆಯ ಗಮನಕ್ಕೆ ತಂದಿದ್ದಾರೆ. ರಸ್ತೆ ಗುಂಡಿ ಮುಚ್ಚಲು ಒಪ್ಪದ ಗುತ್ತಿಗೆದಾರರ ವಿರುದ್ಧ ದಂಡ ವಿಧಿಸಿ, ಅವರ ಬಿಲ್‌ನಲ್ಲಿ ದಂಡ ವಸೂಲು ಮಾಡಲು ಮುಖ್ಯ ಆಯುಕ್ತರ ಆದೇಶ ನೀಡಿದ್ದಾರೆ.
ರಸ್ತೆ ಅಗೆಯುವವರ ವಿರುದ್ದ ಕ್ರಮ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ರಸ್ತೆ ಅಗೆಯುವವರ ವಿರುದ್ದ ಕಠಿಣ ಕ್ರಮಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಹಲವರು ರಸ್ತೆ ಅಗೆಯಲು ಅನುಮತಿ ಪಡೆಯುತ್ತಿಲ್ಲ. ತಮಗೆ ಬೇಕಾದಲ್ಲಿ ರಸ್ತೆ ಅಗೆದು ಹಾಳು ಮಾಡುತ್ತಿದ್ದಾರೆ. ರಸ್ತೆ ಅಗೆಯುವಾಗ ಅನುಮತಿ ಪಡೆಯಲು ಸಾರ್ವಜನಿಕರು, ಗುತ್ತಿಗೆದಾರರು ಮರೆಯುತ್ತಿದ್ದಾರೆ. ಕೂಡಲೇ ರಸ್ತೆ ಕತ್ತರಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾಚ್ ಸೂಚನೆ ನೀಡಿದ್ದಾರೆ.
ಮಳೆಗಾಲದಲ್ಲಿ ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿದ್ದು, ಇವುಗಳನ್ನು ದುರಸ್ತಿಗೊಳಿಸಿ, ರಸ್ತೆಗಳನ್ನು ಸಂಚಾರ ಯೋಗ್ಯವಾಗಿಸಲು ಒಂದು ತಿಂಗಳ ಕಾಲಾವಕಾಶವನ್ನು ಸಿಎಂ ನೀಡಿದ್ದರು. ಪಣತ್ತೂರು ಟಿ ಕ್ರಾಸ್ ಬಳಿ ರಸ್ತೆಯುದ್ದಕ್ಕೂ ಕಟ್ಟಡ ನಿರ್ಮಾಣದ ತ್ಯಾಜ್ಯ, ಸಿಸಿಟಿವಿ ಅಳವಡಿಸಿ ಕ್ರಮ ಕೈಗೊಳ್ಳಲು ಮತ್ತು ಬಿಬಿಎಂಪಿ ಮಾರ್ಷಲ್ ಗಳನ್ನು ಕರ್ತವ್ಯಕ್ಕೆ ನಿಯೋಜಿಸಿ ತ್ಯಾಜ್ಯ ಸುರಿಯುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಳದಲ್ಲಿದ್ದ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಮತ್ತು ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದ್ದರು.
ಇದನ್ನೂ ನೋಡಿ: ಶಿಕ್ಷಣ ಇಲ್ಲದ ಪ್ರಜಾಪ್ರಭುತ್ವದಿಂದ ಸಮಾನತೆ ಅಸಾಧ್ಯ: ಕಿರಣ್ ಗಾಜನೂರು Janashakthi Media
