ದಾವಣಗೆರೆ: ದಾವಣಗೆರೆ ಪಾಲಿಕೆ ಜಾಗದಲ್ಲಿ ಶಾಲಾ ಕಟ್ಟಡ ನಿರ್ಮಾಣ ಮಾಡಿರುವ ಆರೋಪ ಹಿನ್ನೆಲೆಯಲ್ಲಿ ಪಾಲಿಕೆ ಸಿಬ್ಬಂದಿಗಳು ನಗರದ ಎಸ್ ಓ ಜಿ ಕಾಲೋನಿಯಲ್ಲಿರುವ ಜೀವಿಎಸ್ ಖಾಸಗಿ ಶಾಲೆಯಲ್ಲಿ ಪಾಠ ಕೇಳುತ್ತಿದ್ದ ಮಕ್ಕಳನ್ನು ಹೊರಗೆ ಕಳುಹಿಸಿ ತೆರವುಗೊಳಿಸಿರುವ ಘಟನೆ ವರದಿಯಾಗಿದೆ.
ದಾವಣಗೆರೆ ಮಹಾನಗರ ಪಾಲಿಕೆಯ ಕಮಿಷನರ್ ರೇಣುಕಾ ಹಾಗೂ ತಹಶೀಲ್ದಾರ್ ಅಶ್ವತ್ ಸಮುಖದಲ್ಲಿ ಶಾಲೆಯನ್ನು ತೆರವುಗೊಳಿಸಲಾಯಿತು. ಖಾಸಗಿ ವ್ಯಕ್ತಿಯಿಂದ ಜಮೀನು ಬಾಡಿಗೆ ಪಡೆದು ಪ್ರಭು ಶಾಲೆ ಶಾಲೆ ನಡೆಸುತ್ತಿದ್ದರು. ಪಾಲಿಕೆಗೆ ಸೇರಿದ ಜಾಗದಲ್ಲಿ ಶಾಲೆ ಇದೆ ಎಂದು ಅಧಿಕಾರಿಗಳ ವಾದವಾಗಿತ್ತು. ಶಾಲೆ ಸ್ಥಳಾಂತರ ಮಾಡಲು ಪ್ರಭು ಸಮಯಾವಕಾಶ ಕೇಳಿದರು. ಬೆಳಿಗ್ಗೆ ಕಾಲಾವಕಾಶ ಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು.
ಇದನ್ನೂ ಓದಿ: 2 ಗುಂಪುಗಳ ನಡುವೆ ಘರ್ಷಣೆ: ಕಾಂಗ್ರೆಸ್ ಕಾರ್ಯಕರ್ತನಿಗೆ ಗುಂಡು ತಗುಲಿ ಸಾವು
ಇದೀಗ ಪೊಲೀಸರ ಸಮ್ಮುಖದಲ್ಲಿ ಪಾಲಿಗೆ ಶಾಲೆ ತೆರವುಗೊಳಿಸಿದ್ದಾರೆ. ಕಳೆದ 15 ವರ್ಷಗಳಿಂದ ಜೀವಿ ಎಸ್ ಖಾಸಗಿ ಶಾಲೆ ಅಲ್ಲಿಯೆ ನಡೆಸಿಕೊಂಡು ಬಂದಿದ್ದರು. ಮಕ್ಕಳನ್ನು ಹೊರಗೆ ಹಾಕುವ ವೇಳೆ ಮಕ್ಕಳು ಕಣ್ಣೀರಿಡುತ್ತಾ, ಶಾಲೆಯಿಂದ ಹೊರಹೋಗುವ ದೃಶ್ಯ ಮನ ಕಲಕುವಂತಿತ್ತು. ಪಾಲಿಕೆ ಸಿಬ್ಬಂದಿಗಳ ಈ ಅಮಾನವೀಯ ವರ್ತನೆಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ನೋಡಿ: KBL ಕ್ಯಾಂಟೀನ್ | ಇಲ್ಲಿ 1ರೂ ಗೆ ಹೊಟ್ಟೆ ತುಂಬುವಷ್ಟು ಟಿಫನ್ ಸಿಗುತ್ತೆ! Janashakthi Media
