6 ರಿಂದ 12 ವರ್ಷದ ಮಕ್ಕಳಿಗೆ ಕೋವಾಕ್ಸಿನ್ ಲಸಿಕೆ

ನವದೆಹಲಿ: ಭಾರತದಲ್ಲಿ ಕೋವಿಡ್‌-19ರ 4ನೇ ಅಲೆಯ ಅಪಾಯದ ಭೀತಿಯ ನಡುವೆ, ಔಷಧ ನಿಯಂತ್ರಕ ಮಹಾನಿರ್ದೇಶಕರು 6 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಭಾರತ್ ಬಯೋಟೆಕ್‍ನ ಕೋವಾಕ್ಸಿನ್ ಲಸಿಕೆಯನ್ನು ನಿರ್ಬಂಧಿತ ತುರ್ತು ಬಳಕೆಗೆ ಅಂಗೀಕಾರ ನೀಡಿದೆ.

2021ರ ಡಿಸೆಂಬರ್‌ನಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ತುರ್ತು ಬಳಕೆಗಾಗಿ ಕೋವಾಕ್ಸಿನ್ ನೀಡಲು ಕೇಂದ್ರ ಸರ್ಕಾರದ ಸಮಿತಿ ಅನುಮೋದಿಸಿತು. ಈಗ 6ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ಹಾಕಲು ಅನುಮತಿ ನೀಡಲಾಗಿದೆ.

ಕೇಂದ್ರ ಔಷಧ ನಿಯಂತ್ರಣ ಮಂಡಳಿ (ಡಿಸಿಜಿಐ) ಔಷಧ ನಿಯಂತ್ರಕ ಮಹಾನಿರ್ದೇಶಕರ ವಿಷಯ ತಜ್ಞರ ಸಮಿತಿ ಏಪ್ರಿಲ್ 21ರಂದು 2-12 ವರ್ಷ ವಯಸ್ಸಿನ ಮಕ್ಕಳಿಗೆ ಕೋವಾಕ್ಸಿನ್ ಲಸಿಕೆ ನೀಡಲು ಬಯಸಿದ್ದ ಭಾರತ್ ಬಯೋಟೆಕ್ ಸಂಸ್ಥೆಯಿಂದ ಹೆಚ್ಚುವರಿ ಮಾಹಿತಿ ಒದಗಿಸುವಂತೆ ಕೇಳಿತ್ತು.

ಇದೇ ಸಂದರ್ಭದಲ್ಲಿ ಡಿಸಿಜಿಐ 5-12 ವರ್ಷ ವಯಸ್ಸಿನ ಮಕ್ಕಳಿಗೆ ಕಾರ್ಬೆವಾಕ್ಸ್‌ಗೆ ತುರ್ತು ಬಳಕೆಯ ಅಧಿಕಾರವನ್ನು ಸಹ ನೀಡಿದ್ದು, ಇದಲ್ಲದೆ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಜೈಡಸ್ ಕ್ಯಾಡಿಲಾ ಲಸಿಕೆಗೆ ತುರ್ತು ಬಳಕೆಯ ಅಧಿಕಾರ ನೀಡಿದೆ.

6-12 ವರ್ಷ ವಯಸ್ಸಿನ ಮಕ್ಕಳಿಗೆ ಭಾರತ್ ಬಯೋಟೆಕ್‌ನ ಕೋವಾಕ್ಸಿನ್‌ಗೆ ಡಿಸಿಜಿಐ ನಿರ್ಬಂಧಿತ ತುರ್ತು ಬಳಕೆಯ ಅಧಿಕಾರವನ್ನು ನೀಡಿದ್ದು, ಸುರಕ್ಷತಾ ಡೇಟಾವನ್ನು ಸಲ್ಲಿಸುವಂತೆ ಕೇಳಿದೆ. ಪ್ರತಿಕೂಲ ಪರಿಣಾಮಗಳ ದತ್ತಾಂಶವನ್ನು ಒಳಗೊಂಡಂತೆ ಸುರಕ್ಷತಾ ದತ್ತಾಂಶವನ್ನು ಸಲ್ಲಿಸಲು ಭಾರತ್ ಬಯೋಟೆಕ್ ಸೂಚಿಸಿದ್ದು, ಮೊದಲ ಎರಡು ತಿಂಗಳು ಪ್ರತಿ 15 ದಿನಗಳಿಗೊಮ್ಮೆ ಮತ್ತು ನಂತರ ಐದು ತಿಂಗಳವರೆಗೆ ತಿಂಗಳ ದತ್ತಾಂಶವನ್ನು ನೀಡುವಂತೆ ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *