ಬಿಹಾರ: ಕಾಲೇಜಿನ ಕ್ಯಾಂಟಿನ್‌ವೊಂದರ ಆಹಾರದಲ್ಲಿ ಸತ್ತ ಹಾವು ಪ್ರತ್ಯಕ್ಷವಾಗಿದೆ. ಈ ಸತ್ತ ಹಾವಿನ ಆಹಾರ ಸೇವನೆಯಿಂದ ಸುಮಾರು 15 ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಕಾಲೇಜು
ಬಿಹಾರದ ಬಂಕಾದಲ್ಲಿರುವ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜು ಕ್ಯಾಂಟೀನ್‌ನಲ್ಲಿ ನೀಡಲಾಗಿದ್ದ ಆಹಾರದಲ್ಲಿ ಸತ್ತ ಹಾವು ಕಂಡುಬಂದಿದೆ ಎಂದು ಆರೋಪಿಸಿದ್ದಾರೆ. ವಿದ್ಯಾರ್ಥಿಗಳ ಪ್ರಕಾರ, ಕನಿಷ್ಠ 10-15 ಜನರು ಕಲುಷಿತ ಆಹಾರವನ್ನು ಸೇವಿಸಿದ ನಂತರ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗುರುವಾರ ರಾತ್ರಿ ಕ್ಯಾಂಟೀನ್‌ನಿಂದ ಆಹಾರ ಸೇವಿಸಿದ ನಂತರ ವಾಕರಿಕೆ ಮತ್ತು ವಾಂತಿಯಂತಹ ಲಕ್ಷಣಗಳು ಕಾಣಿಸಿಕೊಂಡವು. ಬಳಿಕ ಖಾಸಗಿ ಮೆಸ್ ನವರು ನೀಡಿದ್ದ ಆಹಾರದಲ್ಲಿ ಪುಟ್ಟ ಹಾವು ಪತ್ತೆಯಾಗಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ವಿದ್ಯಾರ್ಥಿಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ನಂತರ ಚಿಕಿತ್ಸೆಪಡೆದವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.
ಇದನ್ನು ಓದಿ : ಪೂರ್ವ ಪ್ರಾಥಮಿಕ ಶಿಕ್ಷಣ ಅಂಗನವಾಡಿಗಳಲ್ಲಿ ನಡೆಯಲಿ – ಸಿಪಿಐಎಂ ಆಗ್ರಹ
ವಿದ್ಯಾರ್ಥಿಗಳ ಪ್ರಕಾರ ಆಹಾರದ ಗುಣಮಟ್ಟದ ಬಗ್ಗೆ ಈಗಾಗಲೇ ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದ್ದರೂ ಪರಿಸ್ಥಿತಿ ಹಾಗೆಯೇ ಇತ್ತು. ಘಟನೆಯ ನಂತರ ಬಂಕಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಂಶುಲ್ ಕುಮಾರ್, ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ), ಮತ್ತು ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ಈ ವಿಷಯದ ಬಗ್ಗೆ ತನಿಖೆ ನಡೆಸಲು ಕಾಲೇಜಿಗೆ ಭೇಟಿ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದ್ದು, ಮೆಸ್ ಮಾಲೀಕರಿಗೆ ದಂಡ ವಿಧಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ತಿಳಿಸಿದ್ದಾರೆ.
“ವಿದ್ಯಾರ್ಥಿಗಳಿಗೆ ವಿವರಿಸಿದ ನಂತರ, ಆಹಾರವನ್ನು ಮತ್ತೆ ತಯಾರಿಸಲಾಯಿತು. ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳು ಎಲ್ಲರೂ ಒಟ್ಟಿಗೆ ಊಟ ಮಾಡಿದರು” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನು ನೋಡಿ : ನೀಟ್ “ಕಾಸಿದ್ದವರ ಮೆಡಿಕಲ್ “ಮೀಸಲಾತಿಯೆ? ನೀಟಾಗದ ಪರೀಕ್ಷೆಯ ಹೊಣೆ ಹೊರುವುದೆ ಕೇಂದ್ರ ಸರ್ಕಾರ? J#neet2024