ದಾವಣಗೆರೆ: ಕೂಲಿ ಕೆಲಸದ 10 ಮಹಿಳೆಯರನ್ನು ವಿಮಾನದಲ್ಲಿ ಗೋವಾ ಟೂರ್ ಮಾಡಿಸಿದ ರೈತ!

ದಾವಣಗೆರೆ: ದಾವಣಗೆರೆ ಸಮೀಪದ ಹರಪನಹಳ್ಳಿ ತಾಲ್ಲೂಕಿನ ಶಿರಗನಹಳ್ಳಿ ಗ್ರಾಮದ ರೈತ ವಿಶ್ವನಾಥ್, ತಮ್ಮ 10 ಮಹಿಳಾ ಕೃಷಿ ಕಾರ್ಮಿಕರನ್ನು ಶಿವಮೊಗ್ಗದಿಂದ ಗೋವಾದ ದಾಬೋಲಿಮ್‌ಗೆ ವಿಮಾನದಲ್ಲಿ ಪ್ರವಾಸಿ ಸ್ಥಳಗಳಿಗೆ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಕ್ಕಾಗಿ ಎಲ್ಲರ ಪ್ರಶಂಸೆ ಪಡೆಯುತ್ತಿದ್ದಾರೆ.

ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ಶಿರಗನಹಳ್ಳಿ ರೈತ ವಿಶ್ವನಾಥ್, ತಮ್ಮ ಜಮೀನಿಗೆ ಖಾಯಂ ಆಗಿ ಕೂಲಿ ಕೆಲಸಕ್ಕೆ ಬರುತ್ತಿದ್ದ ಮಹಿಳಾ ಕಾರ್ಮಿಕರಿಗೆ ಏನಾದರೂ ಒಂದು ಜೀವನಪೂರ್ತಿ ಮರೆಯಲಾಗದ ಉಡುಗೊರೆ ಕೊಡಬೇಕು ಎಂದುಕೊಂಡಿದ್ದರು. ಅದರಂತೆ ಎಂದೂ ವಿಮಾನ ಹತ್ತದ ಮಹಿಳಾ ಕಾರ್ಮಿಕರಿಗೆ ವಿಮಾನಯಾನ ಮಾಡಿಸಿದ್ದಾರೆ. ಈ ಮೂಲಕ ಅವರು ಜೀವನ ಪರ್ಯ೦ತ ನೆನಪಿನಲ್ಲಿಡುವಂತೆ ಮಾಡಿದ್ದಾರೆ.

ಇದನ್ನೂ ಓದಿ:ಬಿಬಿಸಿ ಸುದ್ದಿ ಸಂಸ್ಥೆಗೆ ಭಾರೀ ದಂಡ – 3.44 ಕೋಟಿ ದಂಡ ವಿಧಿಸಿದ ಜಾರಿ ನಿರ್ದೇಶನಾಲಯ!

ರಾಜ್ಯ ಗುಪ್ತಚರ ಇಲಾಖೆಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಯನ್ನು ತೊರೆದ ನಂತರ, ವಿಶ್ವನಾಥ್ ತಮ್ಮ 14 ಎಕರೆ ಅಡಿಕೆ ತೋಟದಲ್ಲಿ ಪೂರ್ಣ ಸಮಯದ ಕೃಷಿಗೆ ತಿರುಗಿದರು. ತಮ್ಮ ಕಾರ್ಮಿಕರನ್ನು, ತಮ್ಮ ಜಮೀನಿನಲ್ಲಿರುವ ಎಲ್ಲಾ ಖಾಯಂ ಉದ್ಯೋಗಿಗಳನ್ನು ಸಂತೋಷವಾಗಿಡಲು, ವಿಮಾನದಲ್ಲಿ ಹಾರುವ ಅವರ ಕನಸನ್ನು ನನಸಾಗಿಸಲು ಅವರು ನಿರ್ಧರಿಸಿದರು.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ವಿಶ್ವನಾಥ್, ಶಿರಗನಹಳ್ಳಿಯಲ್ಲಿರುವ ನನ್ನ ಜಮೀನಿನಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರ ಕನಸುಗಳನ್ನು ನನಸಾಗಿಸುವ ತೃಪ್ತಿ ನನಗಿದೆ. ಅವರಿಗೆ ವಿಮಾನದಲ್ಲಿ ಹಾರುವ ಕನಸು ಇತ್ತು, ಮತ್ತು ನಾನು ಅದನ್ನು ನನಸಾಗಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಕನ್ನಡ ಅಲ್ಲ, ಮರಾಠಿ ಮಾತಾಡು; KSRTC ಕಂಡಕ್ಟರ್ ಗೆ ಥಳಿಸಿದ ಯುವಕರು, ನಿರ್ವಾಹಕ ಕಣ್ಣೀರು!

Donate Janashakthi Media

Leave a Reply

Your email address will not be published. Required fields are marked *